ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕಿನ ಮೂರನೇ ಅಲೆ ಹರಡುವ ಸಾಧ್ಯತೆ ಇದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಬುಧವಾರ(ಮೇ 19) ಎಚ್ಚರಿಸಿದ್ದು, ಇದಕ್ಕೆ ಲಸಿಕೆ ತೆಗೆದುಕೊಳ್ಳವಿಕೆಯೊಂದೇ ದಾರಿಯಾಗಿದೆ ಎಂದು ಸಲಹೆ ನೀಡಿದೆ.
ಇದನ್ನೂ ಓದಿ:ನಾಲ್ಕನೇ ತ್ರೈಮಾಸಿಕದಲ್ಲಿ 7,605 ಕೋಟಿ ನಿವ್ವಳ ನಷ್ಟ ಅನುಭವಿಸಿದ ಟಾಟಾ ಮೋಟಾರ್ಸ್
ಕೋವಿಡ್ 3ನೇ ಅಲೆಯ ಅಪಾಯದ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಕೋವಿಡ್ ಲಸಿಕೆಯನ್ನು ನೀಡುವುದು ಉತ್ತಮ ಎಂದು ಐಎಂಎ ಸಲಹೆ ನೀಡಿದೆ. ಒಂದು ವೇಳೆ ನಾವು ಬೃಹತ್ ಪ್ರಮಾಣದಲ್ಲಿ ಲಸಿಕೆ ನೀಡಲು ಮುಂದಾಗದಿದ್ದರೆ, ಮೂರನೇ ಅಲೆಯನ್ನು ಎದುರಿಸುವುದು ಕಷ್ಟ ಮತ್ತು ಇದು ಸುರಕ್ಷಿತವೂ ಅಲ್ಲ ಎಂದು ತಿಳಿಸಿದೆ.
ದೇಶಾದ್ಯಂತ ಲಸಿಕೆ ವಿತರಣೆಯನ್ನು ತೀವ್ರಗೊಳಿಸಬೇಕು. ಕೇಂದ್ರ ಸರ್ಕಾರ ಗರಿಷ್ಠ ಲಸಿಕೆಯನ್ನು ವಿತರಿಸಬೇಕು ಮತ್ತು ಮನೆ, ಮನೆಗೆ ಲಸಿಕೆ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಐಎಂಎ ಅಧ್ಯಕ್ಷ ಡಾ.ಜೆಎ ಜಯಾಲಾಲ್ ತಿಳಿಸಿದ್ದಾರೆ.
ಭಾರತ ಕೋವಿಡ್ 19 ಲಸಿಕೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಮತ್ತು ಕೆಲವೇ ತಿಂಗಳುಗಳಲ್ಲಿ 60-70ರಷ್ಟು ಲಸಿಕೆ ನೀಡಿಕೆಯ ಗುರಿಯನ್ನು ಪೂರ್ಣಗೊಳಿಸಬೇಕು ಎಂದು ವರದಿ ತಿಳಿಸಿದೆ.