ಪಣಜಿ : ಹೊರ ರಾಜ್ಯಗಳಿಂದ ಕೆಲಸ ಕಾರ್ಯದ ನಿಮಿತ್ತ ಗೋವಾ ಪ್ರವೇಶಿಸಲು ಅಥವಾ ಹೊರ ರಾಜ್ಯದ ನಿವಾಸಿಗರು ಕೋವಿಡ್ ಎರಡೂ ಲಸಿಕೆ ಪಡೆದಿದ್ದರೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಖಡ್ಡಾಯವಿಲ್ಲ ಎಂದು ಬಾಂಬೆ ಹೈ ಕೋರ್ಟ್ ನ ಗೋವಾ ನ್ಯಾಯಪೀಠವು ನಿನ್ನೆ(ಸೋಮವಾರ, ಜುಲೈ 12) ಸೂಚನೆ ನೀಡಿದೆಯಾದರೂ, ಗೋವಾ – ಬೆಳಗಾವಿ ಗಡಿ ಭಾಗದ ಚೆಕ್ ಪೋಸ್ಟನಲ್ಲಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಖಡ್ಡಾಯಗೊಳಿಸಿದ್ದು, ನೆಗೆಟಿವ್ ಪ್ರಮಾಣಪತ್ರವಿಲ್ಲದೆಯೇ ಯಾರನ್ನೂ ಗೋವಾ ಗಡಿ ಪ್ರವೇಶಿಸಲು ಬಿಡಲಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಉದ್ಯೋಗದ ನಿಮಿತ್ತ ಗೋವಾಕ್ಕೆ ಬರುವವರು ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಕೂಡ ಕೋವಿಡ್ ತಪಾಸಣೆಗೆ ಒಳಪಡುವ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ : ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ಸೆಪ್ಟೆಂಬರ್ ನಿಂದ ಉತ್ಪಾದನೆ ಪ್ರಾರಂಭ : RDIF, SII
ಕೇರಿ ಚೆಕ್ ಪೋಸ್ಟ್ ನಲ್ಲಿರುವ ವಾಳಪೈ ಉಪ ಜಿಲ್ಲಾಧಿಕಾರಿ ಕಾರ್ಯಾಲಯದ ಅಧಿಕಾರಿಗಳು ಮಾಹಿತಿ ನೀಡಿ, ಕೋವಿಡ್ ಎರಡೂ ಲಸಿಕೆ ಪಡೆದವರಿಗೆ ನೆಗೆಟಿವ್ ಪ್ರಮಾಣಪತ್ರದ ಅಗತ್ಯವಿಲ್ಲದೆಯೇ ಗೋವಾ ಪ್ರವೇಶಿಸುವ ಕುರಿತಂತೆ ಉಪಜಿಲ್ಲಾಧಿಕಾರಿಗಳಿಂದ ಇದುವರೆಗೂ ನಮಗೆ ಯಾವುದೇ ಆದೇಶ ಬಂದಿಲ್ಲ. ಇದರಿಂದಾಗಿ ಈ ಹಿಂದಿನ ಆದೇಶವನ್ನೇ ನಾವು ಪಾಲನೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ನ್ಯಾಯಾಲಯದ ಆದೇಶದ ನಂತರವೂ ಗೋವಾದ ಗಡಿಯಲ್ಲಿ ಎರಡು ಡೋಸ್ ಲಸಿಕೆ ಪಡೆದವರಿಗೂ ಕೂಡ ಕೋವಿಡ್ ತಪಾಸಣೆ ನಡೆಸಲಾಗುತ್ತಿರುವುದು ಗೊಂದಲ ಸೃಷ್ಠಿಯಾಗುವಂತಾಗಿದೆ.
ಇದನ್ನೂ ಓದಿ : ಅಮೀರ್ ಅವರಂತವರಿಂದ ದೇಶದ ಜನಸಂಖ್ಯೆ ಜಾಸ್ತಿ ಆಗ್ತಿದೆ: ಬಿಜೆಪಿ ಸಂಸದ ಸುಧೀರ್