Advertisement

ದೇಶದ `ಪಾಸ್‌ಪೋರ್ಟ್‌’ ಪಾಸ್‌- ಹೆನ್ಲೇ ಪಾಸ್‌ಪೋರ್ಟ್‌ ಇಂಡೆಕ್ಸ್‌ನಲ್ಲಿ 80ನೇ ಸ್ಥಾನ

10:01 PM Jul 19, 2023 | Team Udayavani |

ನವದೆಹಲಿ: ಜಗತ್ತಿನ ಪ್ರಮುಖ ರಾಷ್ಟ್ರಗಳ ಪಾಸ್‌ಪೋರ್ಟ್‌ ಶ್ರೇಯಾಂಕ ಪ್ರಕಟವಾಗಿದೆ. ಅದರಲ್ಲಿ ದೇಶದ ರ್‍ಯಾಂಕಿಂಗ್‌ ಕಳೆದ ವರ್ಷ 87 ಇದ್ದದ್ದು ಪ್ರಸಕ್ತ ವರ್ಷಕ್ಕೆ 80ನೇ ಸ್ಥಾನಕ್ಕೆ ಪದೋನ್ನತಿ ಪಡೆದುಕೊಂಡಿದೆ. ಈ ಏರಿಕೆಯಿಂದಾಗಿ ನಮ್ಮವರು 57 ದೇಶಗಳಿಗೆ ವೀಸಾರಹಿತವಾಗಿ ಪ್ರಯಾಣ ಮಾಡಲು ಸಾಧ್ಯವಾಗಲಿದೆ.

Advertisement

ಭಾರತದ ಪಾಸ್‌ಪೋರ್ಟ್‌ ಹೊಂದಿರುವವರಿಗೆ ಇಂಡೋನೇಷ್ಯಾ, ಥಾಯ್ಲೆಂಡ್‌, ರವಾಂಡಾ, ಜಮೈಕ ಮತ್ತು ಶ್ರೀಲಂಕಾಕ್ಕೆ ತೆರಳಿದಾಗ ವೀಸಾ ಆನ್‌ ಎರೈವಲ್‌ ವ್ಯವಸ್ಥೆ ಇದೆ. ಇನ್ನೂ 177 ದೇಶಗಳಿಗೆ ಪ್ರವೇಶ ಮಾಡಲು ವೀಸಾ ಪಡೆದುಕೊಳ್ಳಲೇಬೇಕಾಗಿದೆ. ಅದರಲ್ಲಿ ಚೀನಾ, ಜಪಾನ್‌, ರಷ್ಯಾ, ಅಮೆರಿಕ, ಐರೋಪ್ಯ ಒಕ್ಕೂಟದ ದೇಶಗಳು ಸೇರಿವೆ.

2006ರಲ್ಲಿ ರ್‍ಯಾಂಕಿಂಗ್‌ ವ್ಯವಸ್ಥೆ ಶುರುವಾದ ಬಳಿಕ ದೇಶದ ಪಾಸ್‌ಪೋರ್ಟ್‌ 71ನೇ ರ್‍ಯಾಂಕ್‌ ಪಡೆದಿತ್ತು. 2014ರಲ್ಲಿ 76ನೇ ಸ್ಥಾನ ಪಡೆದುಕೊಂಡಿತ್ತು. ನಮ್ಮ ದೇಶಕ್ಕೆ ಇದುವರೆಗೆ ಸಿಕ್ಕಿದ ರ್‍ಯಾಂಕಿಂಗ್‌ ಪೈಕಿ ಇದು ಅತ್ಯುತ್ತಮವಾಗಿದೆ.

ಜಗತ್ತಿನ ಅತ್ಯಂತ ಪ್ರಭಾವಿ ಪಾಸ್‌ಪೋರ್ಟ್‌ ಹೊಂದಿರುವ ಹೆಗ್ಗಳಿಕೆ ಸಿಂಗಾಪುರಕ್ಕೆ ಸಿಕ್ಕಿದೆ. ಐದು ವರ್ಷಗಳ ಕಾಲ ಜಪಾನ್‌ ಪಾಸ್‌ಪೋರ್ಟ್‌ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಭಾವ ಹೊಂದಿತ್ತು. 2ನೇ ಸ್ಥಾನದಲ್ಲಿ ಜರ್ಮನಿ, ಇಟಲಿ, ಸ್ಪೇನ್‌, 3ನೇ ಸ್ಥಾನದಲ್ಲಿ ಆಸ್ಟ್ರಿಯಾ, ಫಿನ್ಲಂಡ್‌, ಫ್ರಾನ್ಸ್‌, ಜಪಾನ್‌, ಲುಕ್ಸೆಂಬರ್ಗ್‌, ದಕ್ಷಿಣ ಕೊರಿಯಾ, ಸ್ವೀಡನ್‌ ಇವೆ.

ಕಳಪೆ ರ್‍ಯಾಂಕಿಂಗ್‌
ಭಾರತದ ನೆರೆಯ ರಾಷ್ಟ್ರಗಳಾಗಿರುವ ಶ್ರೀಲಂಕಾಕ್ಕೆ 95, ನೇಪಾಳಕ್ಕೆ 98, ಪಾಕಿಸ್ತಾನಕ್ಕೆ 100, ಅಫ್ಘಾನಿಸ್ತಾನಕ್ಕೆ 103ನೇ ಶ್ರೇಯಾಂಕ ಇದ್ದು ಕಳಪೆ ರ್‍ಯಾಂಕಿಂಗ್‌ ಗಳಿಸಿವೆ.

Advertisement

ಅಧ್ಯಯನ ಯಾರದ್ದು?
ಲಂಡನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಹೆನ್ಲà ಪಾಸ್‌ಪೋರ್ಟ್‌ ಇಂಡೆಕ್ಸ್‌ ಈ ಅಧ್ಯಯನ ನಡೆಸುತ್ತಿದೆ. ನಿಗದಿತ ದೇಶ ವಿದೇಶಿಯರನ್ನು ಯಾವ ರೀತಿ ಸ್ವೀಕರಿಸುತ್ತದೆ, ಅಂತಾರಾಷ್ಟ್ರೀಯ ವಾಯುಯಾನ ಪ್ರಾಧಿಕಾರ ನೀಡುವ ಅಂಕಿಅಂಶಗಳನ್ನು ಆಧರಿಸಿ ಶ್ರೇಯಾಂಕ ಸಿದ್ಧಪಡಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next