Advertisement

ಕೋವಿಡ್‌ 19ಗೆ ಮಾಗಡಿಯಲ್ಲಿ ಮತ್ತೊಂದು ಬಲಿ

06:41 AM Jun 25, 2020 | Lakshmi GovindaRaj |

ರಾಮನಗರ/ಮಾಗಡಿ/ಚನ್ನಪಟ್ಟಣ: ಜಿಲ್ಲೆಯಲ್ಲಿ ಬುಧವಾರ ಕೋವಿಡ್‌-19 ವೈರಸ್‌ನ 36 ಹೊಸ ಪ್ರಕರಣಗಳು ಪತ್ತೆ ಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 148ಕ್ಕೆ ಏರಿದೆ. ಮಾಗಡಿಯಲ್ಲಿ 60 ವರ್ಷ ವ್ಯಕ್ತಿಯೊಬ್ಬರು  ಕೋವಿಡ್‌ -19 ಸೋಂಕಿಗೆ ಬಲಿಯಾಗಿದ್ದಾರೆ. ಬುಧವಾರ ಮಾಗಡಿ ತಾಲೂಕಿನಲ್ಲಿ 11, ರಾಮನಗರದಲ್ಲಿ 5, ಕನಕಪುರದಲ್ಲಿ 17 ಮತ್ತು ಚನ್ನಪಟ್ಟಣದಲ್ಲಿ 3 ಹೊಸ ಪ್ರಕರಣ ಗಳು ಪತ್ತೆಯಾಗಿವೆ.

Advertisement

ಬುಧವಾರ ಪ್ರಕಟವಾದ ಪರೀಕ್ಷಾ ಫ‌ಲಿತಾಂಶಗಳ ಪೈಕಿ 131 ಫ‌ಲಿತಾಂಶಗಳು ನೆಗಟಿವ್‌ ಆಗಿವೆ. ಒಟ್ಟಾರೆ ಮಾಗಡಿಯಲ್ಲಿ 39, ರಾಮನಗರದಲ್ಲಿ 27, ಕನಕ ಪುರದಲ್ಲಿ 55 ಮತ್ತು ಚನ್ನಪಟ್ಟಣದಲ್ಲಿ 27 ಪ್ರಕರಣಗಳು ಪತ್ತೆ ಯಾಗಿವೆ. ಜಿಲ್ಲೆಯಲ್ಲಿ ಒಟ್ಟು 4 ಮಂದಿ  ಸಾವನ್ನಪ್ಪಿದ್ದಾರೆ  (ಜಿಲ್ಲೆಯ ಮೂಲದ ಇಬ್ಬರು ಬೆಂಗಳೂರಿನಲ್ಲಿ ಸಾವನ್ನಪ್ಪಿ ದ್ದಾರೆ. ಇದು ಸೇರಿದರೆ 6 ಪ್ರಕರಣಗಳಾಗುತ್ತವೆ).

ಮಾಗಡಿಯಲ್ಲಿ ವೃದ್ಧ ಬಲಿ: ಮಾಗಡಿಯಲ್ಲಿ ಕೋವಿಡ್‌ 19ಗೆ ಮತ್ತೊಂದು ಬಲಿಯಾಗಿದೆ. ಪಟ್ಟಣದ ರಾಜ್‌ಕುಮಾರ್‌ ರಸ್ತೆಯ 60 ವರ್ಷದ ವ್ಯಕ್ತಿ ಬಲಿಯಾಗಿದ್ದು, ತಾಲೂಕಿನಲ್ಲಿ ಇದು 3ನೇ ಬಲಿಯಾಗಿದೆ. ಕಳೆದ ವಾರವಷ್ಟೆ ಕೋವಿಡ್‌  19 ಸೋಂಕಿನಿಂದಾಗಿ ರಾಮನಗರ ಕೋವಿಡ್‌ ಆಸ್ಪತ್ರೆಗೆ ದಾಖ ಲಿಸ ಲಾಗಿತ್ತು. ಉಸಿರಾಟ ತೊಂದರೆ ಹೆಚ್ಚುತ್ತಿದ್ದಂತೆ ಬೆಂಗ ಳೂರಿನ ವಿಕ್ಟೋರಿಯಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸ ಲಾಗಿತ್ತು.

