Advertisement

ಖರೀದಿಗೆ ಮುಂದೆ ಬರ್ತಾ ಇಲ್ಲ ವ್ಯಾಪಾರಸ್ಥರು

11:21 AM Mar 31, 2020 | Suhan S |

ಕಲಬುರಗಿ: ಕೋವಿಡ್ 19 ಭೀತಿಯಿಂದ ಕಟಾವಿಗೆ ಬಂದಿರುವ ದ್ರಾಕ್ಷಿ, ಕಲ್ಲಂಗಡಿ, ಪಪ್ಪಾಯಿ ಹಾಗೂ ಹೂವು ಸೇರಿದಂತೆ ಇತರ ಬೆಳೆಗಳು ವ್ಯಾಪಾರಿಗಳು ಮುಂದೆ ಬಾರದಿರುವುದರಿಂದ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಕಟಾವಿಗೆ ಬಂದ ಈ ಬೆಳೆಗಳು ವಾರದೊಳಗೆ ಕಟಾವು ಮಾಡಿ ಮಾರುಕಟ್ಟೆಗೆ ಕಳುಹಿಸಬೇಕು. ಸಮಯ ಹೆಚ್ಚಾದರೆ ಬೆಳೆಗಳೆಲ್ಲ ಸಂಪೂರ್ಣ ಹಾಳಾಗುತ್ತವೆ.

Advertisement

ಮಾರುಕಟ್ಟೆ ತರಲು ಯಾವುದೇ ನಿರ್ಬಂಧ ಇಲ್ಲ. ಆದರೆ ವ್ಯಾಪಾರಿಗಳು (ಮಧ್ಯವರ್ತಿಗಳು) ಖರೀದಿಗೆ ಮುಂದೆ ಬಾರದ ಹಿನ್ನೆಲೆಯಲ್ಲಿ ರೈತರು ಮಾರುಕಟ್ಟೆಗೆ ಬಂದರೂ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ಸಾಗುತ್ತಿದ್ದಾರೆ. ಇನ್ನೂ ಕೆಲವರು ಅಗ್ಗದ ದರದಲ್ಲಿ ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಜಿಲ್ಲೆಯ ಗಡಿ ಭಾಗದಲ್ಲಿ ಬೆಳೆದಿರುವ ದ್ರಾಕ್ಷಿ, ಕಲ್ಲಂಗಡಿ ಇತರ ತೋಟಗಾರಿಕೆ ಬೆಳೆಗಳನ್ನು ನೆರೆಯ ಮಹಾರಾಷ್ಟ್ರಕ್ಕೆ ಸಾಗಿಸಲು ಗಡಿ ಭಾಗದಲ್ಲಿ ಬಿಡುತ್ತಿಲ್ಲ. ಕಸರತ್ತು ಮಾಡಿ ಸಾಗಾಟ ಮಾಡಿದರೂ ಬೆಲೆ ಸಿಕ್ತಾ ಇಲ್ಲ. ಒಟ್ಟಾರೆ ಬೆಳೆ ಬಂದರೂ ಲಾಭ ಇಲ್ಲ ಎನ್ನುವಂತಾಗಿದೆ.

ಇನ್ನೂ ಕೆಲವರು ವಾಹನಗಳಲ್ಲಿ ತಂದು ಕೈಗೆ ಎಷ್ಟಾದರೂ ಬೆಲೆ ಸೇರಲಿ ಎಂಬ ಉದ್ದೇಶದಿಂದ ಹೊಲದಲ್ಲಿಮ ಕೆಲಸಬಿಟ್ಟು ನಗರದ ವರ್ತುಲ ರಸ್ತೆಯಲ್ಲಿ ನಿಂತು ತಮ್ಮದೇಯಾದ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೀಗೆ ಕೊರೊನಾ ಹಲವು ಸಂಕಷ್ಟಗಳನ್ನು ಎದುರಿಗೆ ತಂದಿದೆ.

ತೋಟಗಾರಿಕೆ ಬೆಳೆ ಹಾಗೂ ಕಾಯಿಪಲ್ಲೆ ಅವಶ್ಯಕ ವಸ್ತುಗಳ ಪಟ್ಟಿಯಲ್ಲಿ ಬರುವುದರಿಂದ ಸಾಗಾಣಿಕೆಗೆ ಯಾವುದೇ ನಿರ್ಬಂಧವಿಲ್ಲ. ತೋಟಗಾರಿಕೆ ಬೆಳೆಗಳು ಅಂತಾರಾಜ್ಯ ಪೂರೈಕೆಗೂಯಾವುದೇ ನಿರ್ಬಂಧವಿಲ್ಲ. –ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next