Advertisement

ತೈಲ ಸಂಗ್ರಹಕ್ಕಾಗಿ ನೌಕೆ, ರೈಲುಗಳ ಹುಡುಕಾಟ

11:53 AM Apr 23, 2020 | Hari Prasad |

ಕೋವಿಡ್ ವೈರಸ್‌ ಜಗತ್ತಿನ ಮೇಲೆ ಯಾವ ಯಾವ ರೀತಿಯಲ್ಲಿ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ ಎನ್ನುವುದಕ್ಕೆ ತೈಲ ತುಂಬಿಸಿಡಲು ಉತ್ಪಾದಕ ರಾಷ್ಟ್ರಗಳು ಪಡುತ್ತಿರುವ ಹರಸಾಹಸವೇ ಸಾಕ್ಷಿ.

Advertisement

ನೆಲದ ಮೇಲಿರುವ ತೈಲ ತುಂಬಿಸುವ ಟ್ಯಾಂಕ್‌ಗಳೆಲ್ಲ ಸಂಪೂರ್ಣವಾಗಿ ಭರ್ತಿಯಾಗಿವೆ. ಇನ್ನು ಉಳಿದ ತೈಲವನ್ನು ಎಲ್ಲಿ ದಾಸ್ತಾನಿಡುವುದು ಎಂಬ ಚಿಂತೆ ಈ ದೇಶಗಳನ್ನು ಕಾಡಲಾರಂಭಿಸಿದ್ದು, ಈಗ ತೈಲ ಟ್ಯಾಂಕರ್‌ ನೌಕೆಗಳನ್ನು ಕಾಯ್ದಿರಿಸಿಕೊಂಡು ಅವುಗಳನ್ನು ಸಮುದ್ರದಲ್ಲಿ ತೇಲುವ ತೈಲ ದಾಸ್ತಾನಾಗಿ ಬಳಸಲು ನಿರ್ಧರಿಸಲಾಗಿದೆ.

ಕನಿಷ್ಠ 3 ಕೋಟಿ ಬ್ಯಾರೆಲ್‌ನಷ್ಟು ವೈಮಾನಿಕ ಇಂಧನ, ಗ್ಯಾಸೋಲಿನ್‌ ಮತ್ತು ಡೀಸೆಲ್‌ ಅನ್ನು ಈ ನೌಕೆಗಳಲ್ಲಿ ತುಂಬಿಸಿಡಲು ಸಿದ್ಧತೆ ನಡೆದಿದೆ. ನೌಕೆಗಳಷ್ಟೇ ಅಲ್ಲ, ರೈಲು ಬೋಗಿಗಳು, ನೆಲಗವಿ (ನೆಲದಡಿಯ ದೊಡ್ಡ ಗುಹೆ), ಪೈಪ್‌ಲೈನ್‌ಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ.

ಜಗತ್ತಿನಾದ್ಯಂತ ಎಲ್ಲ ದೇಶಗಳೂ ಕೋವಿಡ್ ಹಿನ್ನೆಲೆಯಲ್ಲಿ ನಿರ್ಬಂಧ ಹೇರಿರುವ ಕಾರಣ, ಜನರು ಮನೆಗಳಲ್ಲೇ ಬಂಧಿಗಳಾಗಿರೆ. ಹೀಗಾಗಿ, ತೈಲದ ಬೇಡಿಕೆ ಭಾರೀ ಪ್ರಮಾಣದಲ್ಲಿ ತಗ್ಗಿದೆ. ಹೀಗಾಗಿ ಹೆಚ್ಚುವರಿ ತೈಲವನ್ನು ಎಲ್ಲಿ ತುಂಬಿಸಿಡುವುದು ಎಂಬುದೇ ಈ ದೇಶಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ತೈಲ ದರ ಚೇತರಿಕೆ
ಇತಿಹಾಸದಲ್ಲೇ ಮೊದಲ ಬಾರಿಗೆ ಶೂನ್ಯಕ್ಕಿಂತಲೂ ಕೆಳಮಟ್ಟಕ್ಕಿಳಿದಿದ್ದ ಅಮೆರಿಕದ ಕಚ್ಚಾ ತೈಲ ದರ ಬುಧವಾರ ಸ್ವಲ್ಪಮಟ್ಟಿಗೆ ಏರಿಕೆ ಕಂಡಿದೆ. ವೆÓr… ಟೆಕ್ಸಾಸ್‌ ಇಂಟರ್‌ ಮೀಡಿಯೆಟ್‌ ದರ್ಜೆಯ ತೈಲ ದರ ಶೇ.10 ಏರಿಕೆಯಾಗಿದ್ದು, ಬ್ಯಾರೆಲ್‌ ಗೆ 12.68 ಡಾಲರ್‌ ಆಗಿದೆ. ಸೋಮವಾರ ಭಾರೀ ಕುಸಿತ ಕಂಡಿದ್ದ ತೈಲ ದರ ಮೈನಸ್‌ 40.32 ಡಾಲರ್‌ ಆಗಿತ್ತು.

Advertisement

ಹೇಗಿದೆ ಸ್ಥಿತಿ?

ಅಮೆರಿಕದಲ್ಲಿ ಪ್ರತಿ ದಿನದ ಬೇಡಿಕೆ 14.4 ದಶಲಕ್ಷ ಬ್ಯಾರೆಲ್‌ಗೆ ಕುಸಿದಿದೆ.

ಭಾರತದಲ್ಲಿ ಕಚ್ಚಾ ತೈಲದ ಬೇಡಿಕೆ ಶೇ.70ರಷ್ಟು ಕುಸಿದಿದೆ

ಯು.ಕೆ.ಯಲ್ಲಿ ಡೀಸೆಲ್‌ ಮಾರಾಟ ಶೇ.57ರಷ್ಟು ಕುಸಿತ. ಇಟಲಿ- ಚಿಲ್ಲರೆ ತೈಲ ಮಾರಾಟ ಶೇ.85ರಷ್ಟು ಕುಸಿತ

Advertisement

Udayavani is now on Telegram. Click here to join our channel and stay updated with the latest news.

Next