Advertisement

ಶಿವಕೃಪೆಗೆ ಗುರು ಕರುಣೆ ಅವಶ್ಯ

03:27 PM Mar 19, 2017 | |

ಜೇವರ್ಗಿ: ಶಿವಕೃಪೆ ದೊರಕಬೇಕಾದರೇ ಗುರುಕರುಣೆ ಅವಶ್ಯಕವಾಗಿದೆ ಎಂದು ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು. ತಾಲೂಕಿನ ಶಖಾಪುರದ ತಪೋವನ ಮಠದಲ್ಲಿ ಸಿದ್ದರಾಮ ಶಿವಾಚಾರ್ಯರ ಜನ್ಮ ಸುವರ್ಣ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.

Advertisement

ಜಗತ್ತಿನ ಜೀವಿಗಳ ಮನಸ್ಸಿನಲ್ಲಿ ಸ್ವಸ್ವರೂಪವನ್ನು ಮುಚ್ಚಿಹಾಕುವ ಅಜ್ಞಾನವಿರುತ್ತದೆ. ಅದು ದೂರವಾದರೆ ಮಾತ್ರ ಜೀವಿಯ ಜನ್ಮ ಸಾರ್ಥಕವಾಗುತ್ತದೆ. ದೀಪವು ಬೆಳಗಿಸದೆ ಹೇಗೆ ಕತ್ತಲೆ ದೂರವಾಗುವುದಿಲ್ಲವೋ ಹಾಗೆಯೇ ಗುರುಕಾರುಣ್ಯ ಇಲ್ಲದೇ ಶಿಷ್ಯನ ಅನಾದಿ ಅಜ್ಞಾನ ದೂರವಾಗುವುದಿಲ್ಲ ಎಂದು ಹೇಳಿದರು.ಶಿಷ್ಯನು ಗುರುವಿಗೆ ಶರಣಾಗಿ ಗುರು ಪ್ರಸನ್ನನಾಗುವರೆಗೆ ಗುರುಕೃಪೆಗೆ ಅರ್ಹನಾಗುವುದಿಲ್ಲ.

ಶಿಷ್ಯನ ಜನ್ಮ ಪಾವನವಾಗಬೇಕು ಎಂದರೆ ತ್ರೀಕರಣ ಪೂರ್ವಕವಾಗಿ ಗುರುವಿನ ಸೇವೆ ಮಾಡಬೇಕಾಗುತ್ತದೆ. ಶಿವಜ್ಞಾನವನ್ನು ಅನುಗ್ರಹಿಸುವುದು ಉತ್ತಮ ಸಂಸ್ಕಾರ ಎನ್ನಲಾಗುತ್ತದೆ. ಸ್ಥೂಲದೇಹದ ಶುದ್ಧಿಗಾಗಿ ಮಾಡುವ ಇಷ್ಠಲಿಂಗ ಧಾರಣೆ ಜೀವಿಯ ಜೀವನದಲ್ಲಿ ಬದಲಾವಣೆ ತರುತ್ತದೆ. ಅಲ್ಲದೆ ನೀನೇ ಶಿವನ ಸ್ವರೂಪ ಎಂದು ಬೋಧಿಸುವ ದೀಕ್ಷೆಯು ವೇದ ದೀಕ್ಷೆ ಎನಿಸಿಕೊಳ್ಳುತ್ತದೆ.

ಅಲ್ಲದೆ ಶಿಷ್ಯನು ತನ್ನ ಸಾಧನೆ ಮೂಲಕ ಗುರುಕೃಪೆ ಪಡೆಯುವವಿಧಾನವನ್ನು ಕಲಿಯಬೇಕು. ಶಿಷ್ಯ ಮತ್ತು ಗುರುವಿನ ನಡುವೆ ಕಲಿಯುವ ಹಲವಾರು ವಿಧಾನಗಳು ಸಾರ್ಥಕತೆ ಕಡೆಗೆ ಕರೆದುಕೊಂಡು ಹೋಗುತ್ತವೆ. ಜೀವನದ ಪ್ರತಿಯೊಂದು ಹಂತದಲ್ಲಿ ಗುರು ಮಾರ್ಗದರ್ಶಕನಾಗಿ ಮಾತ್ರಕೆಲಸ ಮಾಡುತ್ತಾನೆ. ಸಾಧನೆ ಹಾದಿಯಲ್ಲಿ ನಡೆಯುವ ಶಿಷ್ಯನು ಉತ್ತಮ ಶಿಷ್ಯನಾಗಿ ಹೊರಬರಲು ಸಾಧ್ಯವಾಗುತ್ತದೆ.

