Advertisement

Mumbai: ದೇಶದ ಮೊದಲ ಬಾಹ್ಯಾಕಾಶ ತರಬೇತಿ- ಕೇಂದ್ರ ಮುಂಬೈನಲ್ಲಿ ಸ್ಥಾಪನೆ

12:50 AM Feb 01, 2024 | Team Udayavani |

ನವದೆಹಲಿ: ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ನಡೆಸಬೇಕು ಎಂಬ ಕನಸನ್ನು ಇಸ್ರೋ ಹೊತ್ತಿರುವಾಗಲೇ ನವೀ ಮುಂಬೈನಲ್ಲಿ , ಏಷ್ಯಾದ ಮೊದಲ ಬಾಹ್ಯಾಕಾಶ ತರಬೇತಿ ಕೇಂದ್ರ ಸ್ಥಾಪನೆ ಬಗ್ಗೆ ಚಿಂತನೆ ನಡೆದಿದೆ. ಆ್ಯಸ್ಟ್ರೋಬೋರ್ನ್ ಏರೋಸ್ಪೇಸ್‌ ಎಂಬ ಕಂಪನಿ ಈ ಸಾಹಸಕ್ಕೆ ಕೈ ಹಾಕಿದೆ. ಅಮೆರಿಕ ಮತ್ತು ಇತರ ದೇಶಗಳಲ್ಲಿ ಇರುವಂತೆ ಭಾರತದಲ್ಲಿಯೂ ವ್ಯೋಮ ಪ್ರವಾಸ ಕ್ಷೇತ್ರವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಗಳನ್ನು ಇರಿಸಿದೆ.

Advertisement

ಈ ಉದ್ದೇಶಕ್ಕಾಗಿ ಸಂಸ್ಥೆ ಇಂಡಿಯನ್‌ ನ್ಯಾಷನಲ್‌ ಸ್ಪೇಸ್‌ ಪ್ರೊಮೋಷನ್‌ ಆ್ಯಂಡ್‌ ಅಥೊರೈಸೇಷನ್‌ ಸೆಂಟರ್‌ (ಇನ್‌-ಸ್ಪೇಸ್‌) ಜತೆಗೆ ನೋಂದಣಿಯನ್ನು ಮಾಡಿಸಿಕೊಳ್ಳಲಾಗಿದೆ ಎಂದು ಕಂಪನಿಯ ಸಹ ಸಂಸ್ಥಾಪಕ ಮತ್ತು ಸಿಇಒ ಅಕ್ಷತ್‌ ಮೊಹಿತೆ ತಿಳಿಸಿದ್ದಾರೆ. ತರಬೇತಿ ಮತ್ತು ಇತರ ಅಗತ್ಯಗಳಿಗಾಗಿ ಅಮೆರಿಕದ ನಾಸ್ಟರ್‌ ಸೆಂಟರ್‌ ಜತೆಗೆ ಸಹಭಾಗಿತ್ವ ಹೊಂದಲಾಗುತ್ತದೆ ಎಂದಿದ್ದಾರೆ ಮೊಹಿತೆ.

ತರಬೇತಿ ಕೇಂದ್ರ ಸ್ಥಾಪನೆ ಮಾಡುವ ನಿಟ್ಟಿನಲ್ಲಿ 1.5 ಎಕರೆ ಜಮೀನು ಅಗತ್ಯವಿದ್ದು, ಅದಕ್ಕಾಗಿ ಮಹಾರಾಷ್ಟ್ರ ಸರ್ಕಾರದ ಜತೆಗೆ ಮಾತುಕತೆ ನಡೆಸಲಾಗುತ್ತಿದೆ. ಶೀಘ್ರವೇ ಅದು ಲಭ್ಯವಾಗುವ ಸಾಧ್ಯತೆ ಇದೆ.

ಪರಿಣತರಿಂದ ತರಬೇತಿ:
18-24 ತಿಂಗಳ ಅವಧಿ ತರಬೇತಿ ಕೇಂದ್ರ ಸಿದ್ಧವಾಗಲಿದೆ. ಅಲ್ಲಿ ಖಾಸಗಿ ಮತ್ತು ಸರ್ಕಾರಿ ಕ್ಷೇತ್ರದ ಪರಿಣತರಿಂದ ಬಾಹ್ಯಾಕಾಶ ಯಾನಕ್ಕೆ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದರೂ 10-15 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದರು.

6 ಸೀಟುಗಳ ವಾಣಿಜ್ಯಿಕ ವ್ಯೋಮ ವಿಮಾನ ನಿರ್ಮಾಣ
ಈ ಸಂಸ್ಥೆ ದೇಶದ ಮೊದಲ ಆರು ಸೀಟುಗಳ ಸಾಮರ್ಥ್ಯದ ವಾಣಿಜ್ಯಿಕ ವ್ಯೋಮ ವಿಮಾನ, ಐರಾವತವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಮೋಹಿತೆ ವಿವರಿಸಿದ್ದಾರೆ. ಅದು 400 ಕಿಮೀ ಎತ್ತರದಷ್ಟು ಪ್ರಯಾಣ ಮಾಡುವ ಸಾಮರ್ಥ್ಯ ಹೊಂದಿರಲಿದೆ. ಇತ್ತೀಚೆಗಷ್ಟೇ ಕಂಪನಿ ರಾಕೆಟ್‌ಗಳಿಗೆ ಬಳಕೆ ಮಾಡುವ ಇಂಧನದ ಬಗ್ಗೆ ಸಂಶೋಧನೆ ನಡೆಸಿ, ಪೇಟೆಂಟ್‌ ಪಡೆದುಕೊಂಡಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next