Advertisement
ವೈಜಾnನಿಕ ಕೃಷಿ ಮಾಡುತ್ತಿರುವ ಪುನೀತರೆಡ್ಡಿ ಎಂಬ ರೈತರು ತಮ್ಮ 60 ಎಕರೆ ಭೂಮಿಯಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದು ಸದÂ ಉತ್ತಮ ಇಳುವರಿ ನೀಡುವ ಹಂತದಲ್ಲಿದೆ. ಬಿಸಿಲಿನ ಅಧಿಕ ತಾಪಮಾನದ ಮುನ್ನೆಚ್ಚರಿಕೆ ಕ್ರಮವಾಗಿ ಫಸಲು ಕೈ ತಪ್ಪಬಾರದು ಎಂದು ತೆಳುವಾದ ಹೊದಿಕೆ ಹಾಕಿದ್ದಾರೆ.
Related Articles
Advertisement
ತಂತ್ರಜಾnನದ ಅಂಶ ಹೊಂದಿದ ಹೊದಿಕೆಗುಜುರಾತನಿಂದ ಕ್ರಾಪ್ ಗ್ರೌ ಕವರ್ ಗ್ರೌಥ ಪೊ›ಟೆಕ್ಷನ್ (GROW COVER GROWTH PROTECTION) ಎಂಬ ಹೆಸರಿನ ತೆಳುವಾದ ಈ ಬಟ್ಟೆ ಸೂರ್ಯನ ನೇರಾಳತೀತ ಕಿರಣಗಳಿಗೆ ತಡೆ ಗೋಡೆಯಾಗಿರುವುದರ ಜೊತೆಗೆ ಒಳಗಿನ ಉಷ್ಣಾಂಶವನ್ನು ಹೊರ ಹಾಕುವ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಬೆಳೆಗೆ ಬೇಕಾಗುವಷ್ಟು ಗಾಳಿ ಹಾಗೂ ಬೆಳಕು ಬಿಡುವ ವ್ಯವಸ್ಥೆ ಹೊಂದಿದೆ ಎಂದು ರೆಡ್ಡಿ ಹೇಳುತ್ತಾರೆ. ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಬರುವ ದಾಳಿಂಬೆ ಹಣ್ಣುಗಳ ಸರಾಸರಿ 60-70 ಸಾವಿರ ರೂಪಾಯಿ ಬೆಲೆ ತರುತ್ತವೆ. ಬಿರಿದ, ಬಣ್ಣ ರಹಿತವಾದ, ಸೈಜ್ ಇಲ್ಲದ ಹಾಗೂ ಉತ್ತಮ ಆಕಾರ ಹೊಂದಿಲ್ಲದಂತ ಶೇ. 20ರಷ್ಟು ಹಣ್ಣುಗಳು ಅರೆಬರೆ ಬೆಲೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ. ಇನ್ನೂ ಶೇ.30ರಷ್ಟು ಭಾಗ ಬಿಸಿಲಿನ ತಾಪಕ್ಕೆ ಹಾಳಾಗುತ್ತದೆ. ನೆರಳಿನ ಹೊದಿಕೆ ಹಾಕುವುದರಿಂದ ನೂರಕ್ಕೆ ನೂರರಷ್ಟು ಲಾಭ ಪಡೆಯಬಹುದು ಎಂಬ ಲೆಕ್ಕಾಚಾರ ಹಾಕಿದ್ದಾರೆ. ದಾಳಿಂಬೆ ಬೆಳೆಗೆಂದೆ ಸಿದ್ಧಪಡಿಸಿದ ಬಟ್ಟೆ ಇದು
ಇದು ವಿಶೇಷವಾಗಿ ಬೆಳೆಗಳ ರಕ್ಷಣೆಗೆ ಸಿದ್ದಪಡಿಸಿದ ಬಟ್ಟೆಯಾಗಿದೆ. ಈ ಬಟ್ಟೆಯನ್ನು ಕನಿಷ್ಟ 4-5 ತಿಂಗಳ ಬಳಸಬಹುದು. ಉಷ್ಣಂಶ ಹೆಚ್ಚಾದರೆ ಬೆಳೆಗಳಿಗೆ ರಕ್ಷಣೆ ನೀಡುವುದರ ಜೊತಗೆ ಉತ್ತಮ ಗಾಳಿ ಬೆಳಕು ನೀಡುತ್ತದೆ. ಇದನ್ನು ಬಳಸುವುದ ಹಿಂದೆ ಎರಡು ಕಾರಣಗಳು ಇವೆ. ಒಂದು ಡಿಸೆಂಬರನಿಂದ ಫೆಬ್ರವರಿ ವರೆಗೆ ಇಬ್ಬನಿ ಬಿಳುವುದರಿಂದ ಕಾಯಿಗಳ ಮೇಲೆ ನೀರಿನ ಹನಿ ಕುಳಿತು ಬಿಸಿಲಿಗೆ ಆವಿಯಾಗುತ್ತದೆ. ಆವಿಯಾದ ಭಾಗದಲ್ಲಿ ಸಣ್ಣ ಸಣ್ಣ ಚುಕ್ಕೆಗಳು ಮೂಡುತ್ತವೇ. ಚುಕ್ಕೆಗಳ ಭಾಗದ ಒಳಗಡೆ ಹಣ್ಣು ಕಲರ್‌ಫುಲ್ ಬರುವುದಿಲ್ಲ. ಹಣ್ಣಿನ ಮೇಲೆ ಚಿಕ್ಕೆಗಳು ಕಾಣುವುದರಿಂದ ಹಣ್ಣುಗಳಿಗೆ ಮಾರುಕಟೆಯಲ್ಲಿ ಉತ್ತಮ ಬೇಡಿಕೆ ಹಾಗೂ ಬೆಲೆ ಸಿಗುವುದಿಲ್ಲ. ಈಗ ಬೇಸಿಗೆ ಇರುವುದರಿಂದ, ಉಷ್ಣಾಂಶದಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಕಾಯಿಗಳ ಬೆಳವಣಿಗೆ ಕುಂಠಿತವಾಗುತ್ತದೆ. “ಸಧ್ಯ ನಮ್ಮ 60 ಎಕರೆ ಭೂವಿಯಲ್ಲಿ ಸುಮಾರು 250 ಟನ್ ಬೆಳೆ ಬರುವ ನಿರೀಕ್ಷೆ ಇದೆ. ನಾವು ಗಿಡಗಳನ್ನು ರಕ್ಷಣೆ ಮಾಡದೆ ಇದ್ದರೇ ಸುಮಾರು 120 ಟನ್ ಬೆಳೆ ಹಾಳಾಗುತ್ತದೆ. ಹೀಗಾಗಿ ಹಣ್ಣಿನ ರಕ್ಷಣೆಗಾಗಿ ಲಕ್ಷಾಂತರ ರೂ. ವೆಚ್ಚ ಮಾಡಿ ಹೊದಿಕೆ ಹಾಕಿದ್ದೇವೆ ಎನ್ನುತ್ತಾರೆ ಪುನೀತರೆಡ್ಡಿ. – ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