ಭಾರತ ಸರ್ಕಾರದ ಜವಳಿ ಇಲಾಖೆಯ ಸ್ವಾಮ್ಯದ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾರ್ಪೊàರೇಷನ್ ಆಫ್ ಇಂಡಿಯಾ ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಂಡಿದೆ. ದೇಶಿ ಮತ್ತು ಅಂತಾರಾಷ್ಟ್ರೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳು ಮೇಳದಲ್ಲಿ ಲಭ್ಯ. ಭಾರತ ದೇಶದ ಸಮೃದ್ಧ ಮತ್ತು ವೈವಿಧ್ಯಮಯ ಕಲಾಪ್ರಕಾರ ಮತ್ತು ಸಂಸ್ಕೃತಿ ಒಂದೇ ಸೂರಿನಡಿ ಕಾಣಬಹುದಾಗಿದೆ. ಸೀರೆಗಳು, ಶಾಲ್‌ಗಳು, ಡ್ರೆಸ್ ಜವಳಿಗಳು, ವಿಸ್ತಾರವಾದ ಶ್ರೇಣಿಯ ಜೈಪುರ್, ಗುಜರಾತ್‌ನ ಕೈಮಗ್ಗದ ಜವಳಿ ಮತ್ತು ಕಾಟನ್ ಸೀರೆಗಳು ಇಲ್ಲಿದ್ದು, ಲಕ್ನೋದ ಚಿಕನ್ ಕಸೂತಿ ಕುರ್ತಾಗಳು, ಸಿಲ್ಕ್ ಕುರ್ತಾಗಳು, ಜಾಕೆಟ್, ಸಿಲ್ಕ್ ಸ್ಕಾಫ್ì ಇಲ್ಲಿವೆ. ಅಲ್ಲದೆ ಆಭರಣಗಳು, ವರ್ಣಚಿತ್ರಗಳು, ಲೋಹದ ವಸ್ತುಗಳು, ಮರದ ಕೆತ್ತನೆಗಳನ್ನೂ ಪ್ರದರ್ಶನಕ್ಕಿಡಲಾಗಿದೆ.
ಎಲ್ಲಿ?: ಶ್ರೀನಿವಾಸ ಕಲ್ಯಾಣ ಮಹಲ್, ಟಿ. ಮರಿಯಪ್ಪ ರಸ್ತೆ, ಅಶೋಕಪಿಲ್ಲರ್ ಬಳಿ, ಜಯನಗರ 2ನೇ ಬ್ಲಾಕ್
ಯಾವಾಗ?: ಜ. 14 ವರೆಗೆ