Advertisement

ಕೊವ್ಯಾಕ್ಸಿನ್‌ ಲಸಿಕೆ ಪಡೆದವರಿಗೆ ನ.8 ರಿಂದ ಅಮೆರಿಕಕ್ಕೆ ತೆರಳಲು ಅವಕಾಶ

08:02 PM Nov 04, 2021 | Team Udayavani |

ನವದೆಹಲಿ : ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಲಸಿಕೆ ಹಾಕಿಸಿಕೊಂಡವರೂ, ನ.8ರಿಂದ ಅಮೆರಿಕಕ್ಕೆ ತೆರಳಲು ಸಾಧ್ಯವಿದೆ. ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಪಟ್ಟಿಯಲ್ಲಿ ಹೈದರಾಬಾದ್‌ ಕಂಪನಿ ಸಿದ್ಧಪಡಿಸಿದ ಲಸಿಕೆಗೆ ಮಾನ್ಯತೆ ಸಿಗುತ್ತಲೇ ಈ ನಿರ್ಧಾರ ಪ್ರಕಟವಾಗಿದೆ.

Advertisement

“ಎಎನ್‌ಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ)ದ ಮಾಧ್ಯಮ ವಕ್ತಾರ ಸ್ಕಾಟ್‌ ಪೌಲ್‌, “ಡಬ್ಲ್ಯೂಎಚ್‌ಒ ನಿರ್ಧರಿಸಿದಂತೆ ಕೊವ್ಯಾಕ್ಸಿನ್‌ ಲಸಿಕೆಯ 2 ಡೋಸ್‌ ಹಾಕಿಸಿಕೊಂಡವರೂ ನ.8ರಿಂದ ಅಮೆರಿಕಕ್ಕೆ ಪ್ರವೇಶ ಪಡೆಯಲು ಸಾಧ್ಯವಿದೆ’ ಎಂದು ಹೇಳಿದ್ದಾರೆ.

ಅದಕ್ಕೆ ಪೂರಕವಾಗಿ ಅಮೆರಿಕದ ಪ್ರವೇಶ ನಿಯಮಗಳಲ್ಲಿಯೂ ಬದಲು ಮಾಡಲಾಗಿದೆ.

ಇದನ್ನೂ ಓದಿ : ದಾರಿ ಕೇಳುವ ನೆಪದಲ್ಲಿ ಚಿನ್ನದ ಸರ ಎಗರಿಸಿದ ಕಳ್ಳರಿಗೆ ಜೈಲು ದಾರಿ ತೋರಿಸಿದ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next