Advertisement

ಫ‌ಲಿತಾಂಶ ತಿಳಿಯಲು ಕ್ಷಣಗಣನೆ

12:22 PM May 15, 2018 | Team Udayavani |

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ 26 ವಿಧಾನಸಭಾ ಕ್ಷೇತ್ರಗಳ ಮತ ಏಣಿಕೆ ಕೇಂದ್ರಗಳಿಗೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮತ ಏಣಿಕೆ ಆರಂಭವಾಗಲಿದೆ. 

Advertisement

ಜಯನಗರ ಹಾಗೂ ರಾಜರಾಜೇಶ್ವರಿ ನಗರ ಹೊರತುಪಡಿಸಿ 26 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಮತದಾನ ಪ್ರಕ್ರಿಯೆ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ. ಮತ ಏಣಿಕೆಯು ಬಸವನಗುಡಿಯ ಬಿಎಂಎಸ್‌ ಮಹಿಳಾ ಕಾಲೇಜು, ವಸಂತನಗರದ ಮೌಂಟ್‌ ಕಾರ್ಮಲ್‌ ಕಾಲೇಜು, ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜು ಹಾಗೂ ಶೇಷಾದ್ರಿ ರಸ್ತೆಯ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜುಗಳನ್ನು ಗುರುತಿಸಲಾಗಿದೆ. 

ಮತ ಎಣಿಕೆ ಪ್ರಕ್ರಿಯೆ ಹೇಗೆ?: ಮತ ಏಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾಗಿ ಮೊದಲಿಗೆ ಅಂಚೆ ಮತಗಳ ಏಣಿಕೆಯಾಗಲಿದ್ದು, ಬೆಳಗ್ಗೆ 8.30ಕ್ಕೆ ಇವಿಎಂಗಳ ಮತ ಏಣಿಕೆಯಾಗಲಿದೆ. ಅದಕ್ಕೂ ಮೊದಲು ಎಲ್ಲ ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಇವಿಎಂಗಳಿಗೆ ಹಾಕಲಾಗಿರುವ ಮೊಹರು ತೆಗೆಯದಿರುವುದು ಖಚಿತಪಡಿಸಿಕೊಳ್ಳಲಾಗುತ್ತದೆ. ನಂತರದಲ್ಲಿ ಪ್ರತಿಯೊಂದು ವಿಧಾನಸಭೆಗೆ ನಿಗದಿಪಡಿಸಿರುವ 14 ಟೇಬಲ್‌ಗ‌ಳಲ್ಲಿ ಇವಿಎಂಗಳು ಪೂರೈಕೆಯಾಗಲಿದ್ದು, ಮತ ಏಣಿಕೆ ಪ್ರಕ್ರಿಯೆ ಆರಂಭವಾಗಲಿದೆ. 

ಚುನಾವಣಾಧಿಕಾರಿಗಳು ಮೊದಲಿಗೆ ಇವಿಎಂಗಳಲ್ಲಿ ದಾಖಲಾಗಿರುವ ಒಟ್ಟು ಮತಗಳನ್ನು ಪಡೆಯಲಿದ್ದು, ನಂತರದಲ್ಲಿ ಅಭ್ಯರ್ಥಿವಾರು ದಾಖಲಾಗಿರುವ ಮತಗಳ ವಿವರವನ್ನು ಬರೆದುಕೊಳ್ಳಲಿದ್ದಾರೆ. ಅಂತಿಮ ಸುತ್ತಿನ ನಂತರದಲ್ಲಿ ಯಾವುದೇ ದೋಷವಿಲ್ಲ ಎಂದು ಕಂಡಬಂದಾಗ ಚುನಾವಣಾಧಿಕಾರಿಗಳು ಅಭ್ಯರ್ಥಿಗಳು ಪಡೆದ ಮತಗಳ ಮಾಹಿತಿ ನೀಡಲಿದ್ದಾರೆ. 

ಸಿಬ್ಬಂದಿಗೆ ಕೊನೆಯ ಹಂತದ ತರಬೇತಿ: ಮತ ಏಣಿಕೆ ಪಕ್ರಿಯೆಗೆ ಆಯ್ಕೆಯಾಗಿರುವ ಸಿಬ್ಬಂದಿಗೆ ಈಗಾಗಲೇ ಎರಡು ಬಾರಿ ತರಬೇತಿ ನೀಡಲಾಗಿದ್ದು, ಸೋಮವಾರ ಸಂಜೆಯೂ ನಗರದ ವಿವಿಧ ಭಾಗಗಳಲ್ಲಿ ತರಬೇತಿ ಏರ್ಪಡಿಸಲಾಗಿತ್ತು. ನೂರಾರು ಸಿಬ್ಬಂದಿ ತರಬೇತಿ ಪಡೆಯಲು ಬಂದರೂ ತರಬೇತಿ ನೀಡಬೇಕಾದ ಚುನಾವಣಾಧಿಕಾರಿಗಳು ಬರದ ಹಿನ್ನೆಲೆಯಲ್ಲಿ ಸಿಬ್ಬಂದಿಯಲ್ಲಿ ಗೊಂದಲ ಉಂಟಾಗಿತ್ತು ಎಂದು ಕೆಲವರು ದೂರಿದ್ದಾರೆ. 
 
ಯಾವ ಕ್ಷೇತ್ರದ ಮತ ಏಣಿಕೆ ಎಲ್ಲಿ?: ಬಿಎಂಎಸ್‌ ಮಹಿಳಾ ಕಾಲೇಜು, ಬಸವನಗುಡಿ ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ 

Advertisement

ಮೌಂಟ್‌ ಕಾರ್ಮೆಲ್‌ ಕಾಲೇಜು, ವಸಂತನಗರ: ಕೆ.ಆರ್‌.ಪುರ, ಮಹಾಲಕ್ಷ್ಮಿ ಬಡಾವಣೆ, ಮಲ್ಲೇಶ್ವರ, ಹೆಬ್ಟಾಳ, ಪುಲಿಕೇಶಿನಗರ, ಸರ್ವಜ್ಞನಗರ, ಸಿ.ವಿ.ರಾಮನ್‌ ನಗರ

ಎಸ್‌ಎಸ್‌ಎಂಆರ್‌ವಿ ಕಾಲೇಜು, ಜಯನಗರ: ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿ.ಟಿ.ಎಂ.ಬಡಾವಣೆ, ಬೊಮ್ಮನಹಳ್ಳಿ

ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶೇಷಾದ್ರಿ ರಸ್ತೆ: ಯಲಹಂಕ, ಯಶವಂತಪುರ, ಟಿ.ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಆನೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next