ನವ ದೆಹಲಿ : ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 42,618 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 330 ಮಂದಿ ಸೋಂಕಿನಿಂದ ಮೃತ ಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು (ಸಪ್ಟೆಂಬರ್ 4, ಶನಿವಾರ) ಬಿಡುಗಡೆಗೊಳಿಸಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.
ಕೇರಳವೊಂದರಲ್ಲೇ 29,322 ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 131 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಈ ಮೂಲಕ ಒಟ್ಟು ಕೋವಿಡ್ ಸೋಂಕಿತರ ಸಂಖ‍್ಯೆ 3,29, 45, 907 ಕ್ಕೆ ಏರಿಕೆಯಾಗಿದ್ದು, ದೇಶದಾದ್ಯಂತ 4,05,681 ಸಕ್ರಿಯ ಪ್ರಕರಣಗಳು ಇವೆ. ಕಳೆದೊಂದು ದಿನದಲ್ಲಿ 36,385 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಚೇತರಿಕೆಯ ಪ್ರಕರಣ ಶೇಕಡಾ 97.43 ರಷ್ಟಿದೆ ಎಂದು ಕೂಡ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ : ಮನೀಶ್ ಚಿನ್ನದ ಮೆರುಗು: ಚಿನ್ನ- ಬೆಳ್ಳಿಗೆ ಗುರಿಯಿಟ್ಟ ಭಾರತದ ಶೂಟರ್ ಗಳು
ಇನ್ನು, ದೈನಂದಿನ ಪಾಸಿಟಿವಿಟಿ ರೇಟ್ ಶೇಕಡಾ 2.50 ರಷ್ಟಿದ್ದು, ವಾರದ ಪಾಸಿಟಿವಿಟಿ ರೇಟ್ 2.63 ರಷ್ಟಿದೆ. ಈವರೆಗೆ ದೇಶದಾದ್ಯಂತ 52.82 ಕೋಟಿ ಕೋವಿಡ್ ಸೋಂಕಿನ ಟೆಸ್ಟ್ ಮಾಡಲಾಗಿದೆ. ಕಳೆದೊಂದು ದಿನದಲ್ಲಿ ದೇಶದಾದ್ಯಂತ 17,04,970 ಮಂದಿಗೆ ಸೋಂಕಿನ ಟೆಸ್ಟ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಭಾರತದಾದ್ಯಂತ ನಡೆಯುತ್ತಿರುಬವ ಲಸಿಕಾ ಅಭಿಯಾನದಡಿಯಲ್ಲಿ ಒಟ್ಟು ಈವರೆಗೆ 67.72 ಕೋಟಿ ಕೋವಿಡ್ ಲಸಿಕಾ ಡೋಸ್ ಗಳನ್ನು ನೀಡಲಾಗಿದೆ ಎಂದು ಕೋಡ ಸಚಿವಾಲಯ ಮಾಹಿತ ನೀಡಿದೆ.
ಇದನ್ನೂ ಓದಿ : ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತ ಹಾಕಿ ತಂಡಗಳ ಗೈರು?