Advertisement

ಸಾಮಾಜಿಕ ಕಾರ್ಯಬಾಹುಳ್ಯ ಮೆರೆದ ಹೆಗ್ಗಡೆ ದಂಪತಿ

02:16 AM Mar 09, 2022 | Team Udayavani |

ಬೆಳ್ತಂಗಡಿ: ನೆಪೋಲಿಯನ್‌ ಬೋನಾಪಾರ್ಟೆ ಅವರ ಕಥೆಯೊಂದರಲ್ಲಿ ಆತನಲ್ಲಿ ನಿನ್ನ ಯಶಸ್ಸಿಗೆ ಕಾರಣವೇನೆಂದು ಕೇಳಿದಾಗ, ನನ್ನ ಕೈ ಕೆಳಗಿನ ಅಧಿಕಾರ, ಅಧಿಕಾರಿಯ ಕೈಕೆಳಗಿನ ಸೈನಿಕ, ಸೈನಿಕ ಬಳಸುವ ಕುದುರೆ, ಕುದುರೆಯ ಲಾಳವನ್ನು ಗಮನಿಸುತ್ತೇನೆ ಎಂದು ಹೇಳಿದನಂತೆ. ಇದರರ್ಥ ಕರ್ತವ್ಯ ಸೂಕ್ಷ್ಮತೆಯಿದ್ದಲ್ಲಿ ಸಾಮಾಜಿಕ ಕಾರ್ಯಬಾಹುಳ್ಯ ಮೆರೆಯಲು ಸಾಧ್ಯ ಎಂಬುದಕ್ಕೆ ಧರ್ಮಸ್ಥಳದ ಡಾ| ಹೆಗ್ಗಡೆ ದಂಪತಿ ಸಾಕ್ಷಿ ಎಂದು ತರಂಗ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಬಣ್ಣಿಸಿದರು.

Advertisement

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿ ಯಿಂದ ಹೇಮಾವತಿ ವೀ. ಹೆಗ್ಗಡೆಯ ವರ “ಗೆಳತಿ’, “ಮಗಳಿಗೊಂದು ಪತ್ರ’ ಕೃತಿ ಗಳನ್ನು ಅನಾವರಣಗೊಳಿಸಿ ಮಾತನಾಡಿದರು.

ಸಣ್ಣ ವಿಚಾರಗಳಿಗೆ ಕಲಹಕ್ಕೆ ಆಸ್ಪದ ನೀಡದೆ ಹೆಣ್ಣು ದಾಂಪತ್ಯದ ಸಾಮರಸ್ಯದೊಂದಿಗೆ ಹೆಣ್ಣು ಸ್ವತಂತ್ರ
ಳಾಗಿ ಬದುಕಬೇಕು. ಡಾ| ಹೆಗ್ಗಡೆ – ಹೇಮಾವತಿ ದಂಪತಿಯ ಸಾಂಗತ್ಯದ ಸಂದೇಶ ನೂರ್ಕಾಲ ಸಮಾಜಕ್ಕೆ ಅರ್ಪಣೆಯಾಗಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮಹಿಳೆಯರು ಇಂದು ಆತ್ಮವಿಶ್ವಾಸ ಸ್ಥೈರ್ಯ ಗಳಿಸಿ ಕೊಂಡಿದ್ದರಿಂದ ಅವರಿಗೂ ಸಮಾನ ಅವಕಾಶ ಲಭಿಸಿದೆ. ಮಾತೃಶ್ರೀ ರತ್ನಮ್ಮ ನವರಂತೆ ಹೇಮಾವತಿಯಮ್ಮ ನವರು ಬೌದ್ಧಿಕ ಸಂಗ್ರಹವನ್ನು ಮುಂದು ವರಿಸಿದ್ದಾರೆ ಎಂದು ಉಲ್ಲೇಖಿಸಿದರು.

ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಮಹಿಳಾ ದಿನ ಹಾಗೂ ಶ್ರೇಷ್ಠ ಮಹಿಳೆಯಿಂದ ಕೃತಿ ಅನಾವರಣಗೊಂಡಿದ್ದು ಸಂತಸ ತಂದಿದೆ. ಡಾ| ಸಂಧ್ಯಾ ಪೈ ಅವರ ಲೇಖನದಲ್ಲಿ ಅಧ್ಯಾತ್ಮ ಮತ್ತು ಆಧುನಿಕತೆಯ ಛಾಯೆಯಿರುತ್ತದೆ. ಹಾಗಾಗಿ ಸಮಾಜಕ್ಕೆ ಬಹುಬೇಗನೆ ತಲುಪುತ್ತಿದೆ ಎಂದರು.

Advertisement

ಮಕ್ಕಳಿಂದಲೇ ಭಾಷೆ- ಸಂಸ್ಕೃತಿ ಮೌಲ್ಯಗಳನ್ನು ತುಂಬುವ ಕೆಲಸವಾಗಬೇಕಿದೆ. ಈ ಉದ್ದೇಶದಿಂದ ಜ್ಞಾನವಿಕಾಸ ಕೇಂದ್ರದಲ್ಲಿ 2,200 ಗ್ರಂಥಾಲಯಗಳನ್ನು ಗ್ರಾಮೀಣ ಭಾಗ ದಲ್ಲಿ ಸ್ಥಾಪಿಸಲಾಗಿದೆ. ಯೋಜನೆಯ 25,000 ಕಾರ್ಯಕರ್ತರಲ್ಲಿ 19,000 ಮಹಿಳೆಯರೇ ಇದ್ದಾರೆ ಎಂದರು.

ಹೇಮಾವತಿ ಹೆಗ್ಗಡೆ ಅವರನ್ನು ಯೋಜನೆಯ ವತಿಯಿಂದ “ಪರಿವರ್ತನೆಯ ಪ್ರವರ್ತಕರು’ ಎಂಬ ಬಿರುದು ನೀಡಿ ಸಮ್ಮಾನಿಸಲಾಯಿತು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಎಸ್‌. ಪ್ರಭಾಕರ್‌, ಕಾರ್ಯ ದರ್ಶಿ ಡಿ. ಹರ್ಷೇಂದ್ರ ಕುಮಾರ್‌, ಉಪಾಧ್ಯಕ್ಷ ಸುರೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌, ಗ್ರಾ.ಯೋಜನೆ ಟ್ರಸ್ಟಿ ಸಂಪತ್‌ ಸಾಮ್ರಾಜ್‌ ಮತ್ತಿತರರು ಭಾಗಿಯಾದರು.

ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರು ಡಾ| ಸಂಧ್ಯಾ ಎಸ್‌. ಪೈ ಅವರನ್ನು ಗೌರವಿಸಿದರು. ಯೋಜನೆಯ ಕಾರ್ಯನಿರ್ವಾ ಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಸ್ವಾಗತಿಸಿ, ಯೋಜ ನಾಧಿಕಾರಿ ಚೇತನಾ ವಂದಿಸಿದರು. ಮಮತಾ ಹರೀಶ್‌ ರಾವ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next