Advertisement

ಕೋವಿಡ್ ಮಾರ್ಗಸೂಚಿ: ಪದೇ ಪದೆ ಎಡವುತ್ತಿರುವ ಸರಕಾರ

11:59 PM Apr 22, 2021 | Team Udayavani |

ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ವ್ಯಾಪಿಸುತ್ತಿದೆ. ರೂಪಾಂತರಿತ ವೈರಸ್‌ ಕಳೆದ ಬಾರಿಯ ವೈರಸ್‌ಗಿಂತ ಅತ್ಯಂತ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪೀಡಿತರು ಮತ್ತು ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿನ ಹರಡುವಿಕೆಗೆ ತಡೆ ಒಡ್ಡುವ ಪ್ರಯತ್ನವಾಗಿ ಸರಕಾರ ಕೆಲವೊಂದು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಆದರೆ ಕೋವಿಡ್ ಎರಡನೇ ಅಲೆ ರಾಜ್ಯದಲ್ಲಿ ಕಾಣಿಸಿಕೊಂಡಾಗಿನಿಂದಲೂ ಪರಿಸ್ಥಿತಿಯ ನಿಭಾವಣೆಯಲ್ಲಿ ರಾಜ್ಯ ಸರಕಾರ ನಿರಂತರವಾಗಿ ಎಡವುತ್ತಲೇ ಬಂದಿದೆ. ಸೋಂಕು ನಿಯಂತ್ರಣದ ಕ್ರಮವಾಗಿ ದಿನಕ್ಕೊಂದರಂತೆ  ಮಾರ್ಗಸೂಚಿ, ನಿಯಮಾವಳಿ ಗಳನ್ನು ಜಾರಿಗೊಳಿಸುತ್ತ, ಅದನ್ನು ಮತ್ತೆ ಮಾರ್ಪಡಿಸುತ್ತ ಬಂದಿದ್ದು ಜನರನ್ನು ಗೊಂದಲದ ಮಡುವಿಗೆ ದೂಡಿದೆ.

Advertisement

ಸೋಂಕಿನ ಎರಡನೇ ಅಲೆ ವ್ಯಾಪಿಸಲಾರಂಭಿಸಿದಂತೆ ರಾಜ್ಯ ಸರಕಾರ ಕೋವಿಡ್‌ ಪ್ರಕರಣಗಳು ಹೆಚ್ಚಾಗಿರುವ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ರೂಪಿಸಿ ಜಾರಿಗೊಳಿಸಿತು. ಇದಾದ ಕೆಲವೇ ದಿನ‌ಗಳಲ್ಲಿ ನಿಯಮಾವಳಿಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿದ ಸರಕಾರ ಪರಿಸ್ಥಿತಿಯನ್ನು ಮತ್ತಷ್ಟು ಗೋಜಲನ್ನಾಗಿಸಿತು. ಕಳೆದ ಬಾರಿಯಂತೆ ಈ ಬಾರಿಯೂ ಸಂಪುಟದ ಸಚಿವರಲ್ಲೇ ಸಮನ್ವಯದ ಕೊರತೆ ಇರುವುದು ಹಲವಾರು ಬಾರಿ ಸಾಬೀತಾಯಿತು. ಒಂದು ಹಂತದಲ್ಲಿ ಸರಕಾರದ ಮೂಲದಿಂದಲೇ ಮಾರ್ಗಸೂಚಿ ಪ್ರಕಟಗೊಂಡಿದ್ದು, ಅದಾದ ಅರ್ಧ ಗಂಟೆಯಲ್ಲಿ ಅದು ನಕಲಿ ಎಂದು ಸರಕಾರವೇ ಸ್ಪಷ್ಟಪಡಿಸಿತು. ಎರಡು ದಿನಗಳ ಹಿಂದೆಯಷ್ಟೇ ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯ ಬಳಿಕ ಸರಕಾರ ಐದು ದಿನಗಳ ಕಾಲ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ, ವಾರಾಂತ್ಯದ ದಿನಗಳಾದ ಶನಿವಾರ ಮತ್ತು ರವಿವಾರ ಗ ಳಂದು ದಿನವಿಡೀ ಕರ್ಫ್ಯೂ ಇರುವುದಾಗಿ ಘೋಷಿಸಿ ಆದೇಶ ಹೊರ ಡಿಸಿತು. ಈ ಮಾರ್ಗಸೂಚಿಯಲ್ಲೂ ಯಾವುದೇ ಸ್ಪಷ್ಟತೆ ಇಲ್ಲದೆ ಜನರು ನಿಯಮಾವಳಿ ಗಳನ್ನು ಅರಿತುಕೊಳ್ಳಲು ಹರಸಾಹಸ ಪಡುವಂತಾಯಿತು. ಬೆನ್ನಲ್ಲೇ ಬುಧವಾರ ಸಂಜೆಯ ವೇಳೆ ಕೊರೊನಾ ನಿರ್ಬಂಧಗಳಲ್ಲಿ ಮತ್ತೆ ಬದಲು ಮಾಡಿದ ಸರಕಾರ ಇನ್ನಷ್ಟು ಕಠಿನ ನಿಯಮಗಳನ್ನು ಸೇರ್ಪಡೆಗೊಳಿಸಿತು.

