Advertisement

ಬಿಜೆಪಿಗೆ ಕೌಂಟರ್‌: 16 ಪ್ರತಿಪಕ್ಷಗಳ‌ ಸಭೆ

07:45 AM Aug 12, 2017 | |

ನವದೆಹಲಿ: ಬಿಹಾರದಲ್ಲಿ ಜೆಡಿಯು ಕೈಕೊಟ್ಟರೂ ಬಿಜೆಪಿಗೆ ಪರ್ಯಾಯವಾಗಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕಾಂಗ್ರೆಸ್‌ನ ಪ್ರಯತ್ನ ಮುಂದುವರಿದಿದೆ. ಶುಕ್ರವಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ 16 ಪ್ರತಿಪಕ್ಷಗಳ ಸಭೆ ದೆಹಲಿಯಲ್ಲಿ ನಡೆದಿದೆ.

Advertisement

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜೆಡಿಯು ಸಂಸದ ಅಲಿ ಅನ್ವರ್‌ ಅನ್ಸಾರಿ, ಎಡಪಕ್ಷಗಳ ನಾಯಕರು ಸೇರಿದಂತೆ 16 ಪಕ್ಷಗಳ ನಾಯಕರು ಭಾಗಿಯಾಗಿದ್ದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪರಿಣಾಮಕಾರಿಯಾಗಿ ಎದುರಿಸಲು ಕಾರ್ಯತಂತ್ರ ರೂಪಿಸುವ ಕುರಿತು ಇಲ್ಲಿ ಚರ್ಚಿಸಲಾಯಿತು.

ವಿಶೇಷವೆಂದರೆ, ಈ ಸಭೆಗೆ ಎನ್‌ಸಿಪಿ ಗೈರಾಗಿತ್ತು. ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಎನ್‌ಸಿಪಿ ಶಾಸಕರು ಅಡ್ಡಮತದಾನ ಮಾಡಿದ್ದು ಸುದ್ದಿಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಎನ್‌ಸಿಪಿ ಈ ಪರ್ಯಾಯ ಒಕ್ಕೂಟದಿಂದ ದೂರವಾಗುವ ಸುಳಿವು ನೀಡಿದೆ.

ಅನ್ವರ್‌ ಅಲಿ ಅಮಾನತು:  ಇದೇ ವೇಳೆ, ಕಾಂಗ್ರೆಸ್‌ ಜತೆಗಿನ ಮೈತ್ರಿ ಮುರಿದುಕೊಂಡಿದ್ದರೂ ಪ್ರತಿಪಕ್ಷಗಳ ಸಭೆಯಲ್ಲಿ ಭಾಗಿಯಾದ ಸಂಸದ ಅಲಿ ಅನ್ವರ್‌ ಅನ್ಸಾರಿ ಅವರನ್ನು ಜೆಡಿಯು ಶುಕ್ರವಾರ ರಾತ್ರಿ ಅಮಾನತು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next