Advertisement

ಕೋವಿಡ್‌ 19 ಮಾಹಿತಿ ಜನಪ್ರತಿನಿಧಿಗಳ ಮುಂದಿಡಿ

06:00 AM May 26, 2020 | Lakshmi GovindaRaj |

ಮಂಡ್ಯ: ಜಿಲ್ಲೆಯೊಳಗೆ ಕೋವಿಡ್‌ 19 ಪರೀಕ್ಷಾ ವರದಿಗಳ ಕುರಿತು ಜಿಲ್ಲಾಡಳಿತ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕ್ವಾರಂಟೈನ್‌ ಮಾಡಿದವ ರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಎಲ್ಲ ಮಾಹಿತಿಗಳು ಅಸ್ಪಷ್ಟವಾಗಿದ್ದು, ಜಿಲ್ಲಾಡಳಿತ  ಗುರುವಾರ (ಮೇ 28)ದೊಳಗೆ ಜನಪ್ರತಿನಿ ಧಿಗಳ ಸಭೆ ಕರೆದು ವಾಸ್ತವ ಸಂಗತಿ ಮುಂದಿ ಡಬೇಕು ಎಂದು ಜೆಡಿಎಸ್‌ ಶಾಸಕರು ಒಕ್ಕೊರ ಲಿನಿಂದ ಆಗ್ರಹಿಸಿದರು.

Advertisement

ಜಿಲ್ಲಾಡಳಿತ ನಿತ್ಯ ಬಿಡುಗಡೆ ಮಾಡುತ್ತಿರುವ ಕೋವಿಡ್‌ 19 ವರದಿಗಳ ಬಗ್ಗೆ  ಅನುಮಾ ನದಿಂದ ನೋಡುವಂತಾಗಿದೆ. ಪಾಸಿಟಿವ್‌ ಬಂದವರನ್ನು ಕ್ವಾರಂಟೈನ್‌ಗೂ, ನೆಗೆಟಿವ್‌ ಬಂದವರನ್ನು ಐಸೋಲೇಷನ್‌ ವಾರ್ಡ್‌ಗೂ ಹಾಕಲಾಗುತ್ತಿದೆ. ಈ ಬೆಳವಣಿಗೆ ಎಲ್ಲರಲ್ಲೂ ಆತಂಕ ಮೂಡಿಸಿದೆ ಎಂದು ಪ್ರವಾಸಿಮಂದಿ  ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಪುಟ್ಟ ರಾಜು ಅಸಮಾಧಾನ ವ್ಯಕ್ತಪಡಿಸಿದರು.

ವರದಿಗಳು ಅದಲು ಬದಲು: ಕೆ.ಆರ್‌.ಪೇಟೆ ಸೇರಿದಂತೆ ಇತರೆ ತಾಲೂಕುಗಳಿಗೆ ಹೊರಗಿ ನಿಂದ ಬಂದವರನ್ನು ಜಿಲ್ಲಾಡಳಿತ ಸರಿಯಾದ ರೀತಿಯಲ್ಲಿ ತಪಾಸಣೆಗೆ ಒಳಪಡಿಸುತ್ತಿಲ್ಲ. ಪಾಸಿಟೀವ್‌-ನೆಗೆಟಿವ್‌ ವರದಿಗಳ ಬಗ್ಗೆ ಸಮ ರ್ಪಕವಾಗಿ  ಪರಾಮರ್ಶೆ ನಡೆಸದೆ ಗೊಂದಲ ಮೂಡಿಸುತ್ತಿದೆ. ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ, ಸಭೆಯನ್ನೂ ನಡೆಸಿಲ್ಲ. ಇದರಿಂದ ಮುಂದೆ ಅನಾಹುತ ಸಂಭವಿಸಿದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾ ಗುತ್ತದೆ ಎಂದು  ಹೇಳಿದರು.

