Advertisement

ರಿಯಾಗಿಲ್ಲ ರಿಲೀಫ್ ; ನ್ಯಾಯಾಂಗ ಬಂಧನ ವಿಸ್ತರಣೆ

08:38 PM Sep 22, 2020 | Hari Prasad |

ಮುಂಬಯಿ: ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋಯಿಕ್‌ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್‌ 6ರವರೆಗೆ ವಿಸ್ತರಿಸಿ ಮುಂಬಯಿ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

Advertisement

ಡ್ರಗ್ಸ್‌ ಪ್ರಕರಣದ ಆರೋಪದ ಮೇಲೆ ಶೋಯಿಕ್‌ ಅವರನ್ನು ಸೆ. 4ರಂದು ಮತ್ತು ರಿಯಾ ಅವರನ್ನು ಸೆ. 8ರಂದು ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೊ (ಎನ್‌ಸಿಬಿ) ಬಂಧಿಸಿತ್ತು. ಆನಂತರ ರಿಯಾ ಅವರನ್ನು ಮುಂಬಯಿಯ ಬೈಕುಲ್ಲಾ ಜೈಲಿಗೆ ವರ್ಗಾಯಿಸಲಾಗಿತ್ತು. ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್‌ ಸಿಂಗ್‌ ಅವರ ಮ್ಯಾನೇಜರ್‌ ಸ್ಯಾಮ್ಯುಯಲ್‌ ಮಿರಾಂಡಾ ಮತ್ತು ಅಡುಗೆ ಕೆಲಸದ ದೀಪೆಶ್‌ ಸಾವಂತ್‌ ಸೇರಿದಂತೆ 18 ಮಂದಿಯನ್ನು ಎನ್‌ಸಿಬಿ ಬಂಧಿಸಿದೆ.

ಏತನ್ಮಧ್ಯೆ ರಿಯಾ ಮತ್ತು ಶೋಯಿಕ್‌ ಜಾಮೀನು ಕೋರಿ ಮುಂಬಯಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಸದರಿ ನ್ಯಾಯಾಲಯವು ಜಾಮೀನು ಅರ್ಜಿಯನ್ನು ನಾಳೆ ವಿಚಾರಣೆ ನಡೆಸುತ್ತದೆ ಎಂಬ ಮಾಹಿತಿಯನ್ನು ಅವರ ವಕೀಲ ಮನೇಶಿಂದೆ ನೀಡಿದ್ದಾರೆ.

ಸೆಷನ್ಸ್‌ ನ್ಯಾಯಾಲಯದಿಂದ ರಿಯಾ ಅವರ ಮನವಿಯನ್ನು ಈಗಾಗಲೇ 2 ಬಾರಿ ತಿರಸ್ಕರಿಸಲಾಗಿದೆ. ರಿಯಾಳ ವಿಚಾರಣೆ ಸಂದರ್ಭ ಎನ್‌ಸಿಬಿಗೆ ಪ್ರಮುಖ ಮಾಹಿತಿ ದೊರೆತಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ಡ್ರಗ್ಸ್‌ ಪ್ರಕರಣದಲ್ಲಿ, ರಿಯಾ ಸಾರಾ ಅಲಿ ಖಾನ್‌, ರಕುಲ್‌ ಪ್ರೀತ್‌ ಸಿಂಗ್‌ ಮತ್ತು ಡಿಸೈನರ್‌ ಸಿಮೋನೆ ಖಂಬಾಟಾ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳನ್ನು ಹೆಸರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಶಾಂತ್‌ ಸಾವಿನ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸಿತ್ತು. ಈ ವೇಳೆ ರಿಯಾ ಅವರ ವಾಟ್ಸಪ್‌ ಚಾಟ್‌ ಪರಿಶೀಲನೆ ಮಾಡುವಾಗ ಜಯ ಸಹಾ ಅವರೊಂದಿಗಿನ ಚಾಟ್‌ನಲ್ಲಿ ಡ್ರಗ್ಸ್‌ ಪದ ಬಳಕೆ ಕಂಡುಬಂದಿತ್ತು. ಇದನ್ನು ವಿಚಾರಣೆ ನಡೆಸುವಂತೆ ಇಡಿ ಎನ್‌ಸಿಬಿಗೆ ಕೇಳಿಕೊಂಡಿತ್ತು.

Advertisement

ಇದರ ಕುರಿತು ತನಿಖೆ ಆರಂಭಿಸಿದ ಎನ್‌ಸಿಬಿ ಈವರಗೆ ಹಲವರನ್ನು ಬಂಧಿಸಿದೆ. ಅಲ್ಲದೇ ಬಾಲಿವುಡ್‌ ಸೆಲಿಬ್ರಿಟಿಗಳಿಗೆ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಆರೋಪದಡಿ 10 ಜನ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.

ಸೆಲೆಬ್ರಿಟಿಗಳಿಗೆ ಡ್ರಗ್ಸ್‌ ಸರಬರಾಜು ಮಾಡುವಲ್ಲಿ ಭಾಗಿಯಾಗಿರುವ ಸಂಬಂಧ ಸುಶಾಂತ್‌ ಸಿಂಗ್‌ ಅವರ ಟ್ಯಾಲೆಂಟ್‌ ಮ್ಯಾನೇಜರ್‌ ಜಯ ಸಹಾ ಅವರನ್ನು ಸೆ. 21ರಂದು ಎನ್‌ಸಿಬಿ ವಿಚಾರಣೆಗೊಳಪಡಿಸಿತ್ತು ಮತ್ತು ಇಂದು ಕೂಡ ಅವರ ವಿಚಾರಣೆ ಮುಂದುವರೆಯಲಿದೆ. ಸುಶಾಂತ್‌ ಅವರ ಮ್ಯಾನೇಜರ್‌ ಶ್ರುತಿ ಮೋದಿ ಅವರನ್ನು ಎನ್‌ಸಿಬಿ ಇಂದು ವಿಚಾರಣೆ ನಡೆಸಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next