ನವ ದೆಹಲಿ : ಕೋವಿಡ್ ದಿನನಿತ್ಯ ಹೆಚ್ಚಳ ವಾಗುತ್ತಿದೆ. ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ದೇಶದಾದ್ಯಂತ ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಇಂದು(ಭಾನುವಾರ, ಏ. 18) ಹೇಳಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಸಿಬಲ್, ಕೋವಿಡ್ 19 ಪ್ರಕರಣಗಳು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಗುಣಮುಖವಾಗುತ್ತಿರುವ ಸಂಖ್ಯೆ ಇಳಿಮುಖವಾಗುತ್ತಿದೆ. ಚೇತರಿಕೆಗಿಂತ ವೇಗವಾಗಿ ಸೋಂಕು ಹರಡುತ್ತಿದೆ. ಮೋದೀಜಿ, ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿ. ಚುನಾವಣಾ ಆಯೋಗ : ಚುನಾವಣಾ ಪ್ರಚಾರಗಳ ನಿಷೇಧವನ್ನು ಘೋಷಿಸಿ” ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಇನ್ನು, ಕೇಂದ್ರ ಸರ್ಕಾರವನ್ನುವು ಜನರನ್ನು ಕಷ್ಟಕ್ಕೆ ದೂಡುತ್ತಿದೆ, ದೇಶವನ್ನು ಭೀಕರ ವಿಪತ್ತಿಗೆ ತಳ್ಳಿದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿ ಡಬ್ಲ್ಯು ಸಿ) ನಿನ್ನೆ(ಶನಿವಾರ, ಏ.17) ಹೇಳಿಕೆ ನೀಡಿತ್ತು.
Related Articles
ಓದಿ : ಮೊಬೈಲ್ ಖರೀದಿಸಲು ಹಣ ಕೊಡದಿದ್ದಕ್ಕೆ ಅಜ್ಜಿಯ ಕುತ್ತಿಗೆ ಹಿಸುಗಿ ಕೊಂದ ಮೊಮ್ಮಗ!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಿ ಡಬ್ಲ್ಯು ಸಿ ಸಭೆಯಲ್ಲಿ ನೀಡಿದ ಸಲಹೆಗಳನ್ನು ಒಳಗೊಂಡಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲಿದೆ ಎಂದು ಸಿ ಡಬ್ಲ್ಯ ಸಿ ಹೇಳಿದೆ ಎಂದು ಸುದ್ದಿ ಸಂಸ್ಥೆ ಐ ಎ ಎನ್ ಎಸ್ ತಿಳಿಸಿದೆ.
ಇನ್ನು, ಕೋವಿಡ್ ಸೋಂಕು ದೇಶದಾದ್ಯಂತ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪಶ್ಚಿಮ ಬಂಗಾಳದಲ್ಲಿ ಮುಂಬರುವ ಎಲ್ಲಾ ಸಾರ್ವಜನಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದರು. ಮಾತ್ರವಲ್ಲದೇ, ಮುಂಬರುವ ಹಂತದ ಚುನಾವಣೆಗಾಗಿ ಚುನಾಚಣಾ ಪ್ರಚಾರಗಳನ್ನು ಸಾರ್ವಜನಿಕವಾಗಿ ನಡೆಸದಂತೆ ಅವರು ಇತರೆ ರಾಜಕೀಯ ನಾಯಕರಿಗೂ ಮನವಿ ಮಾಡಿಕೊಂಡರು.
ಓದಿ : ಮಂಗಳೂರು: ಸಾಕ್ಸ್ ಒಳಗೆ ಅರ್ಧ ಕೆ.ಜಿ ಚಿನ್ನ ಅಕ್ರಮ ಸಾಗಾಟ ಮಾಡಿದ ಪ್ರಯಾಣಿಕ ವಶಕ್ಕೆ