ಯಾದಗಿರಿ: ಜಿಲ್ಲೆಯಲ್ಲಿ ಶನಿವಾರವೂ ಮಹಾರಾಷ್ಟ್ರದಿಂದ ಬಂದಿರುವ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಬ್ಬರು ಗುಜರಾತ್ ಪ್ರಯಾಣ ಹಾಗೂ ಮತ್ತೊಬ್ಬರಿಗೆ ಸೋಂಕಿತ ಪಿ 8228 ಸಂಪರ್ಕದಿಂದ ಕೋವಿಡ್-19 ತಗುಲಿದ್ದು ಒಟ್ಟು 13 ಜನರಲ್ಲಿ ಸೋಂಕು ಪತ್ತೆಯಾಗಿದೆ
ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ 2 ವರ್ಷದ ಬಾಲಕ (ಪಿ 11272), ಸುರಪುರ ತಾಲೂಕಿನ ಕೆಂಭಾವಿಯ 24 ವರ್ಷದ ಪುರುಷರಿಬ್ಬರು (ಪಿ 11263, ಪಿ 11264) ಮತ್ತು ಹುಣಸಗಿ ತಾಲೂಕಿನ ಬೈಲಗಿಡ್ಡ ತಾಂಡಾದ 32 ವರ್ಷದ (ಪಿ 11265)ಗೆ ಸುರಪುರ ಸಾರಿಗೆ ಚಾಲಕನ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢವಾಗಿದೆ.
ಅಲ್ಲದೇ ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದ 20 ವರ್ಷದ ಮಹಿಳೆ (ಪಿ 11266), ಯಲಸತ್ತಿಯ 27 ವರ್ಷದ ಪುರುಷ (ಪಿ 11267) ಅದೇ ಗ್ರಾಮದ 70 ವರ್ಷದ ಮಹಿಳೆ (ಪಿ 11268), ಅಲ್ಲಿಪುರ ದೊಡ್ಡ ತಾಂಡಾದ 5 ವರ್ಷದ ಬಾಲಕಿ (ಪಿ 11269) ಮತ್ತು 34 ವರ್ಷದ ಪುರುಷ (ಪಿ 11273), ಹತ್ತಿಕುಣಿ ಗ್ರಾಮದ 27 ವರ್ಷದ ಮಹಿಳೆ (ಪಿ 11270) ಮತ್ತು 5 ವರ್ಷದ ಬಾಲಕ (ಪಿ 11271) ಹಾಗೂ ಯಾದಗಿರಿಯ ಬಸವೇಶ್ವರ ನಗರದ 25 ವರ್ಷದ ಪುರುಷ (ಪಿ 11274) ಹಾಗೂ ಗುಜರಾತ್‌ನಿಂದ ಆಗಮಿಸಿದ್ದ ಗುರುಮಠಕಲ್‌ನ 11 ವರ್ಷದ ಬಾಲಕ (ಪಿ 11275) ಸೋಂಕಿಗೆ ತುತ್ತಾಗಿದ್ದಾರೆ.
ಜಿಲ್ಲೆಯಲ್ಲಿ ಶನಿವಾರ 221 ಜನರ ಮಾದರಿಯನ್ನು ಸಂಗ್ರಹಿಸಲಾಗಿದ್ದು ಒಟ್ಟು 1154 ಜನರ ಗಂಟಲು ದ್ರವದ ಮಾದರಿ ವರದಿ ಬರಬೇಕಿದೆ. ಈವರೆಗೆ 929 ಸೋಂಕಿತರಲ್ಲಿ 785 ಜನರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.