Advertisement

Toshakhana case: ಇಮ್ರಾನ್ ಖಾನ್ ಮತ್ತು ಪತ್ನಿಯ 14 ವರ್ಷಗಳ ಶಿಕ್ಷೆ ವಜಾ

04:55 PM Apr 01, 2024 | Team Udayavani |

ಇಸ್ಲಾಮಾಬಾದ್: ತೋಷಖಾನಾ ಉಡುಗೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಯ 14 ವರ್ಷಗಳ ಜೈಲು ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ಅಮಾನತುಗೊಳಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

Advertisement

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಲೆಕ್ಕಪತ್ರ ಬ್ಯೂರೋ (NAB) ಇಮ್ರಾನ್ ಮತ್ತು ಅವರ ಪತ್ನಿಯ ವಿರುದ್ಧ ಸೌದಿ ಯುವರಾಜನಿಂದ ಪಡೆದ ಆಭರಣ ಉಡುಗೊರೆಯನ್ನು ಅನ್ನು ಕಡಿಮೆ ಮೌಲ್ಯದ ಮೌಲ್ಯಮಾಪನ ಮಾಡಿ ಉಳಿಸಿಕೊಂಡಿದ್ದಕ್ಕಾಗಿ ಪ್ರಕರಣ ದಾಖಲಿಸಿತ್ತು. ಇಮ್ರಾನ್ ಅವರ ಪಾಕಿಸ್ಥಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಚುನಾವಣ ಚಿಹ್ನೆಯಿಲ್ಲದೆ ಸ್ಪರ್ಧಿಸಿದ ಫೆಬ್ರವರಿ 8 ರ ಸಾರ್ವತ್ರಿಕ ಚುನಾವಣೆಗೆ ಎಂಟು ದಿನಗಳ ಮೊದಲು ತೀರ್ಪು ನೀಡಲಾಗಿತ್ತು.

ದಂಪತಿಗೆ 10 ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಕಚೇರಿಯಲ್ಲಿ ಅಧಿಕಾರ ಚಲಾಯಿಸುವುದನ್ನು ನಿರ್ಬಂಧಿಸಲಾಗಿದೆ ಮತ್ತು ರೂ 787 ಮಿಲಿಯನ್ ದಂಡವನ್ನು ವಿಧಿಸಲಾಗಿತ್ತು.

ಪಾಕಿಸ್ಥಾನದ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) ಪ್ರಕಾರ, ಇಮ್ರಾನ್ ಮತ್ತು ಅವರ ಪತ್ನಿ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರಿಂದ 108 ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ, ಅದರಲ್ಲಿ ಅವರು 142 ಮಿಲಿಯನ್ ಮೌಲ್ಯದ 58 ಉಡುಗೊರೆಗಳನ್ನು ಉಳಿಸಿಕೊಂಡಿದ್ದಕ್ಕಾಗಿ ಸಾರ್ವತ್ರಿಕ ಚುನಾವಣೆಯ ಮೊದಲು ಜನವರಿ 31 ರಂದು ದಂಪತಿಗಳಿಗೆ ಶಿಕ್ಷೆ ವಿಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next