Advertisement

ಅಮೆರಿಕಾದಿಂದ ಭಾರತಕ್ಕೆ ಬಂತು 545 ಆಕ್ಸಿಜನ್ ಕಾಂನ್ಸಟ್ರೇಟರರ್

10:49 AM May 04, 2021 | Team Udayavani |

ಹೊಸದಿಲ್ಲಿ:  ಐದನೇ ಬ್ಯಾಚ್‌ನ 545 ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ಅಮೆರಿಕಾದಿಂದ ಭಾರತಕ್ಕೆ ಇಂದು ಬಂದು ತಲುಪಿದೆ.

Advertisement

ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದು, “ಅಮೆರಿಕದಿಂದ 5ನೇ ಹಂತದ ವೈದ್ಯಕೀಯ ಉಪಕರಣಗಳು ಬಂದಿವೆ. 545 ಆಕ್ಸಿಜನ್ ಕಾನ್ಸಂಟ್ರೇಟರ್ ಮಂಗಳವಾರ ಆಗಮಿಸಿದೆ” ಎಂದು ಹೇಳಿದ್ದಾರೆ.

ಶನಿವಾರ ಅಮೆರಿಕದಿಂದ ಭಾರತಕ್ಕೆ 1000 ಆಕ್ಸಿಜನ್ ಸಿಲಿಂಡರ್‌, ಇತರ ವೈದ್ಯಕೀಯ ಉಪಕರಣಗಳನ್ನು ಹೊತ್ತ ವಿಮಾನ ಆಗಮಿಸಿತ್ತು. ಭಾನುವಾರ 1.25 ಲಕ್ಷ ರೆಮಿಡಿಸಿವಿರ್ ಲಸಿಕೆ ಹೊತ್ತ ವಿಮಾನ ಭಾರತಕ್ಕೆ ಬಂದಿತ್ತು.

ಇದನ್ನೂ ಓದಿ:ಕರ್ಫ್ಯೂ ಮುಂದುವರಿಕೆ ಬಗ್ಗೆ ಇಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಕಳೆದ ವಾರ ಅಮೆರಿಕದಿಂದ ಎನ್ 95 ಮಾಸ್ಕ್, ಆಕ್ಸಿಜನ್ ಸಿಲಿಂಡರ್ ಹೊತ್ತ ಮೊದಲ ವಿಮಾನ ಭಾರತಕ್ಕೆ ಆಗಮಿಸಿತ್ತು. ಇದುವರೆಗೂ ಒಟ್ಟು 5 ವಿಮಾನಗಳು ದೇಶಕ್ಕೆ ಆಗಮಿಸಿದ್ದು, ತುರ್ತು ಅಗತ್ಯವಿರುವ ವೈದ್ಯಕೀಯ ಉಪಕರಣಗಳ ವ್ಯವಸ್ಥೆಯನ್ನು ಅಮೆರಿಕ ಮಾಡಿದೆ.

Advertisement

ಭಾರತಕ್ಕೆ ವೈದ್ಯಕೀಯ ಸಲಕರಣೆಗಳನ್ನು ಹೊತ್ತು ಸಾಗಬೇಕಿರುವ ಎರಡು ವಿಮಾನಗಳು ತಾಂತ್ರಿಕ ಕಾರಣದಿಂದ ತಡವಾಗಿವೆ. ಬುಧವಾರ ಅವು ದೇಶವನ್ನು ತಲುಪುವ ನಿರೀಕ್ಷೆ ಇದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.

ಇದನ್ನೂ ಓದಿ: ಪರೀಕ್ಷೆಗೊಳಪಟ್ಟ ಮೂವರಲ್ಲಿ ಒಬ್ಬರಿಗೆ ಸೋಂಕು! ಪಟ್ಟಿಯಲ್ಲಿ ಮೊದಲ‌ ಸ್ಥಾನದತ್ತ ಕರ್ನಾಟಕ

Advertisement

Udayavani is now on Telegram. Click here to join our channel and stay updated with the latest news.

Next