Advertisement

Council By Poll: ಉಡುಪಿ ಜಿಲ್ಲೆಯಲ್ಲಿ ಶೇ. 96.57 ಮತದಾನ; ಎಲ್ಲೂ ಶೇ.100 ಇಲ್ಲ

01:51 AM Oct 22, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ಶೇ.96. 57ರಷ್ಟು ಮತದಾನ ದಾಖಲಾಗಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಲಿಗ್ರಾಮ ಪ.ಪಂ. ಕಚೇರಿಯಲ್ಲಿ ಹಾಗೂ ಶಾಸಕರು ತಮ್ಮ ಕ್ಷೇತ್ರದ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಮತದಾನ ಮಾಡಿದರು.

Advertisement

ಜಿಲ್ಲೆಯ 158 ಮತಗಟ್ಟೆ ವ್ಯಾಪ್ತಿ ಯಲ್ಲಿ 1,195 ಪುರುಷ, 1,285 ಮಹಿಳಾ ಮತದಾರರು ಸೇರಿ ಒಟ್ಟು 2,480 ಮತದಾರರು ಪಟ್ಟಿಯಲ್ಲಿದ್ದರು. ಅವರಲ್ಲಿ 1,154 ಪುರುಷರು, 1,241 ಮಹಿಳೆಯರು ಸೇರಿದಂತೆ 2,395 ಮಂದಿ ಮತದಾನ ಮಾಡಿದರು. ಯಾವುದೇ ತಾಲೂಕಿನಲ್ಲೂ ಶೇ.100 ರಷ್ಟು ಮತದಾನವಾಗಿಲ್ಲ. ಕಾರ್ಕಳದಲ್ಲಿ ಶೇ.99.28, ಉಡುಪಿ, ಹೆಬ್ರಿಯಲ್ಲಿ ತಲಾ ಶೇ.99.18, ಬ್ರಹ್ಮಾವರದಲ್ಲಿ ಶೇ.98.83, ಕುಂದಾಪುರ ಶೇ.93.59 ಹಾಗೂ ಬೈಂದೂರಿನಲ್ಲಿ ಶೇ.88.80ರಷ್ಟು ಮತದಾನವಾಗಿದೆ.

ಬೈಂದೂರಿನಲ್ಲಿ 29, ಕುಂದಾಪುರದಲ್ಲಿ 17 ಸದಸ್ಯರು ಮತದಾನ ಮಾಡಿರಲಿಲ್ಲ. ಇಡೀ ಜಿಲ್ಲೆಯಲ್ಲಿ ಇದು ದೊಡ್ಡ ಸಂಖ್ಯೆ. ಅಧಿಕಾರಿಗಳ ಮನವೊಲಿಕೆಯಿಂದ ಕೆಲವರು ಮತದಾನ ಮಾಡಿದರೆ, ಇನ್ನು ಕೆಲವರು ಮಾಡಲಿಲ್ಲ. ಉಳಿದಂತೆ ಕಾಪುವಿನಲ್ಲಿ 7, ಬ್ರಹ್ಮಾವರದಲ್ಲಿ 5, ಉಡುಪಿಯಲ್ಲಿ 3, ಹೆಬ್ರಿಯಲ್ಲಿ 1 ಹಾಗೂ ಕಾರ್ಕಳದಲ್ಲಿ 3 ಸದಸ್ಯರು ಮತದಾನ ಮಾಡಿರಲಿಲ್ಲ.

ಜಡ್ಕಲ್‌, ಕೆರಾಡಿ ಗ್ರಾ.ಪಂ. ಸದಸ್ಯರಿಂದ ಮತದಾನ ಬಹಿಷ್ಕಾರ
ಕೊಲ್ಲೂರು: ಜಡ್ಕಲ್‌, ಕೆರಾಡಿ, ಗ್ರಾ.ಪಂ. ಸದಸ್ಯರು ಕಸ್ತೂರಿ ರಂಗನ್‌ ವರದಿ ಅನುಷ್ಠಾನದ ಬಗ್ಗೆ ವಿರೋಧ ವ್ಯಕ್ತಪಡಿಸಿ ಮತದಾನ ಬಹಿಷ್ಕರಿಸಿದರು.
ಚಿತ್ತೂರು ಗ್ರಾ.ಪಂ.ನ 8 ಮಂದಿ ಸದಸ್ಯರಲ್ಲಿ ಇಬ್ಬರು ಮಹಿಳೆಯರು, ಇಡೂರು ಗ್ರಾ.ಪಂ.ನ 12 ಮಂದಿ ಸದಸ್ಯರಲ್ಲಿ 8 ಮಂದಿ ಮತ ಚಲಾಯಿಸಿದ್ದರು. ವಂಡ್ಸೆ ಗ್ರಾ.ಪಂ.ನ ಎಲ್ಲ ಸದಸ್ಯರು ಮತ ಚಲಾಯಿಸುವುದರೊಡನೆ ಶೇ.100ರಷ್ಟು ಮತದಾನವಾಗಿದೆ.

ತಹಶೀಲ್ದಾರರ ಭೇಟಿ: ಬೈಂದೂರು ತಹಶೀಲ್ದಾರ್‌ ಪ್ರದೀಪ್‌ ಕುಮಾರ್‌ ಹಾಗೂ ತಾ.ಪಂ. ಕಾರ್ಯನಿರ್ವಹಣಾ ಧಿಕಾರಿ ಭಾರತಿ ಜಡ್ಕಲ್‌ ಗ್ರಾ.ಪಂ.ಗೆ ತೆರಳಿ ಸ್ಥಳೀಯ ಸಂಸ್ಥೆಗಳ ಪ್ರತಿಯೋರ್ವ ಸದಸ್ಯರು ಮತ ಚಲಾಯಿಸುವಂತೆ ವಿನಂತಿಸಿದರು. ಆದರೆ ಯಾರೊಬ್ಬರು ಮನವಿ ಬೆಂಬಲಿಸದೇ ಸಂಪೂರ್ಣವಾಗಿ ಮತದಾನ ಬಹಿಷ್ಕರಿಸಿ ತಮ್ಮ ಕಸ್ತೂರಿ ರಂಗನ್‌ ವರದಿ ಕೈ ಬಿಡುವಂತೆ ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next