Advertisement

ಕೋವಿಡ್ ಅಟ್ಟಹಾಸ : ಏಪ್ರಿಲ್ 9 ರಿಂದ 19ರವರೆಗೆ ಚತ್ತೀಸ್ ಗಡದ ರಾಯಪುರ ಲಾಕ್ ಡೌನ್!

07:04 PM Apr 07, 2021 | Team Udayavani |

ನವದೆಹಲಿ : ಕೋವಿಡ್ ಸೋಂಕಿನ ಭಾರೀ ಹೆಚ್ಚಳದ ಹಿನ್ನೆಲೆಯಲ್ಲಿ ಚತ್ತೀಸ್ ಗಡದ ರಾಯಪುರದಲ್ಲಿ ಏಪ್ರಿಲ್ 9 ರಿಂದ ಏಪ್ರಿಲ್ 19ರವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

Advertisement

ಕಳದೆ ಕೆಲವು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿದೆ. ಕಳೆದ ಮಂಗಳವಾರ 9921 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಚತ್ತೀಸ್ ಗಡ ಮುಖ್ಯಮಂತ್ರಿ ಭೂಪೇಶ್ ಭಗೆಲ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಸ್ಪತ್ರೆ ಮತ್ತು ಬೆಡ್ ಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕೋವಿಡ್ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚುತ್ತಿದೆ. ಅನಾವಶ್ಯಕವಾಗಿ ಯಾರೂ ಕೂಡ ಹೊರಗಡೆ ಓಡಾಡಬೇಡಿ ಎಂದು ಸಿಎಂ ಭೂಪೇಶ್ ತಿಳಿಸಿದ್ದಾರೆ.

ಕಳೆದ ಮಂಗಳವಾರದವರೆಗೆ ಚತ್ತಿಸ್ ಗಡದಲ್ಲಿ ಮೊಟ್ಟು 3,86,269 ಕೋವಿಡ್ ‍ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 4,416 ಜನ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next