Advertisement

ಇಟಲಿಯ ಲೊಂಬಾರ್ಡಿಗೆ ಕಂಟಕವಾದ ಕೋವಿಡ್‌!

01:14 PM May 31, 2020 | sudhir |

ರೋಮ್‌: ಇಟಲಿಯ ಪ್ರಮುಖ, ಶ್ರೀಮಂತ ನಗರ ಲೊಂಬಾರ್ಡಿ. ಕೋವಿಡ್‌-19ನಿಂದಾಗಿ ಜಗತ್ತಿನಲ್ಲೇ ಅತ್ಯಧಿಕ ಮಂದಿ ಪ್ರಜೆಗಳನ್ನು ಕಳೆದುಕೊಂಡಿದೆ. ಅದರಲ್ಲೂ ಈ ಶ್ರೀಮಂತ ನಗರದಲ್ಲಂತೂ ವೈರಸ್‌ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ.
ಲೊಂಬಾರ್ಡಿಗೆ ಕೋವಿಡ್‌ ಇಷ್ಟೊಂದು ಹಾನಿಮಾಡಲು ಏನು ಕಾರಣ ಎಂಬ ಪ್ರಶ್ನೆ ಎಲ್ಲರ ತಲೆಯಲ್ಲೂ ತಿರುಗುತ್ತಿದೆ. ಅದಕ್ಕೆ ನಿರ್ದಿಷ್ಟ ಕಾರಣಗಳು ಇನ್ನೂ ಸಿಕ್ಕಿಲ್ಲದವಾದರೂ ಹಲವು ವಿಚಾರಗಳು ವೈರಸ್‌ ವ್ಯಾಪಕವಾಗಿ ಹರಡಲು ಅಂಶಗಳ ಬಗ್ಗೆ ಹೇಳುತ್ತವೆ.

Advertisement

ಹಾಗೆ ನೋಡಿದರೆ ಕೋವಿಡ್‌-19 ರೋಗ ಲಕ್ಷಣವನ್ನು ಲೊಂಬಾರ್ಡಿಯ ವೈದ್ಯರು ಕಂಡದ್ದು ನಿನ್ನೆ ಮೊನ್ನೆಯಲ್ಲ! ಜನವರಿ 20ರ ವೇಳೆಗೇ ಅವರು ಅದನ್ನು ಕಂಡಿದ್ದರು. ಅಂದು ಇರ್ವಾನ್‌ ಮುಸ್ಸಿ ಎಂಬ ವೈದ್ಯರಲ್ಲಿಗೆ 64 ವರ್ಷದ ಮಹಿಳೆ ಕೋವಿಡ್‌-19 ರೀತಿಯ ರೋಗ ಲಕ್ಷಣದೊಂದಿಗೆ ಭೇಟಿ ಯಾಗಿದ್ದರು. ಅಲ್ಲದೆ ಆ ವೈದ್ಯರು ಇದೇ ರೀತಿಯ ರೋಗ ಲಕ್ಷಣ ಕೆಲವರಲ್ಲಿ ಇದ್ದುದಾಗಿ ಬೇರೆ ವೈದ್ಯ ಸ್ನೇಹಿತರು ಹೇಳಿದ್ದನ್ನೂ ದಾಖಲಿಸಿದ್ದಾರೆ. ಈ ಘಟನೆ ವರದಿಯಾಗಿದ್ದು, ಚೀನದಿಂದ ಬಂದ ಪ್ರವಾಸಿಗರೊಬ್ಬರಿಗೆ ಕೋವಿಡ್‌-19 ಖಚಿತ ಪಡುವ ಮೂರು ದಿನಗಳ ಮೊದಲು.

ಈ ರೋಗಕ್ಕೆ ವೈದ್ಯರು ಚಿಕಿತ್ಸೆ ನೀಡಿದರಾದರೂ ಅದು ಪ್ರಯೋಜನವಾಗಿರಲಿಲ್ಲ. ಬಳಿಕ ಫೆ.14ರಂದು ವೈದ್ಯ ಮುಸ್ಸಿ ಅವರು ಚಿಕಿತ್ಸೆ ನೀಡಿದ ರೋಗಿ ಆಸ್ಪತ್ರೆಗೆ ದಾಖಲಾಗಿದ್ದರು.

ವೈದ್ಯ ಮುಸ್ಸಿ ಅವರು ಹೇಳುವಂತೆ ಲೊಂಬಾರ್ಡಿಯಲ್ಲಿ ಮೊದಲ ಕೋವಿಡ್‌ ಪ್ರಕರಣ ಪತ್ತೆಯಾಗುವ ಮೊದಲೇ ಅದು ಹಬ್ಬಿತ್ತು. ಆರಂಭದಲ್ಲಿ ಆ ನಗರವೊಂದರಲ್ಲೇ 16 ಸಾವಿರ ಮಂದಿಗೆ ತಗುಲಿತ್ತು. ಇದರಿಂದಾಗಿ ಸುಮಾರು 3,838 ಮಂದಿ ಮೃತಪಟ್ಟಿದ್ದು, ಕಳೆದ ಗುರುವಾರ ಸರ್ವಾಧಿಕ 1,898 ಮಂದಿ ಮೃತಪಟ್ಟಿದ್ದಾರಂತೆ. ಸದ್ಯ ಅಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 87 ಸಾವಿರ ದಾಟಿದೆ.
ಲೊಂಬಾರ್ಡಿಯಲ್ಲಿ ಕೇಸು ಇಷ್ಟೊಂದು ಪ್ರಮಾಣದಲ್ಲಿ ಏರಲು ಕಾರಣ ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಚೀನೀಯರು ಭೇಟಿ ನೀಡುವುದು. ಉದ್ಯಮ ಸಂಬಂಧಿ, ಪ್ರವಾಸ ಎಂದು ಹೆಚ್ಚಿನ ಮಂದಿ ಚೀನೀಯರು ಲೊಂಬಾರ್ಡಿಗೆ ಭೇಟಿ ನೀಡುತ್ತಾರೆ. ಜತೆಗೆ ಚೀನದೊಂದಿಗೆ ಆ ನಗರಕ್ಕೆ ಹೆಚ್ಚಿನ ಸಂಪರ್ಕವಿದೆ. ಅಲ್ಲಿ ಜನ ಸಂಖ್ಯೆಯೂ ಹೆಚ್ಚು.

ಸ್ಥಳೀಯ ವೈದ್ಯರಾದ ಮಖೇಲ್‌ ಯೂಸ್ವೆಲ್ಲಿ ಎಂಬವರ ಪ್ರಕಾರ ಅಲ್ಲಿನ ರಾಜಕೀಯ ಮತ್ತು ಆರೋಗ್ಯ ಇಲಾಖೆಯ ತಪ್ಪು ಲೆಕ್ಕಾಚಾರಗಳಿಂದಾಗಿ ಪ್ರಕರಣಗಳ ಸಂಖ್ಯೆ ಏರಲು ಕಾರಣವಾಗಿದೆಯಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next