ಇವೆಲ್ಲದರ ನಡುವೆ  ರಾಜ್ಯ ಸರಕಾರ ಮೇ 4ರ ವರೆಗೆ ಅಗತ್ಯ ಸೇವೆ ಯನ್ನು ಹೊರತುಪಡಿಸಿದಂತೆ ಉಳಿದೆಲ್ಲವುಗಳನ್ನೂ ಬಂದ್‌ ಮಾಡಿ ಅಧಿ ಸೂಚನೆಯನ್ನು ಹೊರಡಿಸಿತು. ಈ ಆದೇಶ ಹೊರ ಬೀಳುತ್ತಿದ್ದಂತೆಯೇ ರಾಜ್ಯದ ಹಲವೆಡೆ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್‌ ಮಾಡಿಸಲಾಯಿತು. ಅಷ್ಟು ಮಾತ್ರವಲ್ಲದೆ ಪೇಟೆಯಲ್ಲಿದ್ದ ಜನರನ್ನೂ ಅವರವರ ಮನೆಗೆ ತೆರಳುವಂತೆ ಸೂಚನೆ ನೀಡಲಾಯಿತು. ಸದ್ಯ ಸರಕಾರ ಮತ್ತು ಆಡಳಿತ ವ್ಯವಸ್ಥೆ ಎಲ್ಲದಕ್ಕೂ ಜನರೇ ಹೊಣೆ ಎಂದು ಬೆಟ್ಟು ಮಾಡಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದಂತೂ ವಿಪ ರ್ಯಾ ಸವೇ ಸರಿ. ರಾಜ್ಯದ ಆರೋಗ್ಯ ವ್ಯವಸ್ಥೆ ಯಲ್ಲಿನ ಎಲ್ಲ ಲೋಪ ದೋಷಗಳು ಈಗ ಒಂದೊಂದಾಗಿ ಬಹಿರಂಗಗೊಳ್ಳುತ್ತಿವೆ. ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ, ಆಮ್ಲಜನಕ ಕೊರತೆ, ಜನ ಸಾಮಾನ್ಯರಿಗೆ ಸೂಕ್ತ ಚಿಕಿತ್ಸೆ ದೊರೆಯ ದಿರುವುದು.. ಹೀಗೆ ಹತ್ತು ಹಲವು ಸಮಸ್ಯೆಗಳು ಎದುರಾಗಿವೆ. ಇವೆ ಲ್ಲವನ್ನೂ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಸಚಿವರು ಮತ್ತು ಅಧಿಕಾರಿಗಳು ಕೇವಲ ಸಭೆ, ಹೇಳಿಕೆಗಳಿಗೆ ಸೀಮಿತ ವಾಗಿದ್ದಾರೆ. ರಾಜ್ಯದ ಜನತೆಯ ಆರೋಗ್ಯದ ದೃಷ್ಟಿ ಯಿಂದ ವಿವೇಚನೆಯ ನಿರ್ಧಾರವನ್ನು ಸರಕಾರ ಕೈಗೊಳ್ಳಬೇಕಿದೆ. ಇದು ಈಗಿನ ತುರ್ತು.

Advertisement

Udayavani is now on Telegram. Click here to join our channel and stay updated with the latest news.

Next