Advertisement

ಕೋವಿಡ್ ಸೋಂಕಿನ ಹೆಚ್ಚಳದ ಹಿನ್ನೆಲೆ ಮತ್ತೆ ಲಾಕ್ ಡೌನ್ ಮೊರೆ ಹೋದ ಇಂಡೋನೇಷ್ಯಾ

04:03 PM Jul 02, 2021 | Team Udayavani |

ಜಕಾರ್ತ  : ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ದಿಢೀರನೇ ಹಚ್ಚಳವಾದ ಕಾರಣದಿಂದಾಗಿ  ದಕ್ಷಿಣ- ಪೂರ್ವ ಏಷ್ಯಾದಲ್ಲಿ ಮತ್ತೆ ಲಾಕ್ ಡೌನ್ ಗೆ ಮೊರೆ ಹೋಗಲಾಗಿದೆ ಎಂದು ವರದಿಗಳು ತಿಳಿಸಿವೆ.

Advertisement

ಇಂಡೋನೇಷ್ಯಾದಾದ್ಯಂತ 21 ಲಕ್ಷಕ್ಕೂ ಹೆಚ್ಚು ಮಂದಿಗೆ ಕೋವಿಡ್ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ, ದ್ವೀಪ ಸಮೂಹವಾದ ಇಂಡೋನೇಷ್ಯಾ ದೇಶದ ಮುಖ್ಯ ಭೂ ಪ್ರದೇಶ ಜಾವಾ ಹಾಗೂ ಬಾಲಿಯಲ್ಲಿರುವ ಸಾರ್ವಜನಿಕ ಮನರಂಜನಾ ಕೇಂದ್ರಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.

ಇದನ್ನೂ ಓದಿ : ಪಶ್ಚಿಮಬಂಗಾಳ ವಿಧಾನಸಭೆ ಕಲಾಪದಲ್ಲಿ ಕೋಲಾಹಲ, ಭಾಷಣ ಮೊಟಕುಗೊಳಿಸಿ ಹೊರನಡೆದ ರಾಜ್ಯಪಾಲರು

ಮೇ 14 ಕ್ಕೆ 2663 ಪ್ರಕರಣಗಳು ದೇಶದಲ್ಲಿ ವರದಿಯಾಗಿತ್ತು. ಆದರೆ, ಆನಂತರ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಕಂಡಿತು. ಜೂನ್ 29 ರಂದು 20 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. 30 ಕ್ಕೆ ರೋಗಿಗಳ ಸಂಖ್ಯೆ 21,807 ಆಗಿತ್ತು.ಆದರೇ, ಈಗ  ಸತತವಾಗಿ ಪ್ರತಿದಿನ 20 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಎರಡು ವಾರಗಳ ಲಾಕ್ ಡೌನ್ ಘೋಷಿಸಲಾಗಿದ್ದು, ಪ್ರತಿದಿನ ರೋಗಿಗಳ ಸಂಖ್ಯೆಯಲ್ಲಿ ಇಳಿಕೆ ನಂತರ ಲಾಕ್ ಡೌನ್ ಸಡಿಲಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

Advertisement

ಇನ್ನು,  ಸರ್ಕಾರದ ಅಂಕಿ ಅಂಶಗಳಿಗಿಂತಲೂ ಹೆಚ್ಚು ಪ್ರಕರಣಗಳು ಇವೆ ಎಂದು ಆರೋಗ್ಯ ವಲಯದಿಂದ ಕೇಳಿ ಬರುತ್ತಿದೆ. ರಾಜಧಾನಿ ಜಕಾರ್ತಾದ ಹೊರ ಭಾಗದಲ್ಲಿ ಎಲ್ಲೂ ಸರಿಯಾದ ಕ್ರಮದಲ್ಲಿ ಪರೀಕ್ಷೆಗಳು ನಡೆಯುತ್ತಿಲ್ಲ ಎಂದು ವರದಿ ಹೇಳಿದೆ.

58,000 ಮಂದಿ ಇಂಡೋನೇಷ್ಯಾದ ಒಟ್ಟು ಕೋವಿಡ್ ಪೀಡಿತರು. ಅದೇ ವೇಳೆ, ಕಳೆದ ಮೂರು ದಿನಗಳಿಂದ 400ಕ್ಕೂ ಹೆಚ್ಚು ಪ್ರತಿದಿನ ಸಾವುಗಳು ದಾಖಲಾಗಿವೆ.

ಇದನ್ನೂ ಓದಿ : 20 -25 ಪರ್ಸೆಂಟ್ ಬಿಜೆಪಿ ಸರ್ಕಾರದಲ್ಲಿ ಲಂಚ ಇಲ್ಲದೇ ಏನು ಆಗುವುದಿಲ್ಲ: ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next