Advertisement

ಮಂಡ್ಯ ಮೂಲದ ವ್ಯಕ್ತಿಗೆ ಕೋವಿಡ್‌ 19 ಸೋಂಕು ಪತ್ತೆ

05:13 AM May 17, 2020 | Lakshmi GovindaRaj |

ಮಂಡ್ಯ: ಕೋಲಾರ ಜಿಲ್ಲೆಯ ಪ್ರಧಾನ ಸಿವಿಲ್‌ ನ್ಯಾಯಾಲಯದಲ್ಲಿ ಪ್ರಥಮ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿ ರುವ ಮಂಡ್ಯ ಮೂಲದ ವ್ಯಕ್ತಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಮದ್ದೂರು ತಾಲೂಕು ಕಡಿಲುವಾಗಿಲು  ಗ್ರಾಮದ 40 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

Advertisement

ಈತ ಮಾ.12ರಂದು ಕೋಲಾರ ಜಿಲ್ಲೆಯಲ್ಲಿ ಲಾಕ್‌ಡೌನ್‌ ಆದ ಬಳಿಕ ನ್ಯಾಯಾಲಯದ ರಜೆ ಮೇಲೆ ತನ್ನ ಹೆಂಡತಿ ಊರಾದ ಹಲಗೂರು ಹೋಬಳಿಯ ದಳವಾಯಿ ಕೋಡಿಹಳ್ಳಿ ಗ್ರಾಮಕ್ಕೆ ಬಂದಿದ್ದಾನೆ. ಆನಂತರ ಏ.23ರಂದು ತನ್ನ ಸ್ವಂತ ಗ್ರಾಮವಾದ ಕಡಿಲುವಾಗಿಲು ಗ್ರಾಮ ದಲ್ಲಿ ಗೃಹಪ್ರವೇಶದಲ್ಲಿ ಪಾಲ್ಗೊಂಡು ಮತ್ತೆ ದಳವಾಯಿಕೋಡಿಹಳ್ಳಿ ಗ್ರಾಮಕ್ಕೆ ಮೇ 11ರಂದು ತನ್ನ ಸಂಬಂಧಿ ಜೊತೆ ಬೈಕ್‌ನಲ್ಲಿ ಚನ್ನಪಟ್ಟಣದವರೆಗೆ ಡ್ರಾಪ್‌ ತೆಗೆದುಕೊಂಡು ನಂತರ ಸಹದ್ಯೋಗಿ ಜೊತೆ ಕೋಲಾರ ಜಿಲ್ಲೆಗೆ ತೆರಳಿದ್ದಾರೆ.

ಮೇ 15ರಂದು ಈತನನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಹಾಲಿ ಈತನನ್ನು  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ. ವ್ಯಕ್ತಿಯ ಕುಟುಂಬದವರ ಬಗ್ಗೆ ಆರೋಗ್ಯ ಇಲಾಖೆಯಿಂ ದ ಮಾಹಿತಿ ಕಲೆ ಹಾಕಲಾಗುತ್ತಿದೆ. ಸೋಂಕಿತ ವ್ಯಕ್ತಿ ಪ್ರಾಥಮಿಕ ಸಂಪರ್ಕ ದಲ್ಲಿದ್ದ ತಂದೆ, ತಾಯಿ, ಇಬ್ಬರು ಸಹೋದರಿಯವರು, ಸಹೋದರರು, ಅಕ್ಕನ ಮಗ ಅವರನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಸ್ವಾಬ್‌ ಸಂಗ್ರಹಿಸಿ ಐಸೋಲೇಷನ್‌ ವಾರ್ಡ್‌ನಲ್ಲಿ 7 ಜನರ ನ್ನು ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next