Advertisement

ತಿಂಗಳಲ್ಲೇ ರಾಜ್ಯದಲ್ಲಿ ಲಕ್ಷ ಕೋವಿಡ್ 19 ಪ್ರಕರಣ

02:54 AM Aug 01, 2020 | Hari Prasad |

ಬೆಂಗಳೂರು: ಕೋವಿಡ್ 19 ತೀವ್ರತೆಯ ಕುರಿತು ತಜ್ಞರ ಭವಿಷ್ಯ ನಿಜವಾಗುತ್ತಿದೆ.

Advertisement

ರಾಜ್ಯದಲ್ಲಿ ಒಂದೇ ತಿಂಗಳಲ್ಲಿ ಒಂದು ಲಕ್ಷ ಮಂದಿಗೆ ಸೋಂಕು ತಗಲಿದ್ದರೆ, ಎರಡು ಸಾವಿರ ಮಂದಿ ಮೃತಪಟ್ಟಿದ್ದಾರೆ.

ಇದರ ಬೆನ್ನಲ್ಲೇ ಆಗಸ್ಟ್‌ನಲ್ಲಿ ಸೋಂಕು ದುಪ್ಪಟ್ಟಾಗಲಿದೆ ಎಂದು ತಜ್ಞರು ಸುಳಿವು ನೀಡಿರುವುದು ಆತಂಕ ಹೆಚ್ಚಿಸಿದೆ.

ಜುಲೈಯಲ್ಲಿ 1,08,873 ಮಂದಿ ಸೋಂಕುಪೀಡಿತರಾಗಿದ್ದು, 2,068 ಮಂದಿ ಮೃತಪಟ್ಟಿದ್ದಾರೆ. ರಾಜ್ಯವು ಒಟ್ಟು ಪ್ರಕರಣಗಳು ಮತ್ತು ಸಾವಿನಲ್ಲಿ 5ನೇ ಸ್ಥಾನಕ್ಕೆ, ಸಕ್ರಿಯ ಪ್ರಕರಣಗಳಲ್ಲಿ 2ನೇ ಸ್ಥಾನಕ್ಕೆ ತಲುಪಿದೆ.

ಗುಣಮುಖಗೊಂಡವರ ಸಂಖ್ಯೆ ಹೆಚ್ಚಳ
ರಾಜ್ಯದಲ್ಲಿ ಶುಕ್ರವಾರ 3 ಸಾವಿರಕ್ಕಿಂತ ಹೆಚ್ಚು ಮಂದಿ ಕೋವಿಡ್ 19ನಿಂದ ಗುಣ ಹೊಂದಿದ್ದು, ಸೋಂಕಿನಿಂದ ಮುಕ್ತರಾದವರ ಸಂಖ್ಯೆ 50 ಸಾವಿರದ ಗಡಿಗೆ ಸಮೀಪಿಸಿದೆ. ಶುಕ್ರವಾರ 5,483 ಹೊಸ ಸೋಂಕು ಪತ್ತೆಯಾಗಿವೆ, 84 ಮಂದಿ ಮೃತಪಟ್ಟಿದ್ದಾರೆ.

Advertisement

ವೈದ್ಯರಿಗೆ ಸಮರ್ಪಕ ವೇತನ ಪಾವತಿಸಿ: ಸುಪ್ರೀಂ
ಕೋವಿಡ್ 19 ಸೇನಾನಿ ವೈದ್ಯರು ಮತ್ತಿತರ ವೈದ್ಯಕೀಯ ಸಿಬಂದಿಗೆ ಸರಿಯಾಗಿ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ವೇತನ ಪಾವತಿಗೆ ಹೊಸ ಆದೇಶ ಹೊರಡಿಸುವಂತೆ ಸೂಚಿಸಿದೆ. ಕರ್ನಾಟಕ, ಪಂಜಾಬ್‌, ಮಹಾರಾಷ್ಟ್ರ ಮತ್ತು ತ್ರಿಪುರಾಗಳಲ್ಲಿ ಸಮರ್ಪಕ ವೇತನ ಪಾವತಿಯಾಗುತ್ತಿಲ್ಲ ಎಂದು ಕೇಂದ್ರ ಸರಕಾರ ಕೋರ್ಟ್‌ ಗಮನಕ್ಕೆ ತಂದಿದೆ.

ಜಾಗತಿಕ ಸೋಂಕು ಪೀಡಿತರ ಸಂಖ್ಯೆ: 1,76,14,733

ಒಟ್ಟು ಸಾವು (ಜಗತ್ತು): 6,79,396

ಭಾರತ (ಸೋಂಕು): 16,90,546

ಸಾವು (ಭಾರತ): 36,497

ಚೇತರಿಕೆ: 10,93,747

ಕರ್ನಾಟಕ (ಸೋಂಕು): 1,24,115

Advertisement

Udayavani is now on Telegram. Click here to join our channel and stay updated with the latest news.

Next