Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸದನದಲ್ಲಿ ಅಂದು ಏನು ನಡೆಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಇದ್ದಕ್ಕಿದ್ದಂತೆ ರವಿ ತಮ್ಮ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಾರೆಂದು ಸಭಾಪತಿಯವರಿಗೆ ದೂರು ಕೊಡಲು ಹೋದರು. ಕಲಾಪ ಮುಂದೂಡಿಕೆ ಅನಂತರ ಊಟ ಮಾಡಿ ಬರುವಾಗ ರವಿ ಮೇಲೆ ದಾಳಿ ಆಯಿತು. ಮಾಹಿತಿ ನೀಡಲು ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಬರುವ ವೇಳೆಗೆ ಸಚಿವೆ ಹೆಬ್ಟಾಳ್ಕರ್ ಆಪ್ತ ಸಹಾ ಯ ಕ ಸೇರಿ 200ಕ್ಕೂ ಹೆಚ್ಚು ಜನ ನುಗ್ಗಿ ಸುವರ್ಣದ್ವಾರದ ಗೇಟ್‌ಗಳನ್ನು ಒದೆಯುತ್ತಿದ್ದರು ಎಂದರು.
ಹೊರಟ್ಟಿ ಅವರು ಎಡಿಜಿಪಿಯನ್ನು ಕರೆಸಿ, ರಕ್ಷಣೆ ಕೊಡಲು ಸೂಚಿಸಿದರು. ಹೊರಬರುವಷ್ಟರಲ್ಲಿ ಸಿ.ಟಿ. ರವಿಯನ್ನು ಪೊಲೀಸರು ಬೇರೆ ವಾಹನದಲ್ಲಿ ಎತ್ತಿಕೊಂಡು ಹೊರಟರು. ಭಯೋತ್ಪಾದಕರಿಗಿಂತ ಕೆಟ್ಟದಾಗಿ ನಡೆಸಿಕೊಂಡರು. ಸಭಾಪತಿಯವರನ್ನೂ ಕಾಂಗ್ರೆಸಿನವರು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಹೇಳಿದರು. ಡಿಸಿಎಂ ಅತ್ಯುತ್ಸಾಹ ತೋರುತ್ತಿರುವುದು ಏಕೆ ?
ಜಯಮಾಲಾ ಬಗ್ಗೆ ಹೆಬ್ಟಾಳ್ಕರ್ ಹೇಳಿದ್ದ ವೀಡಿಯೋ ಹರಿದಾಡುತ್ತಿದೆ. ಇದೇನಾ ಕಾಂಗ್ರೆಸ್ ಸಂಸ್ಕೃತಿ? ಕಾಂಗ್ರೆಸ್ ಸಂಸದೆಯಾಗಿದ್ದ ತೇಜಸ್ವಿನಿ ಗೌಡರನ್ನು ವೇದಿಕೆಯಿಂದ ಹೇಗೆ ಇಳಿಸಿದ್ದರು? ಅಂದು ಇದೇ ತೇಜಸ್ವಿನಿ ಕಾಂಗ್ರೆಸ್ ಅನ್ನು ದುಶ್ಯಾಸನರ ಪಕ್ಷ ಎಂದಿದ್ದರು. ಸ್ವತಃ ಸಿಎಂ ಸಿದ್ದರಾಮಯ್ಯ ಮಹಿಳೆಯ ದುಪ್ಪಟ ಕಿತ್ತು ಬಿಸಾಕಿದ್ದರು. ಇವೆಲ್ಲ ಮಹಿಳೆಯರಿಗೆ ಆದ ಅಪಮಾನ ಅಲ್ಲವೇ? ಯಾವ್ಯಾವ ಪ್ರಕರಣದಲ್ಲಿ ಡಿಸಿಎಂ ಶಿವಕುಮಾರ್ ಇಷ್ಟೊಂದು ಅತ್ಯುತ್ಸಾಹ ತೋರಿದ್ದಾರೆ? ಕಬ್ಬಿನ ಗದ್ದೆ, ಕ್ವಾರಿ ಬಳಿ ಸುತ್ತಿಸಿದ್ದು ಗೊತ್ತಿಲ್ಲ ಎಂದು ಸಿಎಂ, ಗೃಹ ಸಚಿವರು ಹೇಳುತ್ತಾರೆಂದರೆ ಪೊಲೀಸರಿಗೆ ಪ್ರತಿ ನಿಮಿಷಕ್ಕೂ ದೂರವಾಣಿ ಕರೆ ಮಾಡಿ ಹೇಳುತ್ತಿದ್ದವರು ಯಾರು ಎಂದು ಅವರು ಪ್ರಶ್ನಿಸಿದರು.