Advertisement

ಗಿಳಿಗಳು ಗೂಡಿನಿಂದ ಹಾರಿಹೋದ್ದಕ್ಕೆ ಹೆಣವಾದ ಬಾಲಕಿ!

08:48 PM Jun 03, 2020 | Sriram |

ಇಸ್ಲಾಮಾಬಾದ್‌: ಅತಿ ಕ್ರೂರ ವಿದ್ಯಮಾನವೊಂದರಲ್ಲಿ ಸಾಕಿದ ಗಿಳಿಗಳು ಹಾರಿಹೋಗಲು ಕಾರಣವಾದ್ದಕ್ಕೆ ಕೆಲಸದ ಬಾಲಕಿಯೊಬ್ಬಳನ್ನು ಬಡಿದು ಹತ್ಯೆಗೈದ ಘಟನೆ ಪಾಕಿಸ್ಥಾನದ ರಾವಲ್ಪಿಂಡಿಯಲ್ಲಿ ನಡೆದಿದೆ.

Advertisement

ಗಿಳಿಗಳಿದ್ದ ಗೂಡನ್ನು 8 ವರ್ಷದ ಕೆಲಸದ ಬಾಲಕಿ ಝರಾ ಶುಚಿಗೊಳಿಸುತ್ತಿದ್ದಾಗ ಅಚಾನಕ್‌ ಆಗಿ ಗಿಳಿಗಳು ಹಾರಿ ಹೋಗಿದ್ದವು. ಇದರಿಂದ ಮನೆಯ ಮಾಲೀಕರಾದ ಬೇಗಮ್‌ ಅಖ್ತರ್‌ ರುಕ್ಸಾನಾ ದಂಪತಿ ಕೋಪಗೊಂಡು ಹಿಗ್ಗಾಮುಗ್ಗಾ ಬಡಿದಿದ್ದಾರೆ. ಬಳಿಕ ತೀವ್ರವಾಗಿ ಗಾಯಗೊಂಡ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆಕೆ ಬದುಕುಳಿಯಲಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಪಾಕಿಸ್ಥಾನದಲ್ಲಿ ತೀವ್ರ ಆಕ್ರೋಶ ಮೊಳಗಿದ್ದು ರಾಜಕಾರಣಿಗಳು, ಸಂಘ ಸಂಸ್ಥೆಗಳು ಘಟನೆಯನ್ನು ಖಂಡಿಸಿವೆ. ಜತೆಗೆ ತಪ್ಪಿತಸ್ಥರಿಗೆ ಕಠಿನ ಶಿಕ್ಷೆಗೆ ಆಗ್ರಹಿಸಿವೆ.

ಬಾಲಕಿ ಹತ್ಯೆಯಾದ ದಿನವೇ ಆರೋಪಿ ದಂಪತಿಯನ್ನು ಬಂಧಿಸಲಾಗಿತ್ತು. ಅವರನ್ನು ಜೂ.6ರವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ತಾವು ಬಾಲಕಿಗೆ ಬಡಿದಿದ್ದಾಗಿ ದಂಪತಿ ಒಪ್ಪಿಕೊಂಡಿದ್ದಾರೆ.

ಆಕೆಗೆ ಬಡಿದಿದ್ದಲ್ಲದೆ ಲೈಂಗಿಕವಾಗಿಯೂ ಕಿರುಕುಳ ನೀಡಿದಂತಿಗೆ ಎಂದು ಪೊಲೀಸರು ಎಫ್ಐಆರ್‌ನಲ್ಲಿ ಹೇಳಿದ್ದಾರೆ.

Advertisement

ಪಾಕಿಸ್ಥಾನದಲ್ಲಿ ಮನೆಗೆಲಸದವರ ಮೇಲೆ ಹಲ್ಲೆ, ಬಡಿತ ಪ್ರಕರಣಗಳು ಸಾಮಾನ್ಯವಾಗಿವೆ. ಜತೆಗೆ ಮನೆಯಲ್ಲಿ ಅಪ್ರಾಪ್ತರು ಕೆಲಸವನ್ನೂ ಮಾಡುವು ಸಾಮಾನ್ಯವಾಗಿದೆ. ಇಂತಹ ಪ್ರಕರಣದಲ್ಲಿ ಜಿಲ್ಲಾ ಸಹಾಯಕ ನ್ಯಾಯಾಧೀಶರೇ ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ ಪ್ರಕರಣವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next