Advertisement

ಅಕ್ರಮ ಸಂಬಂಧ ವ್ಯಕ್ತಿ ಕೊಲೆ: ಏಳು ವರ್ಷಗಳ ಬಳಿಕ ದಂಪತಿ ಬಂಧನ

08:21 AM Feb 18, 2022 | Team Udayavani |

ಬೆಂಗಳೂರು: ಸಹಾಯದ ನೆಪದಲ್ಲಿ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದ ಸಂಬಂಧಿಯನ್ನು ಸೀರೆಯಿಂದ ಕತ್ತು ಹಿಸುಕಿ ಕೊಲೆಗೈದು, ಮೃತದೇಹವನ್ನು ಆಂಧ್ರಪ್ರದೇಶದ ರಸ್ತೆ ಬದಿ ಎಸೆದು ಪರಾರಿಯಾಗಿದ್ದ ದಂಪತಿ ಏಳು ವರ್ಷಗಳ ಬಳಿಕ ಪಶ್ಚಿಮ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ನಿವಾಸಿ ಮೊಹಮ್ಮದ್‌ ಗೌಸ್‌(39) ಮತ್ತು ಆತನ ಪತ್ನಿ ಕೌಸರ್‌ ಅಲಿಯಾಸ್‌ ಹೀನಾ(27) ಬಂಧಿತರು. ದಂಪತಿ 2015ರ ಮೇ 13ರಂದು ತಮ್ಮ ಸಂಬಂಧಿ ವಜೀರ್‌ ಪಾಷಾ(35) ಎಂಬಾತನನ್ನು ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದರು.

ನಂತರ ಎರಡು ಪ್ಲಾಸ್ಟಿಕ್‌ ಚೀಲದಲ್ಲಿ ಮೃತದೇಹವನ್ನು ತುಂಬಿ, ದ್ವಿಚಕ್ರ ವಾಹನದಲ್ಲಿ ಆಂಧ್ರಪ್ರದೇಶದ ಹಿಂದೂಪುರ ರಸ್ತೆಯಲ್ಲಿರುವ ಕಾವೇಟಿನಾಗೇಪಲ್ಲಿ ರಸ್ತೆಯ ಮೋರಿಯಲ್ಲಿ ಎಸೆದು ತಲೆಮರೆಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ಸಂಬಂಧಿಯೊಬ್ಬರ ಅಂತ್ಯಕ್ರಿಯೆಗೆ ಬಂದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next