Advertisement

ವಾಯು ಮಾಲಿನ್ಯ ಕುಸಿದರೂ ಕಾಡುತ್ತಿದೆ ಓಜೋನ್‌ ಮಾಲಿನ್ಯ!

02:42 AM Jun 29, 2020 | Hari Prasad |

ಒಂದೆಡೆ ಕೋವಿಡ್ 19 ವೈರಸ್ ಕಾಡುತ್ತಿದ್ದು, ದೇಶದಲ್ಲಿ ದಿನೇ ದಿನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

Advertisement

ಈ ನಡುವೆ ಹೊಸ ಮಾಲಿನ್ಯದ ಅಪಾಯವೊಂದು ಎದುರಾಗಿದೆ. ಅದುವೇ ಓಜೋನ್‌ ಮಾಲಿನ್ಯ.

ಲಾಕ್‌ಡೌನ್‌ ಅವಧಿಯಲ್ಲಿ ಜಗತ್ತಿನಾದ್ಯಂತ ವಾಯು ಮಾಲಿನ್ಯ ಕಡಿಮೆಯಾಗಿದೆ. ಎನ್‌ಒ2 (ನೈಟ್ರೋಜನ್‌ ಡಯಾಕ್ಸೈಡ್‌) ಮತ್ತು ಪಿಎಂ2.5 ಹಂತಗಳಲ್ಲಿ ಕುಸಿತ ಕಂಡುಬಂದಿದೆ. ಆದರೆ ಇದೇ ವೇಳೆ ಓಜೋನ್‌ನಿಂದಾಗುವ ಅಗೋಚರ ಮಾಲಿನ್ಯದ ಪ್ರಮಾಣ ವೃದ್ಧಿಸಿದೆ.

ದೆಹಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರದ ಮಾಹಿತಿ ಪ್ರಕಾರ, ಮಾ.25ರಂದು ಲಾಕ್‌ಡೌನ್‌ ಆರಂಭವಾದಾಗಿನಿಂದ ದೇಶದ 22 ಬೃಹತ್‌ ನಗರಗಳು ಮತ್ತು ಮೆಟ್ರೋ ಸಿಟಿಗಳಲ್ಲಿ ಓಜೋನ್‌ನಿಂದಾಗುವ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಹಲವು ನಗರಗಳಲ್ಲಿ ಇದು

ಸಾಮಾನ್ಯ ಮಟ್ಟವನ್ನು ಮೀರಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಓಜೋನ್‌ ಮಾಲಿನ್ಯ ಎಲ್ಲಿ?

ಬೆಂಗಳೂರು, ಚೆನ್ನೈ, ಹೈದರಾಬಾದ್‌, ಕೊಚ್ಚಿ, ಮುಂಬೈ, ಪುಣೆ, ದೆಹಲಿ ಎನ್‌ಸಿಆರ್‌ (ಫರೀದಾಬಾದ್‌, ಗಾಜಿಯಾಬಾದ್‌, ಗುರುಗ್ರಾಮ ಮತ್ತು ನೋಯ್ಡಾ ಒಳಗೊಂಡು), ಕೋಲ್ಕತಾ, ಅಹಮದಾಬಾದ್‌, ಉಜ್ಜೈನಿ, ಜೈಪುರ, ಪಾಟ್ನಾ, ವಿಶಾಖಪಟ್ಟಣಂ, ಅಮೃತಸರ, ಹೌರಾ, ಗುವಾಹಟಿ, ಲಕ್ನೋ ನಗರಗಳಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಪಿಎಂ2.5 ಮತ್ತು ಎನ್‌ಒ2 ಮಾಲಿನ್ಯ ದಿಢೀರ್‌ ಕುಸಿದರೆ, ಓಜೋನ್‌ನಿಂದಾಗುವ ಮಾಲಿನ್ಯ ಏಕಾಏಕಿ ಹೆಚ್ಚಾಗಿದೆ.

 

ಕಾರಣವೇನು?

ಬಿಸಿಲು ಹೆಚ್ಚಾಗಿರುವ ತಿಂಗಳುಗಳಲ್ಲಿ ಸಾಮಾನ್ಯವಾಗಿ ಓಜೋನ್‌ ಮಾಲಿನ್ಯ ವೃದ್ಧಿಸುತ್ತದೆ.

ಓಜೋನ್‌ ಮಾಲಿನ್ಯವೆಂದರೆ ಅದು ನೇರವಾಗಿ ಓಜೋನ್‌ನಿಂದ ಆಗುವುದಲ್ಲ. ಸೂರ್ಯನ ಅತಿಯಾದ ಶಾಖದಿಂದಾಗಿ ಸಾರಜನಕದ ಆಕ್ಸೈಡ್‌ಗಳು, ಬಾಷ್ಪಶೀಲ ಜೈವಿಕ ಸಂಯುಕ್ತಗಳು ಮತ್ತು ಗಾಳಿಯಲ್ಲಿನ ಇತರ ಅನಿಲಗಳ ನಡುವಿನ ರಾಸಾಯನಿಕ ಕ್ರಿಯೆಯಿಂದಾಗಿ ಮಾಲಿನ್ಯ ಉಂಟಾಗುತ್ತದೆ. ಎಲ್ಲ ಮೂಲಗಳಿಂದ ಹೊರಸೂಸುವ ಅನಿಲಗಳನ್ನು ನಿಯಂತ್ರಿಸಿದರೆ ಮಾತ್ರ ಓಜೋನ್‌ ಮಾಲಿನ್ಯ ತಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next