ಶಾಸಕರಿಗೆ ಆಹ್ವಾನವಿಲ್ಲ: ಜಿಲ್ಲಾ ಉಸ್ತುವಾರಿ ಸಚಿವರು ಜೆಡಿಎಸ್‌ ಶಾಸಕರನ್ನು ವಿಶ್ವಾಸಕ್ಕೆ ತೆಗೆ ದುಕೊಂಡು ಕೆಲಸ ಮಾಡುತ್ತಿಲ್ಲ. ತಾಲೂಕು ಮಟ್ಟದಲ್ಲಿ ಸಚಿವರು ನಡೆಸುತ್ತಿರುವ ಸಭೆಗಳಿಗೆ ಶಾಸಕರನ್ನು ಆಹ್ವಾನಿಸುತ್ತಿಲ್ಲ.  ಚುಂಚಶ್ರೀಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್‌ ಶಾಸಕರು ಜಿಲ್ಲಾಡಳಿತದ ನ್ಯೂನತೆಗಳನ್ನು ಗಮ ನಕ್ಕೆ ತಂದರೆ ಅದನ್ನು ಸಮಾಧಾನದಿಂದ ಪರಿಶೀಲಿ ಸದೆ ಶಾಸಕರ ವಿರುದಟಛಿವೇ ತಿರುಗಿಬೀಳುತ್ತಿ ದ್ದಾರೆ ಎಂದು ಆರೋಪಿಸಿದರು.

ಲಘುವಾಗಿ ಮಾತನಾಡಬೇಡಿ: ಸಂಸದೆ ಸುಮಲತಾ ಕೂಡ ಮೈಷುಗರ್‌ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದಿ ದ್ದಾರೆ. ಕಾರ್ಖಾನೆ ವಿಚಾರದಲ್ಲಿ ಯಾರು ರಾಜ ಕಾರಣ ಮಾಡುತ್ತಿದ್ದಾರೆ ಎನ್ನುವುದನ್ನು ಅವರು ಬಹಿರಂಗಪಡಿಸಬೇಕು. ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಜೆಡಿಎಸ್‌ ಶಾಸಕರ ಸಭೆ ಕರೆದು ಚರ್ಚಿಸಬಹುದಾಗಿತ್ತು. ಸರ್ಕಾರದ  ಮೇಲೆ ಒತ್ತಡ ಹೇರಬಹುದಿತ್ತು. ಕೇಂದ್ರದಿಂದ ಕಾರ್ಖಾನೆ ಪ್ರಗತಿಗೆ ಪೂರಕ ಕೆಲಸ ಮಾಡಬಹುದು  ಎಂಬ ಬಗ್ಗೆ ಸಲಹೆ ಪಡೆಯಬಹುದಿತ್ತು. ಶಾಸಕರನ್ನು ದೂರವಿಟ್ಟು ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದರು.

Advertisement

ಸಕಾಲದಲ್ಲಿ ಆರಂಭಗೊಳ್ಳಲಿ: ರೈತರ ಕಬ್ಬನ್ನು ಸಮರ್ಥವಾಗಿ ಅರೆದು ನಿಗದಿತ ವೇಳೆಗೆ ಹಣ ಪಾವತಿಸಬೇಕೆಂಬುದು ನಮ್ಮ ಆಗ್ರಹ. ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಖಾಸಗೀಕರಣ ಮಾಡಬೇಕು ಎನ್ನುವುದು ಷೇರುದಾರರು, ಆಡಳಿತ  ಮಂಡಳಿ ತೀರ್ಮಾನವಾ ಗಿದ್ದು, ಮೈಷುಗರ್‌ ಕಂಪನಿಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಂಡು ಅಭಿವೃದ್ಧಿಪಡಿಸಲು ಅವ‌ಕಾಶವಿದೆ.

ಸಮರ್ಥ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಿ ಕಾರ್ಖಾನೆ ಗೆ ಆರ್ಥಿಕ ಶಕ್ತಿ  ತುಂಬಬೇಕು ಎಂದರು. ಗೋಷ್ಠಿಯಲ್ಲಿ ಶಾಸಕರಾದ ಶ್ರೀನಿವಾಸ್‌, ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಅನ್ನದಾನಿ, ವಿಧಾನಪರಿಷತ್‌ ಸದಸ್ಯರಾದ ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next