Advertisement

ಗ್ರಾಹಕರ ಜೇಬಿಗೆ ಕತ್ತರಿ; ದಿನದಿಂದ ದಿನಕ್ಕೆ ತರಕಾರಿ ಬೆಲೆ ಗಗನಮುಖಿ

03:55 PM Jun 21, 2023 | Team Udayavani |

ಹುಬ್ಬಳ್ಳಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತರಕಾರಿಗಳ ಬೆಲೆಗಳ ಗಗನಮುಖೀಯಾಗಿದೆ. ಕಳೆದ 10 ದಿನಗಳಿಂದ ಏರಿಕೆ ಕಂಡ ತರಕಾರಿ ದರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಳೆ ಇಲ್ಲದೇ ತರಕಾರಿ ಬೆಳೆಗಳ ಇಳುವರಿ ಕುಸಿತ ಕಂಡಿದ್ದು, ಮಾರುಕಟ್ಟೆಗೆ ಪೂರೈಕೆಯಾಗುವ ತರಕಾರಿ ಪ್ರಮಾಣ ಗಣನೀಯವಾಗಿ ತಗ್ಗಿದೆ. ಹೀಗಾಗಿ ದರ ದುಬಾರಿಯಾಗಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.

Advertisement

ಉತ್ತಮ ಗುಣಮಟ್ಟದ ಕ್ಯಾರೆಟ್‌ ದರ ಕೆಜಿಗೆ 40 ರೂ.ಇದ್ದದ್ದು ಇಂದು 60- 80 ರೂ.ಗಳಾಗಿದೆ. ಬದನೆಕಾಯಿ 50 ರೂ.ಇದ್ದದ್ದು 70-80 ರೂ. ಗಳಾಗಿವೆ. ಸೌತೆಕಾಯಿ 60 ರೂ.ಗಳಿದ್ದು, ಇದೀಗ 80-100 ರೂ.ಗಳಾಗಿವೆ. ಡೊಣ್ಣ ಮೆಣಸಿನಕಾಯಿ 60 ರೂ.ಗಳಿದ್ದದ್ದು 80 ರೂ.ಗಳಾಗಿದೆ. ಹಸಿ ಮೆಣಸಿನಕಾಯಿ 60 ರೂ.ಗಳಿದ್ದದ್ದು, 80-100 ಗಡಿ ತಲುಪಿದೆ. ಟೊಮಾಟೊ 20 ರೂ.ಗಳಿರುವುದು ಇದೀಗ 50 ರೂ.ಗಳಿಗೆ ತಲುಪಿದೆ. ಇನ್ನು ಪಲ್ಯಗಳು ದರವೂ ಏರಿಕೆಯಾಗಿದ್ದು, ಕೋತಂಬರಿ 10 ರೂ.ಗಳಿಗೆ ಎರಡು ಸಿವುಡು ಎನ್ನುತ್ತಿದ್ದವರು ಇಂದು 25 ರೂ.ಗಳಿಗೆ ಒಂದು ಎನ್ನುತ್ತಿದ್ದಾರೆ. ಅದೇ ರೀತಿ ಕಿರಕಸಾಲಿ 10 ರೂ.ಗಳಿಗೆ ಎರಡು ಇರುವುದು, ಇದೀಗ ಒಂದು ಆಗಿದೆ. ರಾಜಗಿರಿ, ಪಾಲಕ, ಪುದಿನಾ ಸೇರಿದಂತೆ ಎಲ್ಲ ಸೊಪ್ಪುಗಳ ದರವೂ ಒಂದು ಪಟ್ಟು, ಎರಡು ಪಟ್ಟು ಏರಿಕೆಯಾಗಿರುವುದು ಕಂಡು ಬಂದಿದೆ.

ಆವಕ ಕಡಿಮೆ: ಎಂದಿನಂತೆ ಮಾರುಕಟ್ಟೆಗೆ ಬರುತ್ತಿದ್ದ ತರಕಾರಿಗಳಲ್ಲಿ ಇಳಿಕೆ ಕಂಡಿರುವುದರಿಂದ ದರದಲ್ಲಿ ಏರಿಕೆ ಕಂಡಿದೆ. ಆವಕ ಹೆಚ್ಚಾದಲ್ಲಿ ದರದಲ್ಲಿ ಕೊಂಚು ಇಳಿಕೆ ಕಂಡು ಬರಬಹುದು. ಆದರೆ ಸದ್ಯ ಮಳೆಯ ಕೊರತೆ ಹಾಗೂ ನೀರಿನ ಮಿತವ್ಯಯದಿಂದ ತರಕಾರಿ ಸೇರಿದಂತೆ ಸೊಪ್ಪುಗಳಲ್ಲಿ ದರ ಏರಿಕೆ ಕಂಡು ಬಂದಿದೆ.

ಕಳೆದ 10-15 ದಿನಗಳಿಂದ ದಿನದಿಂದ ದಿನಕ್ಕೆ ತರಕಾರಿ ದರಗಳು ಏರಿಕೆ ಕಾಣುತ್ತಿದ್ದು, ಕಳೆದ 10 ದಿನಗಳ ಹಿಂದೆ ಕೋತಂಬರಿ 10 ರೂ.ಗೆ ಒಂದು ಅಥವಾ ಎರಡು ಇರುವುದು ಇಂದು 25 ರೂ.ಗಳಿಗೆ ಒಂದಾಗಿದೆ. ಬದನೆಕಾಯಿ, ಸೌತೆಕಾಯಿ, ಕ್ಯಾರೆಟ್‌, ಹಿರೇಹಾಕಿ, ಬಿನ್ಸ್‌, ಪಡವಲಕಾಯಿ, ಚವಳಿಕಾಯಿ, ಬೆಂಡೆಕಾಯಿ ಸೇರಿದಂತೆ ಎಲ್ಲದರ ದರವೂ 30 ರಿಂದ 40 ರೂ.ಗಳಷ್ಟು ಏರಿಕೆಯಾಗಿದೆ.
ಗಂಗವ್ವ ಧಾರವಾಡ, ಸಾರ್ವಜನಿಕರು

ಎಂದಿನಂತೆ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ನೀರಸೌತೆ, ಅವರೆಕಾಯಿ ದರ ದುಪ್ಪಟ್ಟಾಗಿದೆ. ಕೊತ್ತಂಬರಿ, ಟೊಮೆಟೊ, ಬೀ®Õ… ಸೇರಿದಂತೆ ಎಲ್ಲ ತರಕಾರಿ, ಸೊಪ್ಪುಗಳ ದರ ತುಂಬಾ ಏರಿಕೆಯಾಗಿವೆ. ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವ ಕಾರಣ ಸಹಜವಾಗಿಯೇ ದರ ಏರಿಕೆಯಾಗಿದೆ. ಮಳೆಯಾದಲ್ಲಿ ಕೊಂಚು ದರ ಇಳಿಕೆ ಕಾಣಬಹುದು.
ವಿಜಯಲಕ್ಷ್ಮಿಹಿರೇಮಠ ಹಾಗೂ ಸಿದ್ದಮ್ಮ, ತರಕಾರಿ ವ್ಯಾಪಾರಿಗಳು

Advertisement

ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next