ನವ ದೆಹಲಿ : ಭಾರತದಲ್ಲಿ ಲಭ್ಯವಿರುವ ಕೋವಿಡ್ -19 ಲಸಿಕೆಗಳಾದ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಅದಲು ಬದಲು ಪ್ರಮಾಣ ಪಡೆದುಕೊಂಡರೂ ಕೂಡ ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನ ತಿಳಿಸಿದೆ.
ಉತ್ತರಪ್ರದೇಶದಲ್ಲಿ ಮೇ ಹಾಗೂ ಜೂನ್ ನಡುವನಲ್ಲಿ ಈ ಅಧ್ಯಯನವನ್ನು ಮಾಡಲಾಯಿತು. ಕೋವಿಡ್ ಸೋಂಕಿನ ಯಾವುದೇ ರೂಪಾಂತರಿಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ : ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾದ ಆದೇಶವನ್ನು ಕೂಡಲೇ ಹಿಂಪಡೆಯಬೇಕು: ಸಿದ್ದರಾಮಯ್ಯ
ಈ ರೀತಿಯ ಅದಲು ಬದಲು( ಕೋವ್ಯಾಕ್ಸಿನ್ / ಕೋವಿಶೀಲ್ಡ್ ) ಲಸಿಕೆಗಳನ್ನು ಸ್ವೀಕಾರ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಕೂಡ ಅಧ್ಯಯನ ವರದಿ ತಿಳಿಸದೆ. ನಿರ್ದಿಷ್ಟ ಲಸಿಕೆಗಳ ಕೊರತೆಯ ಸವಾಲುಗಳಿಂದ ಹೊರಬರಲು ಕೂಡ ಈ ವರದಿ ಸಹಾಯ ಮಾಡಲಿದೆ.
ಜುಲೈ 30 ರಂದು, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ನ ವಿಷಯ ತಜ್ಞರ ಸಮಿತಿಯು ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳ ಮಿಶ್ರಣ ಡೋಸ್‌ಗಳ ಕುರಿತು ಅಧ್ಯಯನ ನಡೆಸಲು ಶಿಫಾರಸು ಮಾಡಿತ್ತು. ಉತ್ತರ ಪ್ರದೇಶದನ್ನು ಮಾತ್ರ ಈ ಅಧ್ಯಯನಕ್ಕೆ ಒಳಪಡಿಸಿಕೊಂಡಿದ್ದರಿಂದ ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನವನ್ನು ಐಸಿಎಂಆರ್ ಮಾಡಬೇಕಿದೆ.
ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಏನ್ ಹೇಳಿದೆ..?
ಕಳೆದ ಜಲೈ ನ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್, ಅದಲು ಬದಲು ಲಸಿಕೆಗಳ ಸ್ವೀಕಾರ ಅಡ್ಡ ಪರಿಣಾಮ ಬೀರಬಹುದು. ಬೇರೆ ಬೇರೆ ಸಂಸ್ಥೆಗಳಿಂದ ಉತ್ಪಾದನೆಯಾಗುವುದರಿಂದ ಇದು ಅಪಾಯಕಾರಿ ಎಂದು ಹೇಳಿದ್ದರು.
ಇದನ್ನೂ ಓದಿ : ಗೋವಾ ವಾಸ್ಕೊ ವಿಮಾನ ನಿಲ್ದಾಣದಿಂದ ಯುಎಇ ವಿಮಾನ ಹಾರಾಟ ಆರಂಭ