ಧರ್ಮದ ತತ್ವವನ್ನು ಯಾರು ಉಪದೇಶ ಮಾಡುತ್ತಾರೋ ಅಂತವರನ್ನು ಜಗತ್ತು ಗುರು ಎಂದು ಒಪ್ಪಿಕೊಳ್ಳುತ್ತದೆ. ಶಿವನ ಪ್ರೀತಿಗೆ ಪಾತ್ರರಾಗಬೇಕಾದರೆ ಗುರುವಿನ ಮಾತನ್ನು ಶಿಷ್ಯ ಅನುಸರಿಸಬೇಕಾಗುತ್ತದೆ. ಇಂತಹ ಶಿವಜ್ಞಾನವನ್ನು ಲೋಕದ ಜನರು ತಿಳಿದುಕೊಳ್ಳಬೇಕು. ಮಹಾಜ್ಞಾನಿಯಾದವರು ಸಹ  ಗುರುವನ್ನು ಆರಾಧಿಸುತ್ತಾರೆ.ಗುರುವಾದವನು ಧರ್ಮದ ಸಾರವನ್ನು, ಧರ್ಮದ ತತ್ವಗಳನ್ನು ಶಿರಸಾವಹಿಸಿ ಅಧ್ಯಯನ ಮಾಡಬೇಕಾಗುತ್ತದೆ. 

Advertisement

ಅಂತಹ ಅಧ್ಯಯನದಿಂದ ದೊರಕುವ ಜ್ಞಾನವನ್ನು ಗುರು ಲೋಕಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು. ಗುರುವಿನ ಸ್ಥಾನವನ್ನು ಹಲವು ಕಾರಣದಿಂದ ವಿವರಿಸಿದರೂ ಮುಗಿಯದ ವಸ್ತುವಾಗಿದೆ ಎಂದು ಹೇಳಿದರು. ಮಠದ ಪೀಠಾಧಿಧಿಪತಿ ಸಿದ್ದರಾಮ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಮಹಾಲಿಂಗಪ್ಪ ಸಾಹು ಇಂಗಿನಶೆಟ್ಟಿ, ಶಿವಣ್ಣಗೌಡ ಮಂದ್ರವಾಡ,ಅಣ್ಣೆಪ್ಪ ಸಾಹು ಇಂಗಿನಶೆಟ್ಟಿ, ಅನೀಲ ಮರಗೋಳ, ಶರಣಬಸಪ್ಪ ಕೋಬಾಳ, ಶಿವಣ್ಣಗೌಡ ಮದ್ರಕಿ, ಬಸವರಾಜ ಕಂತಿ,

ಬಸವರಾಜು ಸಾಹು ಹಂಗರಗಿ, ಮಲ್ಲಣ್ಣ ಸಾಹು, ನಾಗು ರಾಂಪುರೆ, ನಿಂಗಣ್ಣ ಇವಣಿ, ಬಸವರಾಜಪ್ಪಗೌಡ ಹೊನ್ನಾಳ, ಸೋಮಶೇಖರ ಬಂಡಿ, ಪರಶುರಾಮ ಕಣ್ಣಿ, ಶಿವುಕುಮಾರ ಹಿರೇಮಠ, ರಾಯಗೊಂಡಪ್ಪ ಸಾಹು, ರಾಮರಾಯಗೌಡ, ಅಪ್ಪಾಸಾಬ ಉಮಾಶೆಟ್ಟಿ, ಗೀತಾ ಸಾಹೇಬಗೌಡ, ಡಾ| ಮಹೇಶ ಬಳಬಟ್ಟಿ, ಭೀಮಾಶಂಕರ ದಂಡಗುಲಕರ್‌, ಅರ್ಜುನಪ್ಪ ಜಮಾದಾರ, ರಾಜು ದೇವನೂರ, ಸಂತೋಷಕುಮಾರ ಕಾಳನೂರ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next