Advertisement

ಕೋವಿಡ್‌ 19: 10 ಗ್ರಾಮ ಸೀಲ್‌ಡೌನ್‌

05:07 AM Jul 05, 2020 | Team Udayavani |

ಕೆ.ಆರ್‌.ನಗರ: ಕೋವಿಡ್‌ 19 ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳನ್ನು  ಸೀಲ್‌ಡೌನ್‌ ಮಾಡಲಾಗಿದೆ. ಜತೆಗೆ ಸೀಲ್‌ಡೌನ್‌ ಪ್ರದೇಶಗಳನ್ನು ಕಂಟೈನ್ಮೆಂಟ್‌ ಮತ್ತು ಬಫ‌ರ್‌ ಝೋನ್‌ ಎಂದು ಗುರುತಿಸಲಾಗಿದ್ದು, ಈವರೆಗೆ ತಾಲೂಕಿನಲ್ಲಿ 11 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಇಬ್ಬರು ಮೃತಪಟ್ಟು, ಮತ್ತಿಬ್ಬರು ಗುಣಮುಖರಾಗಿದ್ದಾರೆ.

Advertisement

ಉಳಿದ 7 ಮಂದಿ ಮೈಸೂರಿನ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ಮುಸ್ಲಿಂ ಬ್ಲಾಕ್‌, ಅರ್ಕನಾಥ ರಸ್ತೆ, ಆಂಜನೇಯ ಬಡಾವಣೆಯ ರಸ್ತೆ ಮತ್ತು 7ನೇ ರಸ್ತೆಯ ಮಮತಾಗಂಗಾ ಮೆಟರ್ನಿಟಿ ಸೆಂಟರ್‌ ಸುತ್ತ ಮುತ್ತಲ ಪ್ರದೇಶ ಸೀಲ್‌ ಡೌನ್‌ ಮಾಡಲಾಗಿದೆ. ತಾಲೂಕಿನ ಬಸವರಾಜಪುರ, ಹಂಪಾಪುರ, ಸಾಲಿಗ್ರಾಮ, ಕಂಚಿನಕೆರೆ, ಮುದುಗುಪ್ಪೆ ಗ್ರಾಮಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಮಧ್ಯಾಹ್ನದವರೆಗೆ ವ್ಯಾಪಾರ: ಪಟ್ಟಣ ಸೇರಿದಂತೆ ತಾಲೂಕಿನ 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿ ಮತ್ತು ವಾಣಿಜ್ಯ ವಹಿವಾಟಿಗೆ ಅವಕಾಶ ನೀಡಲಾಗಿದೆ. ಹಾಲು, ಮೆಡಿಕಲ್‌ ಹೊರತುಪಡಿಸಿ ಉಳಿದ ಎಲ್ಲಾ ವಹಿವಾಟುಗಳನ್ನು ಮಧ್ಯಾಹ್ನ 2 ಗಂಟೆ ನಂತರ ನಿಷೇಧಿಸಲಾಗಿದೆ. ತಾಲೂಕಿನಲ್ಲಿ ಪಾಸಟಿವ್‌ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ವಹಿಸಲಾಗಿದೆ ಸರ್ಕಾರದ ಮಾರ್ಗ ಸೂಚಿ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next