Advertisement

Counterfeit Note Circulation: ಪಶ್ಚಿಮ ಬಂಗಾಳದ ಅಪರಾಧಿಗೆ 6 ವರ್ಷ ಜೈಲು 

11:40 AM Sep 01, 2024 | Team Udayavani |

ಬೆಂಗಳೂರು: ನಕಲಿ ನೋಟು ಚಲಾವಣೆ ಪ್ರಕರಣ ದಲ್ಲಿ ಪಶ್ಚಿಮ ಬಂಗಾಳ ಮೂಲದ ಅಪರಾಧಿಗೆ ಎನ್‌ಐಎ ವಿಶೇಷ ನ್ಯಾಯಾಲಯ 6 ವರ್ಷಗಳ ಜೈಲು ಶಿಕ್ಷೆ, 5 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದೆ.

Advertisement

ಪಶ್ಚಿಮ ಬಂಗಾಳದ ಶರೀಫುಲ್ಲಾ ಇಸ್ಲಾಂ ಅಲಿಯಾಸ್‌ ಶರೀಫುದ್ದೀನ್‌ ಶಿಕ್ಷೆಗೊಳಗಾದ ಅಪರಾಧಿ. 2018ರಲ್ಲಿ ಚಿಕ್ಕೋಡಿ  ಠಾಣೆಯಲ್ಲಿ ದಾಖಲಾಗಿದ್ದ ನಕಲಿ ನೋಟು ಚಲಾವಣೆ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿ‌ಳು ಪ್ರತ್ಯೇಕವಾಗಿ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ಈ ಪ್ರಕರಣದ ತನಿಖೆಯನ್ನು ಎನ್‌ಐಎಸ್‌ ನಡೆಸಿ ಆರೋಪಿ ಪಟ್ಟಿ ಸಲ್ಲಿಸಿತ್ತು. ಅಪ ರಾಧಿ ಶರೀಫುಲ್ಲಾ ಬಾಂಗ್ಲಾದೇಶದ ಭಾರತ ಗಡಿಭಾಗ ದಿಂದ ಭಾರತದ ಇತರ ಭಾಗಗಳಿಗೆ  82 ಸಾವಿರ ರೂ. ಮೌಲ್ಯದ 41 ನಕಲಿ ನೋಟು ಚಲಾವಣೆ ಮಾಡಲು ಇತರೆ 6 ಅಪರಾಧಿಗಳ ಜತೆ ಸೇರಿ ಸಂಚು ರೂಪಿಸಿದ್ದ. ಪಶ್ಚಿಮ ಬಂಗಾಳದಲ್ಲಿ ನಕಲಿ ನೋಟು ಚಲಾವಣೆ ಮಾಡುವ ಉದ್ದೇಶದಿಂದ ಸಂಹವನ ಸಾಧಿಸಲು ನಕಲಿ ದಾಖಲೆ ನೀಡಿ ಸಿಮ್‌ ಕಾರ್ಡ್‌ ಪಡೆದಿದ್ದ. ಇದು ತನಿಖೆಯ ವೇಳೆ ದೃಢಪಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next