Advertisement

ದೇಶ @ 2.55 ಲಕ್ಷ

01:34 AM Jun 08, 2020 | Sriram |

ಹೊಸದಿಲ್ಲಿ: ದೇಶದಲ್ಲಿ ರವಿವಾರ ರಾತ್ರಿ ವೇಳೆಗೆ ಕೋವಿಡ್-19 ಪೀಡಿತರ ಸಂಖ್ಯೆ 2.55 ಲಕ್ಷ ದಾಟಿದೆ. ಸಾವಿನ ಪ್ರಮಾಣ 7,123ಕ್ಕೆ ತಲುಪಿದೆ.

Advertisement

ವಿಪರ್ಯಾಸವೆಂದರೆ ಮಹಾರಾಷ್ಟ್ರದಲ್ಲಿ ಸೋಂಕುಪೀಡಿತರ ಸಂಖ್ಯೆ 85 ಸಾವಿರ ದಾಟಿದ್ದು, ಇದು ಸೋಂಕಿನ ಮೂಲ ಚೀನಕ್ಕಿಂತಲೂ ಹೆಚ್ಚಿನದ್ದಾಗಿದೆ.

ಮಹಾರಾಷ್ಟ್ರದಲ್ಲಿ ರವಿವಾರ ಒಂದೇ ದಿನ 3 ಸಾವಿರಕ್ಕೂ ಅಧಿಕ ಪ್ರಕರಣಗಳು ಕಾಣಿಸಿಕೊಂಡಿವೆ. ತಮಿಳುನಾಡಿನಲ್ಲಿ 31 ಸಾವಿರ, ಗುಜರಾತ್‌ನಲ್ಲಿ 20 ಸಾವಿರ ದಾಟಿದೆ.

ಜಗತ್ತು: 70 ಲಕ್ಷ ಮೀರಿದ ಸಂಖ್ಯೆ
ಜಾಗತಿಕ ಮಟ್ಟದಲ್ಲೂ ಕೋವಿಡ್-19 ಪೀಡಿತರ ಸಂಖ್ಯೆ 70 ಲಕ್ಷ ದಾಟಿದೆ. ಸಾವಿನ ಸಂಖ್ಯೆಯೂ 4 ಲಕ್ಷ ದಾಟಿದೆ. ಅಮೆರಿಕದಲ್ಲಿ ಸಂಖ್ಯೆ 20 ಲಕ್ಷದ ಸನಿಹದಲ್ಲಿದೆ. ಇಲ್ಲಿನ ಸಾವಿನ ಸಂಖ್ಯೆ 1.12 ಲಕ್ಷ ದಾಟಿದೆ. ಇಲ್ಲಿ ನಿತ್ಯ 20 ಸಾವಿರ ಮಂದಿಗೆ ಸೋಂಕು ಕಾಣಿಸುತ್ತಿದೆ.

ವಿಶ್ವ ಮಟ್ಟದಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 6.77 ಲಕ್ಷ ಪ್ರಕರಣಗಳಿವೆ. ರಷ್ಯಾ 3ನೇ ಸ್ಥಾನದಲ್ಲಿದ್ದು, 4.67 ಲಕ್ಷ ಪ್ರಕರಣಗಳಿವೆ. ಸ್ಪೇನ್‌ 4ನೇ, ಇಂಗ್ಲೆಂಡ್‌ 5ನೇ ಸ್ಥಾನದಲ್ಲಿದೆ. 6ನೇ ಸ್ಥಾನದಲ್ಲಿ ಭಾರತವಿದೆ. ಈಗಿನ ಗತಿಯಲ್ಲೇ ಸೋಂಕು ಹೆಚ್ಚಿದರೆ ಮೂರ್ನಾಲ್ಕು ದಿನಗಳಲ್ಲಿ ಭಾರತ 4ನೇ ಸ್ಥಾನಕ್ಕೇರುವ ಸಾಧ್ಯತೆ ಇದೆ.

Advertisement

ರಾಜ್ಯದಲ್ಲಿ ಮತ್ತೆ ಇಬ್ಬರು ಸಾವು
ಬೆಂಗಳೂರು: ಕೋವಿಡ್-19 ಸೋಂಕಿಗೆ ರವಿವಾರ ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ಬಲಿಯಾಗಿದ್ದು, ಸಾವಿಗೀಡಾದವರ ಸಂಖ್ಯೆ 61ಕ್ಕೆ ಏರಿದೆ. ಇದೇವೇಳೆ ರಾಜ್ಯದಲ್ಲಿ 239 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸಂಖ್ಯೆ 5,452ಕ್ಕೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next