Advertisement
“ಬೋಯಿಂಗ್ ಬಿಝಿನೆಸ್ ಜೆಟ್’ ಎನ್ನುವ ಹೆಸರಿನ ಈ ವಿಮಾನ, 6616 ಮೈಲಿಗಳಷ್ಟು ಎತ್ತರದಲ್ಲಿ ಹಾರಾಟ ನಡೆಸುತ್ತದೆ. ಇದರಲ್ಲಿ, ಎಲ್ಲಾ ಬಗೆಯ ಐಷಾರಾಮಿ ಸವಲತ್ತುಗಳು ಇವೆ. ವಿಮಾನ ಪ್ರಯಾಣದಲ್ಲಿ, ಎಕಾನಮಿ ಮತ್ತು ಬ್ಯುಸಿನೆಸ್ ಕ್ಲಾಸ್ ಎಂಬ ಬಗೆಗಳಿವೆ. ಸಾಮಾನ್ಯ ಜನರು ಎಕಾನಮಿ ಕ್ಲಾಸಿನಲ್ಲಿ, ಶ್ರೀಮಂತರು ಬಿಝಿನೆಸ್ ಕ್ಲಾಸಿನಲ್ಲಿ ಪ್ರಯಾಣಿಸುತ್ತಾರೆ. ಬಿಝಿನೆಸ್ ಕ್ಲಾಸಿನಲ್ಲಿ, ಕಾಲಿಡಲು ಸ್ವಲ್ಪ ಹೆಚ್ಚಿಗೆ ಜಾಗ ದೊರೆಯುತ್ತದೆ. ಆದರೆ ಈ “ಬೋಯಿಂಗ್ ಬಿಝಿನೆಸ್ ಜೆಟ್’ನಲ್ಲಿ, ಮಲಗುವ ಕೋಣೆಗಳೇ ಇವೆ. ಡೈನಿಂಗ್ ಟೇಬಲ್ ಕೂಡಾ ಇದೆ. ಇದರಲ್ಲಿ ಮಲಗಿಕೊಂಡು ಪ್ರಯಾಣಿಸುವವರು ಯಾರು ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಬಂದೇ ಬರುವುದು. ಅಂದಹಾಗೆ, “ಬೋಯಿಂಗ್ ಬಿಝಿನೆಸ್ ಜೆಟ್’ಪ್ರೈವೇಟ್ ಜೆಟ್ ಇದರಲ್ಲಿ ಏನಿಲ್ಲವೆಂದರೂ, 80 ಮಂದಿ ಪ್ರಯಾಣಿಸಬಹುದಾದಷ್ಟು ಜಾಗವಿದೆ. ಫೈವ್ ಸ್ಟಾರ್ ಹೋಟೆಲಿನಂತಿರುವ ಈ ವಿಮಾನ, ಮುಕೇಶ್ ಅಂಬಾನಿ ಅವರ ಬಳಿಯಿದೆ!
ಬೆಲೆ: 4.3 ಲಕ್ಷ ರೂ.
ಮಕ್ಕಳಿಗೆ ಚಾಕಲೇಟು ಎಂದರೆ ಬಹಳ ಇಷ್ಟ. ಮಕ್ಕಳಿಗೂ ಚಾಕ್ಲೆಟಿಗೂ ಇರುವ ನಂಟು ತುಂಬಾ ಹಳೆಯದು. ಇರಲಿ, ಫ್ಯಾಬೆಲ್ಲೆ ಚಾಕ್ಲೆಟ್ ಬ್ರ್ಯಾಡು, ನಮ್ಮ ಭಾರತದ್ದೇ ಆದ ಐಟಿಸಿ ಸಂಸ್ಥೆಯ ಅಂಗ. ಅಂಗಡಿಗಳಲ್ಲಿ ಈ ಬ್ರ್ಯಾಡಿನ ಚಾಕ್ಲೆಟುಗಳು 5 ರೂ.ನಿಂದ ನೂರಾರು ರೂ. ತನಕದ್ದು ದೊರೆಯುತ್ತವೆ. ಆದರೆ, ಕೆಲವೆಡೆ ಮಾತ್ರವೇ ಸಿಗುವ ದುಬಾರಿ ಚಾಕ್ಲೆಟನ್ನು ಸಂಸ್ಥೆ ಪರಿಚಯಿಸಿತ್ತು. “ಜೀವನ ಚಕ್ರ’ ಎನ್ನುವ ಕಾನ್ಸೆಪ್ಟ್ ಅಡಿ, ಮೂರು ಜೊತೆಯಾಗಿ ಬರುವ ಚಾಕ್ಲೆಟ್ ಅನ್ನು ಸಂಸ್ಥೆ ಬಿಡುಗಡೆಗೊಳಿಸಿತ್ತು. ಒಂದು ಕೆ.ಜಿ. ಚಾಕ್ಲೆಟಿಗೆ 4.3 ಲಕ್ಷ ರೂ. ನಿಗದಿ ಪಡಿಸಲಾಗಿತ್ತು. ಎಷ್ಟು ಮಂದಿ ಇದನ್ನು ಕೊಂಡರು ಎಂಬ ಬಗ್ಗೆ ಮಾಹಿತಿ ಇಲ್ಲ.