ಅಲ್ಲಿ ಚಿಕಿತ್ಸೆ ಫ‌ಲಕಾರಿ ಯಾಗದೆ  ವ್ಯಕ್ತಿ ಮೃತಪಟ್ಟಿದ್ದಾರೆ. ಜತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಮಂದಿಗೆ ಕೋವಿಡ್‌ 19 ಪಾಸಿಟವ್‌ ಬಂದಿದ್ದು, ಅವರನ್ನು ರಾಮನಗರ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬುಧವಾರ ಸಹ ಪ್ರಾಥಮಿಕ ಕಾಂಟ್ಯಾಕ್ಟ್ ಹೊಂದಿದ್ದ  ಇನ್ನೂ ನಾಲ್ಕು ಮಂದಿಗೆ ಕೋವಿಡ್‌ 19 ಪಾಸಿಟಿವ್‌ ಕಾಣಿಸಿಕೊಂಡಿದೆ ಎಂಬ ಮಾಹಿತಿ ತಿಳಿದು ಬಂದಿದೆ. ತಿರುಮಲೆ, ವೆಂಕಟಪ್ಪ ಗಲ್ಲಿ, ರಾಜ್‌ಕುಮಾರ್‌ ರಸ್ತೆ ಸೀಲ್‌ಡೌನ್‌ ಆಗಿದೆ. ಪುರ ಸಭೆಯಿಂದ ಜಾಗೃತಿ  ಮೂಡಿಸಲಾಗುತ್ತಿದೆ.

ಪಟ್ಟಣದಲ್ಲಿ ಸ್ವಯಂ ಪ್ರೇರಿತ ವಾಗಿ ಜನರೇ ಲಾಕ್‌ಡೌನ್‌ ವಿಧಿಸಿಕೊಂಡಿದ್ದು, ಅಂಗಡಿ, ಹೋಟೆಲ್‌, ಮಾರುಕಟ್ಟೆ, ಬೀದಿ ವ್ಯಾಪಾರಿ ಗಳು, ಲಾಕ್‌ ಡೌನ್‌ಗೆ ಸ್ಪಂದಿಸುತ್ತಿದ್ದಾರೆ. ಆದರೆ ಹೊರಗಡೆಯವರನ್ನು ತಡೆಯಲಾಗುತ್ತಿಲ್ಲ. ಹೀಗಾಗಿ ಎಲ್ಲರೂ ಸ್ವಯಂ ಪ್ರೇರಣೆ  ಯಿಂದ ಲಾಕ್‌ಡೌನ್‌ಗೆ ಸಹರಿಸಬೇಕಿದೆ ಎಂದು ನಾಗರಿಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಯುವತಿಗೆ ಕೋವಿಡ್‌ 19 ಸೋಂಕು ದೃಢ: ಪಟ್ಟಣದ ಕುವೆಂಪು ನಗರ 5ನೇ ಅಡ್ಡರಸ್ತೆಯಲ್ಲಿ ಯುವತಿ ಯೊಬ್ಬರಿಗೆ ಕೋವಿಡ್‌ 19 ದೃಢಪಟ್ಟಿದ್ದು, ತಾಲೂಕು ಆಡಳಿತ ಆಕೆ ವಾಸವಿರುವ ಇಡೀ ಪ್ರದೇಶ ಸೀಲ್‌ಡೌನ್‌ ಮಾಡಿದೆ. ಸೋಂಕು ಹರಡಬಹುದಾದ ಹಿನ್ನೆಲೆಯಲ್ಲಿ 5ನೇ ಅಡ್ಡರಸ್ತೆಯನ್ನು ಕಂಟೈನ್ಮೆಂಟ್‌ ಜೋನ್‌ ಎಂದು ಗುರುತಿಸಲಾಗಿದ್ದು, ಸುತ್ತಲಿನ ಪ್ರದೇಶ ಬಫರ್‌ಜೋನ್‌ ಆಗಿ ಪರಿವರ್ತಿಸಲಾಗಿದೆ. ಯುವತಿ ಯನ್ನು ಚಿಕಿತ್ಸೆಗಾಗಿ ರಾಮನಗರ ಕೋವಿಡ್‌ ಆಸ್ಪತ್ರೆಗೆ  ದಾಖಲಿಸಲಾಗಿದೆ.

ಸೋಂಕಿತೆ ಸಂಪರ್ಕದಲ್ಲಿರುವ ಕುಟುಂಬಸ್ಥರು ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದವರನ್ನು ತಾಲೂಕಿನ ಹೊನ್ನಾಯ್ಕನಹಳ್ಳಿಯ ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸಲಾಗಿದೆ. ಸೋಂಕಿತೆ ವಾರದ ಹಿಂದೆ ವಿವಾಹ  ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು ಎನ್ನಲಾಗಿದ್ದು, ಆಕೆಯ ಪೂರ್ಣ ಪ್ರವಾಸದ ವಿವರ ಪಡೆಯಲಾಗುತ್ತಿದೆ. ಪಟ್ಟಣದ ಮಧ್ಯಭಾಗಕ್ಕೆ ಕೋವಿಡ್‌ 19 ಕಾಲಿಟ್ಟಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ. ಸೀಲ್‌ಡೌನ್‌  ಪ್ರದೇಶದ ನಿವಾಸಿಗಳು ಮನೆಯಿಂದ ಹೊರಬಾರದಂತೆ ಹಾಗೂ ಅವರಿಗೆ ಸಮಸ್ಯೆಯಾಗದಂತೆ ತಾಲೂಕು ಆಡಳಿತ ಕ್ರಮ ವಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next