Advertisement
ಪಾಲಿಸ್ಟರ್ ಮತ್ತು ರೇಯಾನ್‌ಗಿಂತ ಕಾಟನ್ ಬಟ್ಟೆ ಗಳು ಬೇಸಗೆಗೆ ಸೂಕ್ತ. ಬೆವರನ್ನು ಬೇಗನೆ ಹೀರಿ, ಬೇಗನೆ ಒಣವ ಕಾರಣದಿಂದಲೇ ಇದು ಎಲ್ಲರ ಅಚ್ಚು ಮೆಚ್ಚಿನ ದಿರಿಸು.
ತುಂಬು ತೋಳಿನ ಹತ್ತಿಯ ಸಡಿಲವಾದ ತೆಳು ಬಟ್ಟೆಗಳು ಸೂರ್ಯನ ಬಿಸಿಲಿನ ಶಾಖದಿಂದ ನಮ್ಮ ದೇಹವನ್ನು ರಕ್ಷಿ ಸುತ್ತದೆ. ನಮ್ಮ ದೇಹಕ್ಕೆ ಒಪ್ಪುವ ಮತ್ತು ಉತ್ತಮ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡುವುದು ಅತಿ ಮುಖ್ಯ. ಜರಿ ಬಟ್ಟೆಗಳು ಬೇಸಗೆಗೆ ಸೂಕ್ತವಲ್ಲ. ಇದರಿಂದ ಹೆಚ್ಚು ಸೆಕೆ ಉಂಟಾಗುತ್ತದೆ. ಸೀರೆ, ಚೂಡಿದಾರ್ ಯಾವುದೇ ಇರಲಿ ಹತ್ತಿ ಬಟ್ಟೆಯೇ ಬಲು ಸೊಗಸು.
Related Articles
ಗಾಢ ಬಣ್ಣದ ಉಡುಪುಗಳು ಬಿಸಿಲನ್ನು ಹೆಚ್ಚು ಹೀರಿಕೊಳ್ಳುತ್ತವೆ. ಹೀಗಾಗಿ ಬೇಸಗೆಯಲ್ಲಿ ಹೆಚ್ಚಾಗಿ ತಿಳಿ ಬಣ್ಣದ ಉಡುಪನ್ನು ಧರಿಸಿ. ಬಿಳಿ ಬಣ್ಣದ ಉಡುಪು ಹೆಚ್ಚು ಬಿಸಿಲನ್ನು ಹೀರಿಕೊಳ್ಳುವುದಿಲ್ಲ. ಹೀಗಾಗಿ ಬಿಳಿ, ತಿಳಿ ಗುಲಾಬಿ, ತಿಳಿ ಹಳದಿಯಂತಹ ಬಣ್ಣಗಳ ಬಟ್ಟೆಗಳನ್ನೇ ಆಯ್ದುಕೊಳ್ಳಿ. ಕಾಟನ್ ಬಟ್ಟೆಗಳೂ ನಾನಾ ಚಿತ್ತಾಕರ್ಷಕ ಡಿಸೈನ್‌ನಿಂದ ಇತ್ತೀಚೆಗೆ ಎಲ್ಲರ ಮನ ಸೆಳೆಯುತ್ತಿದೆ. ಧೋತಿ, ಪೈಜಾಮ, ಪ್ಯಾಂಟ್, ಟೀಶರ್ಟ್ ಇವೆಲ್ಲ ಪುರುಷರ ಆಯ್ಕೆಯಾದರೆ, ಹರೆಮ್, ಜೋಧ್ ಪುರಿಯಂತಹ ಪ್ಯಾಂಟ್‌ಗಳೊಂದಿಗೆ ಮಹಿಳೆಯರು ಕುರ್ತಾ, ಟೀಶರ್ಟ್ ಇಷ್ಟಪಡುತ್ತಾರೆ.
Advertisement
ಉದ್ದನೆಯ ಕಾಟನ್ ಸ್ಕರ್ಟ್‌ಗಳು ಬೇಸಗೆಗೆ ಧರಿಸಲು ಅನುಕೂಲಕರ ಮಾತ್ರ ವಲ್ಲ ಸ್ಟೈಲಿಶ್ ಆಗಿಯೂ ಕಾಣುತ್ತದೆ. ಟ್ರೌಶರ್, ಚೂಡಿದಾರ ಕೂಡ ಹಿತ ಕೊಡುತ್ತವೆ. ಲಕ್ನೋ ಕಲಾ ಕೌಶಲದ ಹತ್ತಿಯ ಚೂಡಿದಾರಗಳು ಭಾರತದ ಬೇಸಗೆಯ ದಿರಿಸಿಗಳೆಂದೇ ಪ್ರಸಿದ್ಧವಾಗಿವೆ. ಮನಸೆಳೆಯುವ ಕುಸುರಿ ಕೆಲಸವನ್ನು ಹೊಂದಿರುವ ಅತ್ಯಾಕರ್ಷಕವಾದ ಹತ್ತಿಯ ಗೌನ್‌ಗಳು ಶುಭಸ ಮಾರಂಭಗಳಿಗೆ ಹೆಚ್ಚು ಸೂಕ್ತವಾಗಿ ಹೊಂದಿಕೆಯಾಗುತ್ತದೆ.
ಬೇಡಿಕೆ ಅಧಿಕಬೇಸಗೆ ಬಂತೆಂದರೆ ಹತ್ತಿ ಬಟ್ಟೆಗಳ ಉದ್ಯಮ ಚುರುಗೊಳ್ಳುತ್ತದೆ. ಬೇಡಿಕೆ ಹೆಚ್ಚಾಗುವುದರಿಂದ ಉಡುಪುಗಳೂ ಕೊಂಚ ದುಬಾರಿಯಾಗುತ್ತದೆ. ಹಿಂದೆ ಕೈಮಗ್ಗ ಅಥವಾ ಚರಕದಿಂದ ತಯಾರಿಸುತ್ತಿದ್ದ ಬಟ್ಟೆಗಳು ಇಂದು ಯಂತ್ರದ ಮೂಲಕ ಉತ್ಪಾದಿಸಲ್ಪಡುತ್ತಿದೆ. ಮಾತ್ರವಲ್ಲದೆ ವಿದೇಶಗಳಿಗೆ ರಫ್ತಾಗುತ್ತಿದೆ. ಖಾದಿ ಚಮತಾರ್
ಬೇಸಗೆಗೆ ಒಪ್ಪುವ ದಿರಿಸಿನಲ್ಲಿ ಖಾದಿಯೂ ಒಂದು. ಇದರಲ್ಲೂ ಪುರುಷರು, ಸ್ತ್ರೀಯರಿಗಾಗಿ ಹಲವು ಆಯ್ಕೆಗಳಿವೆ. ಅತ್ಯಂತ ಸರಳ ಲುಕ್ ನೀಡುವ ಖಾದಿ ದಿರಿಸುಗಳು ಈಗಿನ ಟ್ರೆಂಡ್ ಕೂಡ ಹೌದು. ಭರತ್‌ರಾಜ್ ಕರ್ತಡ್ಕ