Advertisement

ಕೊವ್ಯಾಕ್ಸಿನ್‌ ಲಸಿಕೆ ಶೇ 81ರಷ್ಟು ಪರಿಣಾಮಕಾರಿ : ಭಾರತ್ ಬಯೋಟೆಕ್

07:08 PM Mar 03, 2021 | Team Udayavani |

ನವದೆಹಲಿ :  ಭಾರತದಲ್ಲೇ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಕೊವ್ಯಾಕ್ಸಿನ್‌’ ಲಸಿಕೆಯು ಶೇ. 81 ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.

Advertisement

ಮತ್ತೊಂದು ವಿಷಯ ಅಂದ್ರೆ ಈ ಕೋವಿಡ್ ಲಸಿಕೆ ಅಮೆರಿಕಾದ ರೂಪಾಂತರ ಕೋವಿಡ್ ವೈರಸ್ ಸೋಂಕನ್ನೂ ಪರಿಣಾಮಕಾರಿಯಾಗಿ ಎದುರಿಸುತ್ತದೆ ಎಂದು ತಿಳಿಸಲಾಗಿದೆ

ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ನಂತ್ರ ಈ ಮಾಹಿತಿಯನ್ನು ನೀಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಹಯೋಗದಲ್ಲಿ ಕ್ಲಿನಿಕಲ್ ಟ್ರಯಲ್‌ ನಡೆದಿದ್ದು, ಇದಕ್ಕೆ 25,800 ಜನರು ಭಾಗವಹಿಸಿದ್ದರು. ಈ ಪೈಕಿ 43 ಜನರಿಗೆ ಕೋವಿಡ್ ಸೋಂಕು ಇದ್ದು, ಇವರಲ್ಲಿ ಕೇವಲ ಏಳು ಮಂದಿಗೆ ಪ್ರಯೋಗಾತ್ಮಕ ಲಸಿಕೆ ನೀಡಲಾಗಿತ್ತು. ಇನ್ನುಳಿದ 36 ಜನರು ಕೇವಲ ಪ್ರಯೋಗಗಳಿಗಷ್ಟೇ ಭಾಗಿಯಾಗಿದ್ದರು.

ಇನ್ನು ಕೋವ್ಯಾಕ್ಸಿನ್ ಕೊನೆಯ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುವ ಮುನ್ನವೇ ಭಾರತ ಸರ್ಕಾರವು ತುರ್ತು ಸಂದರ್ಭದಲ್ಲಿ ಕೋವ್ಯಾಕ್ಸಿನ್ ಬಳಕೆಗೆ ಅನುಮತಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next