Advertisement

8ನೇ ಆವೃತ್ತಿ ಪ್ರೊ ಕಬಡ್ಡಿಗೂ ಕೋವಿಡ್‌ ಕಾಟ!

11:21 PM Jan 25, 2022 | Team Udayavani |

ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಸುರಕ್ಷಿತ ಬಯೋಬಬಲ್‌ನಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದ ಪ್ರೊ ಕಬಡ್ಡಿ 8ನೇ ಆವೃತ್ತಿಗೆ ಕೊರೊನಾ ಕಾಲಿಟ್ಟಿದೆ.

Advertisement

ಪಾಟ್ನಾ ಪೈರೇಟ್ಸ್‌ ಮತ್ತು ಗುಜರಾಜ್‌ ಜೈಂಟ್ಸ್‌ ತಂಡದ ಕೆಲವು ಆಟಗಾರರಿಗೆ ಕೊರೊನಾ ಸೋಂಕು ವಕ್ಕರಿಸಿದ ಕಾರಣ ಉಭಯ ತಂಡಗಳ ಕೆಲವು ಪಂದ್ಯಗಳನ್ನು ಮುಂದೂಡಲಾಗಿದೆ.

ಟೂರ್ನಿಯಲ್ಲಿ ಪಾಟ್ನಾ ಜ. 18ರಂದು ತನ್ನ ಕೊನೆಯ ಪಂದ್ಯ ಆಡಿದ್ದರೆ, ಗುಜರಾತ್‌ ಜ. 20ರಂದು ಕೊನೆಯ ಪಂದ್ಯವನ್ನಾಡಿತ್ತು. ಇವೆರಡು ತಂಡಗಳಿಗೆ ಸದ್ಯ ಕಣಕ್ಕಿಳಿಸಲು ಕನಿಷ್ಠ 12 ಆಟಗಾರರು ಲಭ್ಯರಿಲ್ಲದ ಕಾರಣ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

ಅದರಂತೆ ಮಂಗಳವಾರದಿಂದ ಶುಕ್ರವಾರದ ವರೆಗೆ ಕೇವಲ ಒಂದು ಪಂದ್ಯವಷ್ಟೇ ನಡೆಯಲಿದೆ. ಈ ಪಂದ್ಯಗಳು ರಾತ್ರಿ. 7.30ಕ್ಕೆ ಆರಂಭವಾಗಲಿದೆ. ಜತೆಗೆ ಶನಿವಾರ 3 ಪಂದ್ಯಗಳ ಬದಲು 2 ಪಂದ್ಯಗಳಷ್ಟೇ ನಡೆಯಲಿದೆ.

ಇದನ್ನೂ ಓದಿ:ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್-ತೆಲುಗು ಟೈಟಾನ್ಸ್‌ ಪಂದ್ಯ ಡ್ರಾ

Advertisement

ಕೂಟಕ್ಕೆ ಹಿನ್ನಡೆಯಾಗದು
“ಆಟಗಾರರಲ್ಲಿ ಕೊರೊನಾ ಸೋಂಕು ದೃಢಪಟ್ಟ ಕಾರಣಕ್ಕೆ ಈ ಕೂಟಕ್ಕೆ ಹಿನ್ನಡೆಯಾಗದು. ಸೋಂಕಿತ ಎಲ್ಲ ಆಟಗಾರರು ಸುರಕ್ಷಿತರಾಗಿದ್ದಾರೆ. ಕೊರೊನಾದ ಪ್ರಾಥಮಿಕ ಲಕ್ಷಣಗಳು ಮಾತ್ರ ಇವರಲ್ಲಿ ಕಂಡುಬಂದಿದೆ. ಎಲ್ಲ ಸೋಂಕಿತ ಆಟಗಾರರನ್ನು ಐಸೊಲೇಶನ್‌ ಮಾಡಲಾಗಿದ್ದು, ಅವರ ಸಂಪರ್ಕಿತರಿಗೂ ಆರೋಗ್ಯ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಪ್ರೊ ಕಬಡ್ಡಿ ಆಯೋಜಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next