ಬಂಗಾರಪೇಟೆ: ಪಟ್ಟಣದಲ್ಲಿ ಮತ್ತೆ ಮೂರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಎರಡು ವಾರ್ಡ್‌ಗಳನ್ನು ಪುರಸಭೆಯವರು ಸೀಲ್ ಡೌನ್ ಮಾಡಿದ್ದಾರೆ. ಮಂಡ್ಯ ಸೋಂಕಿತ ವ್ಯಕ್ತಿ ಹೊರತುಪಡಿಸಿದರೆ ಜಿಲ್ಲೆಯಲ್ಲಿ 14 ಪ್ರಕರಣ ಗಳು ದಾಖಲಾದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಮೂರು ದಿನಗಳ ಹಿಂದೆ ಚೆನ್ನೈ ಕೊಯಂಬೇಡ್ ಪ್ರದೇಶದಿಂದ ಬಂದಿದ್ದ ಲಾರಿ ಚಾಲಕನಲ್ಲಿ ಕೋವಿಡ್ 19 ಸೋಂಕು ಕಂಡು ಬಂದಿತ್ತು.
ಈಗ ಸೋಂಕಿತನ 60 ವರ್ಷದ ಅತ್ತೆ, 13 ವರ್ಷದ ಪುತ್ರನಿಗೂ ಸೋಂಕು ದೃಢಪಟ್ಟಿದೆ. ಮೊದಲ ಪಾಸಿಟಿವ್ ವ್ಯಕ್ತಿ ಚೆನ್ನೈನಿಂದ ಲಾರಿಯಲ್ಲಿ ಬರುವ ವೇಳೆ ಅತ್ತೆ ಕರೆತಂದಿದ್ದ. ಇವರಿಂದ ಎಲ್ಲರಿಗೂ ಕೋವಿಡ್ 19 ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಈ ಮೊದಲ ಸೋಂಕಿತ ಸಂಪರ್ಕದಲ್ಲಿದ್ದ ಏಳು ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡ ಲಾಗಿದೆ. ಇವರ ಗಂಟಲು ದ್ರವ ಪರೀಕ್ಷೆಯ ಫಲಿತಾಂಶಕ್ಕಾಗಿ ಆರೋಗ್ಯ ಇಲಾಖೆಯು ಕಾಯುತ್ತಿದೆ.
ಮತ್ತೂಂದು ಪ್ರಕರಣ: ಮೇ ತಿಂಗಳಲ್ಲಿ ಚೆನ್ನೈಗೆ ಹಲವು ಬಾರಿ ಓಡಾಡಿದ್ದ ಲಾರಿ ಚಾಲಕನೊಬ್ಬನಿಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ. 32 ವರ್ಷದ ಈ ವ್ಯಕ್ತಿಯು ಚೆನ್ನೈನಿಂದ ನೇರವಾಗಿ ಕೆಜಿಎಫ್ ತಾಲೂಕಿನ ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಚಿಂಚಾಂಡ್ಲಹಳ್ಳಿ ಗ್ರಾಮದ ತನ್ನ ಪತ್ನಿಯ ತವರು ಮನೆಯಲ್ಲಿದ್ದು, ಎರಡು ದಿನಗಳ ಹಿಂದೆ ಬಂಗಾರಪೇಟೆಯ ಇಂದಿರಾಶ್ರಯದಲ್ಲಿ ವಾಸವಾಗಿದ್ದ.
ಮನೆಗೆ ಬಂದಾಗ ತಾಲೂಕು ಆರೋಗ್ಯಾಧಿ ಕಾರಿಗಳು ಕ್ವಾರಂಟೈನ್ ಮಾಡಿದ್ದರು. ಪ್ರಸ್ತುತ ಈ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಈತನ ಪತ್ನಿ ಹಾಗೂ ಮಕ್ಕಳನ್ನು ಎಳೇಸಂದ್ರದ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ವ್ಯಕ್ತಿ ಕೆಜಿ ಎಫ್ ತಾಲೂಕಿನ ಪತ್ನಿ ತವರು ಗ್ರಾಮದಲ್ಲಿ ವಾಸವಾಗಿದ್ದರಿಂದ ಆ ಗ್ರಾಮ ದಲ್ಲಿ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನೂ ಕ್ವಾರಂ ಟೈನ್ ಮಾಡಲು ಚಿಂತನೆ ನಡೆಸಲಾಗಿದೆ.
ಪಟ್ಟಣದಲ್ಲಿ ಒಟ್ಟು ನಾಲ್ಕು ಕೋವಿಡ್ 19 ಸೋಂಕಿತ ಪ್ರಕರಣಗಳು ದೃಢಪಟ್ಟಿರುವುದರಿಂದ ತಾಲೂಕು ಆಡಳಿತ, ಪುರಸಭೆ, ಅರೋಗ್ಯ ಇಲಾಖೆ, ಪೊಲೀಸ್ ಅಧಿಕಾರಿಗಳು ಕೋವಿಡ್ 19 ಪಾಸಿಟಿವ್ ಪ್ರದೇಶಗಳನ್ನು ಸೀಲ್‌ಡೌನ್ ಮಾಡಿದ್ದಾರೆ. ಈ ಪ್ರದೇಶಗಳಲ್ಲಿ ಕಟ್ಟೆ ಚ್ಚರವಹಿಸಲಾಗಿದೆ. ಸೀಲ್‌ಡೌನ್ ಆಗಿರುವ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಈ ಮನೆಗಳಿಗೆ ಅಗತ್ಯ ಸೌಲಭ್ಯಗಳನ್ನು ಪುರಸಭೆ ಸಿಬ್ಬಂದಿ ಖುದ್ದು ಹಾಜರಾಗಿ ವ್ಯವಸ್ಥೆ ಮಾಡಿದ್ದಾರೆ.
ಈ ಎರಡು ಸೀಲ್‌ಡೌನ್ ಪ್ರದೇಶಗಳಿಗೆ ತಹಶೀಲ್ದಾರ್ ಕೆ.ಬಿ.ಚಂದ್ರ ಮೌಳೇಶ್ವರ್, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ ಕುಮಾರಿ, ಸಬ್ ಇನ್ಸ್‌ಪೆಕ್ಟರ್ ಆರ್.ಜಗದೀಶ ರೆಡ್ಡಿ, ಪುರಸಭೆ ಮುಖ್ಯಾಧಿ ಕಾರಿ ವಿ.ಶ್ರೀಧರ್, ಆರೋಗ್ಯಾಧಿಕಾರಿ ಗೋವಿಂದರಾಜ್, ಸಿಎಒ ವೆಂಕಟೇಶ್, ಕಂದಾಯ ನಿರೀಕ್ಷಕ ಕಾಂತ ರಾಜ್, ಸಿಬ್ಬಂದಿಯಾದ ಸೋಮಣ್ಣ, ಸಂತೋಷ್, ಬಾಬು, ಹರೀಶ್, ಮಂಜುನಾಥ್ ಇದ್ದರು.