Advertisement

ಫೋನ್‌ನಲ್ಲಿ ಕೋವಿಡ್‌ 19 ವರದಿ ಕೊಡುವಂತಿಲ್ಲ

06:07 AM Jun 30, 2020 | Lakshmi GovindaRaj |

ಬೆಂಗಳೂರು: ಖಾಸಗಿ ಪ್ರಯೋಗಾಲಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಸುವ ಕೋವಿಡ್‌ 19 ತಪಾಸಣೆ ವರದಿಗಳನ್ನು ದೂರವಾಣಿ ಮೂಲಕ ರೋಗಿಗಳಿಗೆ ನೇರವಾಗಿ ತಿಳಿಸುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ.

Advertisement

ರೋಗಿಗಳಿಗೆ ನೇರವಾಗಿ  ತಿಳಿಸುವುದರಿಂದ ಅನಗತ್ಯ ಆತಂಕಕ್ಕೆ ಕಾರಣವಾಗುತ್ತಿದ್ದು, ಜತೆಗೆ  ರೋಗಿಗಳು ಆಸ್ಪತ್ರೆಗೆ ತೆರಳಲು ಮುಂದಾದಾಗ ಹಾಸಿಗೆ ಲಭ್ಯತೆ ಇಲ್ಲದ ಪ್ರಕರಣ ಸರ್ಕಾರದ ಗಮನಕ್ಕೆ ಬಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್‌ 19 ತಪಾಸಣೆ  ವರದಿಗಳನ್ನು ರೋಗಿಗಳಿಗೆ ನೇರವಾಗಿ ನೀಡುವುದು ತಕ್ಷಣವೇ ನಿಲ್ಲಿಸುವಂತೆ ಸೂಚಿಸಲಾಗಿದೆ. ತಪಾಸಣಾ ವರದಿ ಮಾಹಿತಿಯನ್ನು ಯಾರಾದರೂ ರೋಗಿಗೆ ನೇರವಾಗಿ ಹಂಚಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಸರ್ಕಾರಿ ಅಥವಾ ಖಾಸಗಿ ಪ್ರಯೋಗಾಲಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿದ ಕೋವಿಡ್‌-19 ದೃಢಪಟ್ಟಲ್ಲಿ ಪರೀಕ್ಷಾ ಮಾಹಿತಿಯನ್ನು ಇಂಡಿ ಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌ ಹಾಗೂ ಬಿಬಿಎಂಪಿ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಬೇಕು. ಈ ಮಾಹಿತಿ ಆಧಾರದ ಮೇಲೆ  ಆರೋಗ್ಯ ಅಧಿಕಾರಿಗಳು ಗುಣ ಲಕ್ಷಣ ಆಧರಿಸಿ ರೋಗಿಗಳನ್ನು ಕೋವಿಡ್‌ ಆಸ್ಪತ್ರೆಗೆ ಸೇರಿಸಬೇಕೋ ಬೇಡವೋ, ಕೋವಿಡ್‌ ಕೇರ್‌ ಸೆಂಟರ್‌ಗೆ ಕಳುಸಿಸಬೇಕೋ ಎಂಬುದನ್ನು ನಿರ್ಧರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next