Advertisement

Court: ಬಾಲ್ಯವಿವಾಹ ತಡೆ ಕಾನೂನಿಗೆ ವೈಯಕ್ತಿಕ ಕಾನೂನು ಅಡ್ಡಿ ಆಗಬಾರದು: ಸುಪ್ರೀಂ

02:33 AM Oct 19, 2024 | Team Udayavani |

ನವದೆಹಲಿ: ಯಾವುದೇ ವೈಯಕ್ತಿಕ ಕಾನೂನು, ಸಂಪ್ರದಾಯವು ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ ಅಡ್ಡಿಪಡಿಸುವಂತಿಲ್ಲ. ಅಲ್ಲದೆ, ಮಕ್ಕಳಿಗೆ ಮದುವೆ ಮಾಡಿಸುವುದೆಂದರೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಅವರಿಗಿರುವ ಮುಕ್ತ ಹಕ್ಕನ್ನು ಉಲ್ಲಂಘಿಸಿದಂತೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಜತೆಗೆ, ದೇಶದಲ್ಲಿ ಬಾಲ್ಯ ವಿವಾಹವನ್ನು ತಡೆಯುವ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕೆಲವು ಮಾರ್ಗಸೂಚಿಗಳನ್ನೂ ಸಿಜೆಐ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ.ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠ ನೀಡಿದೆ.

ಬಾಲ್ಯವಿವಾಹ ತಡೆ ಕಾನೂನಿನ ಸಮರ್ಪಕ ಅನುಷ್ಠಾನ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ, “ಬಾಲ್ಯವಿವಾ ಹದ ಹಿಂದಿನ ಪ್ರಮುಖ ಕಾರಣಗಳನ್ನು ಕಂಡುಕೊಳ್ಳುವುದರ ಜೊತೆಗೆ ವಿವಿಧ ಸಮು ದಾ ಯ ಗಳ ಅಗತ್ಯತೆಗಳನ್ನೂ ಅರಿತು, ಇಂಥ ವಿವಾಹ ತಡೆ ಕಾರ್ಯ ತಂತ್ರಗಳನ್ನು ರೂಪಿಸಬೇಕು. ಬಾಲ್ಯವಿವಾಹ ಕುರಿತು ಮಾಹಿತಿ ನೀಡುವಿಕೆ, ಜನಜಾಗೃತಿ ಅಭಿಯಾನಗಳು ಎಂದು ಸೂಚನೆ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next