ಹೊಸದಿಲ್ಲಿ : ಆಸಿಯಾ ಅಂದ್ರಾಬಿ ಮತ್ತು ಇನ್ನಿಬ್ಬರು ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಕಸ್ಟಡಿಯಲ್ಲಿ ಪ್ರಶ್ನಿಸುವುದಕ್ಕಾಗಿ ದಿಲ್ಲಿ ನ್ಯಾಯಾಲಯ ಇಂದು ಎನ್‌ಐಎ ಗೆ 10 ದಿನಗಳ ಅವಧಿಗೆ ಒಪ್ಪಿಸಿದೆ. ಈ ಮೂವರ ಮೇಲೆ ದೇಶದ ವಿರುದ್ಧ ಸಮರ ಹೂಡಿದ ಆರೋಪವಿದೆ.
Advertisement
ಈ ಮೂವರನ್ನು ಇಂದು ಶ್ರೀನಗರಕ್ಕೆ ತಂದು ಜಿಲ್ಲಾ ಮತ್ತು ಸೆಶನ್ಸ್ ನಾಯಾಧೀಶೆ ಪೂನಮ್ ಬಂಬಾ ಅವರ ಮುಂದೆ ಹಾಜರುಪಡಿಸಲಾಯಿತು.
ಎನ್‌ಐಎ ಅಂದ್ರಾಬಿ ಮತ್ತು ಆಕೆಯ ಇನ್ನಿಬ್ಬರು ಸಹವರ್ತಿಗಳಾಗಿರುವ ಸೋಫಿ ಫೆಹಮೀದಾ ಮತ್ತು ನಹೀದಾ ನಸ್‌ರೀನ್ ಅವರನ್ನು 15 ದಿನಗಳ ಅವಧಿಗೆ ತನ್ನ ಕಸ್ಟಡಿಗೆ ಒಪ್ಪಿಸಬೇಕೆಂದು ಕೋರಿತ್ತು.