ಹೊಸಬೆಟ್ಟು: ಹೊಸಬೆಟ್ಟು ಕೋಡ್ದಬ್ಬು ದೈವಸ್ಥಾನದಲ್ಲಿ ಶನಿವಾರ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಮಲೇರಿಯಾ, ಡೆಂಗ್ಯೂ ರೋಗದ ಬಗ್ಗೆ ಜಾಗ್ರತೆ ವಹಿಸುವಂತೆ ಸೂಚಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಮಾತ್ರವಲ್ಲ ಇತರರಿಗೂ ಮಾಹಿತಿ ನೀಡಬೇಕು ಎಂದರು. ಮನಪಾ ವತಿಯಿಂದ ನಡೆಯುತ್ತಿರುವ ಉಚಿತ ಸೊಳ್ಳೆಪರದೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್-19 ಸೋಂಕಿನ ನಡುವೆ ಮಲೇರಿಯಾ, ಡೆಂಗ್ಯೂವನ್ನು ನಿರ್ಲಕ್ಷಿಸ ಬಾರದು. ಮಂಗಳೂರು ಮಹಾನಗರ ಪಾಲಿಕೆ ಉಚಿತವಾಗಿ ಸೊಳ್ಳೆ ಪರದೆ ವಿತರಿಸುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭ ಫಲಾನುಭವಿಗಳಿಗೆ ಸೊಳ್ಳೆ ಪರದೆ ವಿತರಿಸಿದರು. ಕೊಡಬ್ಬು ದೈವಸ್ಥಾನದ ಬುಟ್ಟಿಯೊಂದರಲ್ಲಿ ನೀರು ನಿಂತು ಉತ್ಪತ್ತಿಯಾದ ಲಾರ್ವಾವನ್ನು ಶಾಸಕರು ನಾಶಪಡಿಸಿದರು. ಸ್ಥಳೀಯ ಕಾರ್ಪೊರೇಟರ್ ವರುಣ್ ಚೌಟ, ವಿಟಲ ಸಾಲ್ಯಾನ್, ನವೀನ್ ಕುಲಾಲ್, ಚೇತನ್,
ಸಂದೇಶ್ ಇಡ್ಯಾ, ಭರತ್ ರಾಜ್ ಕೃಷ್ಣಾಪುರ ಹಾಗೂ ಆರೋಗ್ಯ ಇಲಾಖೆ, ಮನಪಾ ಅಧಿ ಕಾರಿಗಳು ಉಪಸ್ಥಿತರಿದ್ದರು.