ಮುಂಬೈ: ಎನ್‌ಸಿಬಿ ನಾಯಕ ಅಜಿತ್ ಪವಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಮೇಲೆ ಮಾಡಿದ್ದ ʻದುಬಾರಿ ಚಹಾ ಬಿಲ್ʼ ಆರೋಪಕ್ಕೆ ಮುಖ್ಯಮಂತ್ರಿ ಶಿಂಧೆ ಎದುರೇಟು ನೀಡುತ್ತಾ ʻಮನೆಗೆ ಬಂದವರಿಗೆ ಚಹಾವನ್ನೂ ನೀಡಬಾರದೇ.?ʼ ಎಂದು ಪ್ರಶ್ನಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಶಿಂಧೆ ನಿವಾಸದ ಚಹಾ ಬಿಲ್ 2 ಕೋಟಿ 68 ಲಕ್ಷ ರೂಪಾಯಿ ದಾಟಿದೆ ಎಂದು ಎನ್‌ಸಿಬಿ ನಾಯಕ ಅಜಿತ್ ಪವಾರ್ ಆರೋಪಿಸಿದ್ದರು.
ಅಜಿತ್ ಪವಾರ್ ಆರೋಪಕ್ಕೆ ಟಕ್ಕರ್ ನೀಡಿರುವ ಶಿಂಧೆ ,ʻಮನೆಗೆ ಬಂದವರಿಗೆ ಆತಿಥ್ಯ ನೀಡುವುದು ನಮ್ಮ ಸಂಪ್ರದಾಯ. ಎಷ್ಟೋ ಮಂದಿ ದೂರದ ಊರುಗಳಿಂದ ನನ್ನ ಭೇಟಿಗೆ ಬರುತ್ತಾರೆ. ಅವರಿಗೆ ಚಹಾ ಮತ್ತು ನೀರು ನೀಡುತ್ತೇವೆ. ಅವಷ್ಟೇ ಬಿಲ್‌ನಲ್ಲಿ ಸೇರಿದೆʼ ಎಂದು ಹೇಳಿದ್ದಾರೆ.
ʻನನ್ನನ್ನು ಭೇಟಿ ಮಾಡಲು ಬಂದವರಿಗೆ ಚಹಾವನ್ನಷ್ಟೇ ನೀಡುತ್ತೇವೆ ಹೊರತು ಬಿರಿಯಾನಿಯಲ್ಲ. ಉದ್ಧವ್ ಠಾಕ್ರೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ವ್ಯವಸ್ಥೆಗಳೆಲ್ಲವೂ ಆನ್‌ಲೈನ್ ಮೂಲಕವೇ ನಡೆದಿತ್ತು. ಆದರೂ ಠಾಕ್ರೆ ಇದಕ್ಕಾಗಿ 34 ಲಕ್ಷ ರೂ. ವ್ಯಯಿಸಿದ್ದಾರೆʼ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:
ಮೋದಿ- ಶಾ ದೇಶದ ಕೆಲಸ ಮಾಡುವುದು ಬಿಟ್ಟು ಚುನಾವಣಾ ಏಜೆಂಟ್ ಗಳಾಗಿದ್ದಾರೆ: ಸಿದ್ದರಾಮಯ್ಯ