Advertisement

24 ಗಂಟೆಯಲ್ಲಿ 773 Covid ಪ್ರಕರಣ ಪತ್ತೆ, ಸಾವಿನ ಸಂಖ್ಯೆ 149ಕ್ಕೆ ಏರಿಕೆ: ಕೇಂದ್ರ

09:09 AM Apr 09, 2020 | Nagendra Trasi |

ನವದೆಹಲಿ: ಕಳೆದ 24ಗಂಟೆಯಲ್ಲಿ ದೇಶಾದ್ಯಂತ 773 ಕೋವಿಡ್ 19 ವೈರಸ್ ನ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಭಾರತದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 5,274ಕ್ಕೆ ಏರಿದೆ. ಮಂಗಳವಾರ 32 ಮಂದಿ ಸಾವನ್ನಪ್ಪಿದ್ದರು. 402 ಸೋಂಕು ಪೀಡಿತರು ಚೇತರಿಸಿಕೊಂಡು ಡಿಸ್ ಚಾರ್ಜ್ ಆಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

Advertisement

ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಕ್ಷಿಪ್ರವಾಗಿ ಹೆಚ್ಚಳವಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾರಣಾಂತಿಕ ಕೋವಿಡ್ ವೈರಸ್ ಗೆ ದೇಶಾದ್ಯಂತ ಈವರೆಗೆ ಒಟ್ಟು 149 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿರುವ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನರ್ಸ್ ಗಳು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಮಾರಕ ಸೋಂಕು ತಗುಲಿಲ್ಲ. ಇದಕ್ಕೆ ಅಗತ್ಯವಿರುವ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ದೇಶಕ್ಕೆ ಅಗತ್ಯವಿರುವ ಔಷಧದ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾವು ಈಗಲೇ ಸ್ಪಷ್ಟಪಡಿಸುತ್ತಿದ್ದೇವೆ, ಇಂದು ಮಾತ್ರವಲ್ಲ, ಭವಿಷ್ಯದಲ್ಲಿಯೂ ಕೂಡಾ ನಮಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಕೊರತೆ ಉಂಟಾಗುವುದಿಲ್ಲ. ಯಾವಾಗ ಅಗತ್ಯವಿದೆಯೋ ಅಷ್ಟು ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next