Advertisement

52.37 ಕೋಟಿಯಷ್ಟು ಲಸಿಕೆಗಳನ್ನು ರಾಜ್ಯ,ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿದೆ : ಕೇಂದ್ರ

01:26 PM Aug 08, 2021 | Team Udayavani |

ನವ ದೆಹಲಿ : ದೇಶದಾದ್ಯಂತ ಕೋವಿಡ್ ಲಸಿಕೆಗಳ ಕೊರತೆ ಇದೆ ಎಂದು ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ದೇಶದಾದ್ಯಂತ ಒಟ್ಟು 52.37 ಕೋಟಿಯಷ್ಟು ಕೋವಿಡ್ ಲಸಿಕೆಯ ಪ್ರಮಾಣವನ್ನು ದೇಶದ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯಕ್ಕನುಗುಣವಾಗಿ ಪೂರೈಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು(ಆದಿತ್ಯವಾರ, ಆಗಸ್ಟ್ 8) ಮಾಹಿತಿ ನೀಡಿದೆ.

Advertisement

8,99, 260 ಕೋವಿಡ್ ಲಸಿಕೆಗಳು ಇನ್ನು ದೇಶದ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತಗಳಿಗೆ ಪೂರೈಸುವುದಕ್ಕಾಗಿ ತಯಾರಾಗಿದೆ ಎಂದು ಕೂಡ ಸಚಿವಾಲಯ ಮಾಹಿತಿ ನಿಡಿದೆ.

ಇದನ್ನೂ ಓದಿ : ಕಳಸಾ-ಬಂಡೂರಿ ಅನುಷ್ಠಾನಕ್ಕೆ ಪ್ರಾಮಾಣಿಕ ಯತ್ನ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಹೇಳಿಕೆಯ ಪ್ರಕಾರ, ಲಸಿಕೆಯ ವ್ಯರ್ಥಗಳು ಸೇರಿದಂತೆ ಒಟ್ಟು ಬಳಕೆಯಾದ ಲಸಿಕೆಯ ಪ್ರಮಾಣ 50,32,77,942 ಡೋಸ್ ಆಗಿದೆ. “ಇದುವರೆಗೆ 52,37,50,890 ಲಸಿಕೆ ಪ್ರಮಾಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ , ಎಲ್ಲಾ ಮೂಲಗಳ ಮೂಲಕ ಮತ್ತು ಇನ್ನೂ 8,99,260 ಡೋಸ್‌ಗಳು ಪೂರೈಸುವುದಕ್ಕೆ ತಯಾರಿಯಲ್ಲಿದೆ, “ಎಂದು ಸಚಿವಾಲಯ ಹೇಳಿದೆ.

” 2,42,87,160 ಕ್ಕಿಂತ ಹೆಚ್ಚು ಲಸಿಕೆಗಳು ಕೋವಿಡ್ ಲಸಿಕೆ ಪ್ರಮಾಣಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಲಭ್ಯವಿವೆ ಎಂದು ಕೂಡ ಮಾಹಿತಿ ನೀಡಿದೆ.

Advertisement

ದೇಶಾದ್ಯಂತ ಕೋವಿಡ್ -19 ಲಸಿಕೆಯ ವೇಗವನ್ನು ಹೆಚ್ಚಿಸಲು ಮತ್ತು ವಿಸ್ತರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕೋವಿಡ್ -19 ಲಸಿಕೆಯ ಸಾರ್ವತ್ರಿಕೀಕರಣದ ಹೊಸ ಹಂತವು ಜೂನ್ 21 ರಂದು ಆರಂಭವಾಗಿದೆ. ಹೆಚ್ಚಿನ ಲಸಿಕೆಗಳ ಲಭ್ಯತೆಯ ಮೂಲಕ ಲಸಿಕೆ ಅಭಿಯಾನಕ್ಕೆ ವೇಗ ನೀಡಲಾಗಿದೆ.

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಕೇಂದ್ರವು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್ ಲಸಿಕೆಗಳನ್ನು ಒದಗಿಸುವ ಮೂಲಕ ಬೆಂಬಲಿಸುತ್ತಿದೆ. ಕೋವಿಡ್ 19 ಲಸಿಕೆ ಅಭಿಯಾನದ ಸಾರ್ವತ್ರೀಕರಣದ ಹೊಸ ಹಂತದಲ್ಲಿ, ಕೇಂದ್ರ ಸರ್ಕಾರವು ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದಿಸುವ ಲಸಿಕೆಗಳ 75 ಪ್ರತಿಶತವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಸುತ್ತಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ತಿರುಮಲದೊಡೆಯನಿಗೆ ‘ನವನೀತ ಸೇವೆ’ : ದೇಸಿ ಹಸುವಿನ ತಳಿಗಳನ್ನು ರಕ್ಷಿಸಲು ಟಿಟಿಡಿ ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next