Advertisement

ಸ್ವಚ್ಛತಾ ರಾಯಭಾರಿಗಳಿಗೆ ಪ್ರತಿಜ್ಞಾವಿಧಿ ಬೋಧನೆ

05:17 PM Feb 10, 2018 | Team Udayavani |

ಮಹಾನಗರ : ಸ್ವಚ್ಛತಾ ಕಾರ್ಯಕ್ರಮವು ದೇವತಾ ಕಾರ್ಯ ಮಾಡಿದಷ್ಟೇ ಪವಿತ್ರವಾದುದು. ಪ್ರತಿಯೊಬ್ಬರು ಸ್ವಚ್ಛತೆಯ ಸಂಕಲ್ಪ ಕೈಗೊಂಡು ದೇಶ ಸೇವಾ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಲಂಡನ್‌ ರಾಮಕೃಷ್ಣ ವೇದಾಂತ ಸೊಸೈಟಿಯ ಮುಖ್ಯಸ್ಥ ಸ್ವಾಮಿ ಸರ್ವಸ್ಥಾನಂದಜೀ ಹೇಳಿದರು.

Advertisement

ರಾಮಕೃಷ್ಣ ಮಿಷನ್‌ನ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಸ್ವಚ್ಛತಾ ರಾಯ ಭಾರಿಗಳಿಗೆ ಪ್ರತಿಜ್ಞಾವಿಧಿ ಬೋಧನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಚ್ಛತಾ ಮಂಥನ
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊ| ರಘೋತ್ತಮ ರಾವ್‌ ಬೆಂಗಳೂರು ಅವರು ಸ್ವಚ್ಛತಾ ಮಂಥನ ಎಂಬ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಆಶಯ ನುಡಿಗಳನ್ನಾಡಿದರು. ಪೂರ್ಣಕಾಮಾನಂದ ಸ್ವಾಮೀಜಿ, ಡಾ| ವಿರೂಪಾಕ್ಷ ದೇವರಮನೆ ಉಡುಪಿ ಉಪಸ್ಥಿತರಿದ್ದರು. ಬಳಿಕ ಸ್ವಚ್ಛತೆಯ ಕುರಿತಂತೆ ವಿಶೇಷ ಮಾಹಿತಿ ಶಿಬಿರವನ್ನು ಆಯೋಜಿಸಲಾಯಿತು.

ಆಂತರಿಕ ಸ್ವಚ್ಛತೆ ಅಗತ್ಯ
ಮನುಷ್ಯನಾದವನು ಬಾಹ್ಯ ಸ್ವಚ್ಛತೆಯೊಂದಿಗೆ ಆಂತರಿಕ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಆಂತರಿಕವಾಗಿ ಸ್ವತ್ಛವಾಗಿಲ್ಲದಿದ್ದಲ್ಲಿ ಪರಿಸರ ಸ್ವಚ್ಛ ಮಾಡುವುದರಲ್ಲಿ ಅರ್ಥವಿಲ್ಲ. ನಮ್ಮ ಮನೆ, ಪರಿಸರವನ್ನು
ಸ್ವಚ್ಛವಾಗಿಟ್ಟುಕೊಳ್ಳುತ್ತೇವೆ ಎಂಬ ಸಂಕಲ್ಪವನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ.
– ಸ್ವಾಮಿ ಸರ್ವಸ್ಥಾನಂದಜೀ,
ಮುಖ್ಯಸ್ಥ, ರಾಮಕೃಷ್ಣ ವೇದಾಂತ
ಸೊಸೈಟಿ ಲಂಡನ್‌

Advertisement

Udayavani is now on Telegram. Click here to join our channel and stay updated with the latest news.

Next